PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಶಾಂತಿ, ಸಹಬಾಳ್ವೆ, ಸಾಮರಸ್ಯಕ್ಕೆ ಹೆಸರಾದ ನಾಡಿನಲ್ಲಿ ಜಾತಿ - ಜಾತಿಗಳ, ಧರ್ಮ - ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಒಳಸಂಚು ನಡೆದಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಕಿಡಿಕಾರಿದ್ದಾರೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕಂಪಿಯಲ್ಲಿ ಹಾಲುಮತ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕ ಅನಾವರಣ ಹಾಗೂ ಕನಕ ಸಾಂಸ್ಕೃತಿಕ ಪರಿಷತ್ ಹಮ್ಮಿಕೊಂಡಿರುವ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಕುಲ ಕುಲವೆಂದು ಹೊಡೆದಾಡದಿರಿ ಎಂದು ವಿಶ್ವಕ್ಕೆ ಸಹಬಾಳ್ವೆಯ ಸಂದೇಶ ಸಾರಿದ ಕನಕದಾಸರ ಜೀವನ ಎಲ್ಲರಿಗೂ ಮಾದರಿ. ಹಾಲುಮತ ಸಮುದಾಯ ಯಾವ ಸಮುದಾಯದೊಂದಿಗೂ ಪೈಪೋಟಿಗೆ ಇಳಿದಿಲ್ಲ. ಎಲ್ಲ ಸಮುದಾಯದ ಸಹಕಾರದೊಂದಿಗೆ ಬದುಕುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಜಾತಿ ಹಾಗೂ ಧರ್ಮಗಳ ನಡುವೆ ವೈಮನಸ್ಯ ಉಂಟು ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಸಂಚು -ಲಿಸುವುದಿಲ್ಲ ಎಂದರು. 
ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿ, ಹಾಲುಮತ ಸಮಾಜದ ಜನರದ್ದು ಹಾಲಿನಂತಹ ಮನಸ್ಸು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಕೆಲವರ ಷಡ್ಯಂತ್ರದಿಂದ ದೂರವಾಗಬೇಕಾಯಿತು. ಆದರೆ, ನಾವಿಬ್ಬರೂ ಎರಡು ದೇಹ , ಒಂದೇ ಮನಸ್ಸು ಎಂಬಂತೆ ಬದುಕುತ್ತಿದ್ದೇವೆ. ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದರೂ ಭಾವನಾತ್ಮಕವಾಗಿ ಒಂದೇ ತಾಯಿ ಮಕ್ಕಳಂತಿದ್ದೇವೆ ಎಂದರು. 
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಹಾಲುಮತ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ರಂಗದಲ್ಲಿ ಹಿಂದುಳಿದಿದೆ. ಒಬ್ಬ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಸಾಲದು. ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕು. ಶಿಕ್ಷಣದಿಂದ ಮಾತ್ರ ಜಾಗೃತಿ ಸಾಧ್ಯ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದರು.
ಕಾಗಿನೆಲೆ ಕನಕಗುರು ಪೀಠದ ಧರ್ಮದರ್ಶಿ ಹನುಮಂತಪ್ಪ ಅಂಗಡಿ ಮಾತನಾಡಿ, ೧೯೯೧ರಲ್ಲಿ ನಡೆದ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ ಬಳಿಕ ಈ ಭಾಗದ ಹಾಲುಮತ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿತು. ಆದರೆ, ರಾಜಕೀಯದ ಜೊತೆಗೆ ಶೈಕ್ಷಣಿಕವಾಗಿ ಸಮುದಾಯ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು. 
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ಪಂ. ಸದಸ್ಯರಾದ ವೀರೇಶ ಸಾಲೋಣಿ, ವಿಜಯಲಕ್ಷ್ಮಿ ರಾಮಕೃಷ್ಣ, ತಾ.ಪಂ. ಸದಸ್ಯ ರುದ್ರಪ್ಪ ಉಣ್ಣಿಕುರಿ, ಕೊಪ್ಪಳ ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಗಂಗಾವತಿ ತಾಲೂಕು ಅಧ್ಯಕ್ಷ ಕೆ.ಮಂಜುನಾಥ, ಗಂಗಾವತಿ ಹಾಲುಮತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರುದ್ರೇಶ ಡ್ಯಾಗಿ, ಕನಕ ಸಾಂಸ್ಕೃತಿಕ ಪರಿಷತ್‌ನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಅಂಡಗಿ, ಮುಖಂಡರಾದ ದುರಗಪ್ಪ ಬಾಳಗೊಂಡರ್, ಯಮನೂರಪ್ಪ ಗಬ್ಬೂರ ಸೇರಿದಂತೆ ಹಲವರು ಇದ್ದರು. 


Advertisement

0 comments:

Post a Comment

 
Top