ಈ ಸಮಾಜದ ನೊಂದವರ ಪರವಾಗಿ ಕವಿ ರಚನೆ ಮಾಡುವ ಕಾವ್ಯ ಅದು ಹೋರಾಟದ ದ್ವನಿ ಆಗಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕರೆನೀಡಿದರು.
ಅವರು ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜನ ಸಹಯೋಗ ಬೆಂಗಳೂರ ಸಹಯೋಗದೊಂದಿದೆ ಆರಂಭಗೊಂಡ ನಾಲ್ಕು ದಿನಗಳ ರಾಜ್ಯ ಮಟ್ಟದ ಹೋರಾಟದ ಹಾಡಿನ ತರಭೇತಿ ಕಾರ್ಯಗಾರವನ್ನು ಕನಕಗಿರಿಯ ಸಮೂಹ ಸಂಸ್ಥೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ದಿನದಿಂದ ದಿನಕ್ಕೆ ನಗರದ ಸ್ಲಂ ಜನರ ಮೇಲೆ ಸಮಸ್ಯೆಗಳು ಸವಾಲಾಗಿ ಕಾಡುತ್ತಿವೆ, ಬದುಕುವ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡುವಾಗ ಕವಿಯ ಕಾವ್ಯದ ದ್ವನಿಗಳು ಹಾಡಿನ ಮೂಲಕ ಹಕ್ಕನ್ನು ಪ್ರತಿಪಾಧಿಸುತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಭಾರದ್ವಜ ಗಂಗಾವತಿ ಅವರು ಮಾತನಡುತ್ತಾ ದುಡಿಯುವ ಜನರ ಮೇಲೆ ಸರ್ಕಾರದ ಕಾಳಜಿ ಕಡಿಮೆಯಾಗಿದ್ದು ಮತ್ತು ಇತ್ತಿಚಿನ ದಿನಮಾನಗಳಲ್ಲಿ ನಗರದ ಬಡವರನ್ನು ಕೀಳಾಗಿ ಮತ್ತು ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗುತ್ತಿ
ದೆ ಎಂದು ವಿಷಾದ ವ್ಯಕ್ತಪಡಿಸಿದರು. ಅದಕ್ಕಾಗಿ ಶ್ರಮ ಜೀವಿಗಳು ಸಂಘಟಿತರಾಗಿ ಹಕ್ಕುಗಳನ್ನು ಪಡೆಯಲು ಹೋರಾಟಕ್ಕೆ ಇಳಿಯಬೇಕೆಂದು ತಿಳಿಸಿದರು.
ಜನಕವಿ ಸಿ ದಾನಪ್ಪ ಅವರು ಮಾತನಾಡುತ್ತಾ ಸಮಸ್ಯೆಗಳಿಗೆ ಮೂಲ ಹುಡುಕುವಂತಹ ಮನಸ್ಥಿತಿ ಹೋರಾಟಗಾರನಿಗೂ ಮತ್ತು ಕವಿಗೂ ಇರಬೇಕೆಂದು ಹೇಳಿದರು. ಅಲ್ಲಾಗಿರಿರಾಜ ಕನಕಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಬೀರಪ್ಪ ವಹಿಸಿಕೊಂಡಿದ್ದರು. ರಾಘವೇಂದ್ರ ಟಿ ಸ್ವಾಗತಿಸಿದರು. ನಾಗರಾಜ ಗುಲಬುರ್ಗ ವಂದಿಸಿದರು.
0 comments:
Post a Comment