ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆ, ಕಿನ್ನಾಳ, ರಾಘವೇಂದ್ರ ಸ್ವಾಮಿಗಳ ಮಠ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಹನುಮಂತರಾವ ಬಂಡಿ (ಕುಲಕರ್ಣಿ) ಸಂಗೀತ ಕಲಾವಿದರು ಇವರ ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ ನ. ೨೭ ರಂದು ಸಂಜೆ ೬ ಗಂಟೆಗೆ ಕೊಪ್ಪಳದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ.
ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಹನುಮಸಾಗರದ ಹಿರಿಯ ಸಂಗೀತ ಕಲಾವಿದ ವಾಜೇಂದ್ರಾಚಾರ ಜೋಷಿ ಅವರು ಸಮಾರಂಭದ ಉದ್ಘಾಟನೆ ಮಾಡುವರು. ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ಅಧ್ಯಕ್ಷತೆ ವಹಿಸುವರು. ರಂಗನಾಥಾಚಾರ ಹುಲಗಿ, ನ್ಯಾಯವಾದಿ ವಿ.ಎಂ. ಭೂಸನೂರಮಠ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಡಿಹೆಚ್‌ಓ ಡಾ. ಮಹದೇವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್, ಗಣ್ಯರಾದ ಶೈಲಪ್ಪ ಅಂಗಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದ ಅಂಗವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಎಂ. ವೆಂಕಟೇಶಕುಮಾರ ಧಾರವಾಡ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕಿನ್ನಾಳದ ಸುಧಾ ರಾಮಾಚಾರ ಅಡವಿ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸುವರು.
0 comments:
Post a Comment