ಕೊಪ್ಪಳ ೦೯ :ಸಂಚಿಸಾರಂಗ ತಂಡ ಗುಲಬುರ್ಗಾದವರಿಂದ ದಿ:೦೮-೧೧-೨೦೧೩ ರಂದು ಸಂಜೆ : ೭-೦೦ಗಂಟೆಗೆ ಕೊಪ್ಪಳದ ಸರಕಾರಿ ಬಾಲಿಕೆಯರ ಪದವಿಪೂರ್ವ ಕಾಲೇಜಿ ಒಳಾಂಗಣದಲ್ಲಿ ಸನ್ಮಾನ್ಯ ಸಚಿವರ ಸಾವು ಎಂಬ ನಾಟಕ ಪ್ರದರ್ಶನಗೊಂಡಿತು. ಈ ಪ್ರದರ್ಶನದ ವ್ಯವಸ್ಥೆಯನ್ನು ಶಕ್ತಿ ಶಾರದೆಯ ಮೇಳ ಭಾಗ್ಯನಗರ ಮತ್ತು ಜ್ಞಾನ ಬಂಧು ಶಾಲೆಯ ಸಹಯೋಗದಲ್ಲಿ ಸಂಚಾಲಕರಾದ ಡಿ.ಎಂ.ಬಡಿಗೇರ ಉಪನ್ಯಾಸಕರು ಮತ್ತು ದಾನಪ್ಪ ಜಿ.ಕವಲೂರ ತಾ.ಪಂ.ಸದಸ್ಯರು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು.
ಸಾನೇಹಳ್ಳಿಯ ಶಿವಸಂಚಾರದ ಸ್ಪರ್ಧೆಗೆ ಆಯ್ಕೆಯಾದ ಈ ನಾಟಕವನ್ನು ತುಂಬ ಕಡಿಮೆ ಅವಧಿಯಲ್ಲಿ ಕೊಪ್ಪಳದಲ್ಲಿ ಪ್ರದರ್ಶನಗೊಳ್ಳುವಂತೆ ಬಡಿಗೇರ ಮತ್ತು ದಾನಪ್ಪ ನವರು ಶ್ರಮಿಸಿದ್ದರು. ಅನೇಕ ರಂಗಾಸಕ್ತರು ನಾಟಕವನ್ನು ನೋಡಿ ಆನಂದಿಸಿದರು. ಇಜಿಪ್ತಿನ ಇಂಗ್ಲೀಷ್ ಲೇಖಕಿಯ ಕೃತಿಯೊಂದರ ಕನ್ನಡ ರಂಗ ರೂಪಾಂತರ ಇದಾಗಿತ್ತು. ನವಲ್ ಸಾದವಿಯವರ ಡೆತ್ ಆಫ್ ಮಿನಿಷ್ಟರ್ ಎಂಬ ಕೃತಿಯನ್ನು ಗುಲಬುರ್ಗಾದ ಸಾಹಿತಿ ಆರ್. ಶಂಕರಯ್ಯ ಘಂಟಿಯವರು ನಾಟಕ ರೂಪಕ್ಕೆ ತಂದು ನಿರ್ದೇಶಿಸಿದ್ದರು.
ಸಮಕಾಲೀನ ರಾಜಕೀಯ ಮೌಲ್ಯಗಳ ವಿಶ್ಲೇಷಣೆ ಕೃತಿಯ ವಸ್ತುವಾಗಿತ್ತು. ಅಪಮೌಲ್ಯಗೊಂಡ ರಾಜಕೀಯ ಜೋತೆಯಲ್ಲಿ ಪತ್ರಿಕಾಧರ್ಮದ ಅಧಃ ಪತನ, ಮಹಿಳಾ ಶೋಷಣೆ ನಾಟಕದ ಹೂರಣವಾಗಿತ್ತು. ಸೂಷ್ಮ ಮನಸ್ಸಿನ ರಾಜಕಾರಣಿ ಇಂಥ ವ್ಯವಸ್ಥೆಯಲ್ಲಿ ಇದ್ದೂ ಸತ್ತಂತಾಗುವ ಭಾವ ನಾಟಕ ತೋರಿಸುತ್ತಿತ್ತು.
ಕುಕನೂರಿನ ಖ್ಯಾತ ರಂಗ ಕಲಾವಿದ ಬಾಬಣ್ಣ ಕಲ್ಮನಿಯವರು ನಾಟಕವನ್ನು ತಮ್ಮಟೆ ಬಡಿಯುವ ಮೂಲಕ ಉದ್ಘಾಟಿಸಿ ಪ್ರೇಕ್ಷಕರು ತಮ್ಮ ಬಗ್ಗೆ ಇರಿಸಿಕೊಂಡ ಅಭಿಮಾನವನ್ನು ನೆನೆಪಿಸಿಕೊಂಡರು. ಅತಿಥಿಯಾಗಿ ಆಗಮಿಸಿದ ವಿಠ್ಠಪ್ಪ ಗೋರಂಟ್ಲಿಯವರು ನಾಟಕ ಸಾಹಿತ್ಯ ಬೆಳವಣಿಗೆಯ ಕುರಿತು ಅನೇಕ ಮಹತ್ವದ ಮಾತುಗಳನ್ನಾಡಿದರು. ಇನ್ನೊಬ್ಬ ಅತಿಥಿ ಪ್ರೊ. ಅಲ್ಲಮಪ್ರಭು ಬೆಟ್ಟದೂರವರು ನಾಟಕ ಲಲಿತ ಕಲೆಯ ಎಲ್ಲ ಪ್ರಕಾರಗಳನ್ನು ತನ್ನಲ್ಲಿ ತುಂಬಿಕೊಂಡಿರುವದರಿಂದ ಸಾಹಿತ್ಯದ ಪ್ರಕಾರಗಳಲ್ಲಿ ರಂಗಭೂಮಿಯೇ ಸಶಕ್ತವಾದುದು ಎಂದು ಹೇಳಿದರಲ್ಲದೆ ಕಲಾವಿದರ ಉತ್ತಮ ಅಭಿನಯವನ್ನು ಹೊಗಳಿದರು. ಉತ್ತಮ ನಿರ್ದೇಶನ, ಹಿತ-ಮಿತವಾದ ಸಂಗೀತ ದಿಂದ ನಾಟಕ ಪ್ರೇಕ್ಷಕರ ಮೇಲೆ ಉತ್ತಮ ಪರಿಣಾಮ ಬೀರಿತು. ಎಂದರು.
ಈ ನಾಟಕದ ಪ್ರದರ್ಶನಕ್ಕೆ ಎಲ್ಲ ರೀತಿಯ ಸಹಕಾರ ನೀಡಿ, ಉದ್ಘಾಟನೆಯ ಕಾರ‍್ಯಕ್ರಮದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ವ್ಹಿ.ಬಿ.ರಡ್ಡೇರವರು.
0 comments:
Post a Comment