PLEASE LOGIN TO KANNADANET.COM FOR REGULAR NEWS-UPDATES

ಡಿಸೆಂಬರ್ ೨೭, ೨೦೧೩ ರಂದು 
ಕೊಪ್ಪಳ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಅತಿಥಿ ಉಪನ್ಯಾಸಕರ ಸೇವಾಭದ್ರತೆ, ಖಾಯಾಂತಿ, ವೇತನ ಹೆಚ್ಚಳ, ವಯೋಮಿತಿ ಮೀರುತ್ತಿರುವವರಿಗೆ ನೇಮಕಾತಿಯಲ್ಲಿ ಆದ್ಯತೆ, ಮೊದಲಾದ  ಬೇಡಿಕೆಗಳ  ಈಡೇರಿಕೆಗಾಗಿ  ಮನವಿ, ಪ್ರತಿಭಟನೆ  ಹಾಗೂ ಸಮಾವೇಶಗಳ ಮೂಲಕ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸುತ್ತಾ  ಬಂದಿದ್ದರೂ  ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸುತ್ತಾ ಬಂದಿದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯಗಳ ಬಗ್ಗೆ ಚರ್ಚಿಸಿ, ಬೇಡಿಕೆಗಳನ್ನು  ಈಡೇರಿಸಲು ಎಲ್ಲಾ ಶಾಸಕರಿಗೂ ಅತಿಥಿ ಉಪನ್ಯಾಸಕರ ಹಕ್ಕೊತ್ತಾಯಗಳ ಮನವಿ ಪತ್ರಗಳನ್ನು  ವಿವಿಧ ಸಂಘಟನೆಗಳಿಂದ ಸಲ್ಲಿಸಿಸಲಾಗುವದು. ಒಂದು ವೇಳೆ ಸರ್ಕಾರ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ  ಬೇಡಿಕೆಗನ್ನು ಚರ್ಚಿಸಿ ಈಡೇರಿಸದಿದ್ದರೆ ಜನೆವರಿ ೨೧, ೨೦೧೪ ರಿಂದ ತರಗತಿಗಳನ್ನು ಬಹಿಷ್ಕರಿಸಿ ಅನಿರ್ಧಿಷ್ಟಾವಧಿ  ಧರಣಿ ಹಮ್ಮಿಕೊಳ್ಳಲಾಗುತ್ತದೆಯೆಂದು  ರಾಜ್ಯ ಡಿ.ವಾಯ್.ಎಫ್.ಐ ,  ರಾಜ್ಯ ಎಸ್ ಎಫ್.ಐ , ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳ ಅತಿಥಿ ಉಪನ್ಯಾಸಕರ ಸಂಘ ಬೆಂಗಳೂರು, ಕೊಪ್ಪಳ ಜಿಲ್ಲಾ ಘಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳ ಅತಿಥಿ ಉಪನ್ಯಾಸಕರ ಸಂಘಗಳು ಎಚ್ಚರಿಸಿವೆ. ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ  ಸರ್ಕಾರದ ಗಮನ ಸೆಳೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಜಿಲ್ಲೆಯಾದ್ಯಂತ ಅತಿಥಿ ಉಪನ್ಯಾಸಕರು ಡಿಸೆಂಬರ್ ೨೭, ೨೦೧೩ ರಂದು ಬೆಳಿಗ್ಗೆ ೬ ಗಂಟೆಗೆ ಹೊರಡುವ ಹರಿಪ್ರಿಯ ರೈಲಿಗೆ  ಹೊರಡುವ ವ್ಯವಸ್ಥೆ ಮಾಡಲಾಗಿದೆ.  ಅಲ್ಲಿ ಎಲ್ಲ ಅತಿಥಿ ಉಪನ್ಯಾಸಕರಿಗೆ  ಉಚಿತ ಪಾಸುಗಳನ್ನು  ನೀಡಲಾಗುತ್ತದೆ. ಎಲ್ಲ ಅತಿಥಿ ಉಪನ್ಯಾಸಕರು  ಕಡ್ಡಾಯವಾಗಿ  ಭಾಗವಹಿಸಬೇಕೆಂದು ಕೊಪ್ಪಳ ಜಿಲ್ಲಾ ಘಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳ ಅತಿಥಿ ಉಪನ್ಯಾಸಕರ ಸಂಘ( ರಿ) ದ ಹಾಗೂ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕರಾದ ವೀರಣ್ಣ ಸಜ್ಜನರ ಹಾಗೂ ಸದಸ್ಯರಾದ ರವಿ ಹಿರೇಮಠ, ಕಲ್ಲೇಶ ಅಬ್ಬೀಗೇರಿ, ಬಸವರಾಜ ಹುಳಕಣ್ಣರ, ಸಂತೋಷಿ ಬೆಲ್ಲದ ತಿಳಿಸಿದ್ದಾg. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೪೪೯೨೧೦೯೩೮,೯೭೪೦೦೩೫೫೬೨ ಸಂಪರ್ಕಿಸಬಹುದು.

Advertisement

0 comments:

Post a Comment

 
Top