PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ; ಶಿಕ್ಷಕರಲ್ಲಿರುವ ಪ್ರತಿಭೆ ಅರಳಲು ಸಹಪಠ್ಯ ಚಟುವಟಿಕೆಗಳು ಅವಶ್ಯ ಎಂದು ಪ್ರೌಢ ಶಾಲಾ ಸಹಶಿಕ್ಷಕರಾದ ಹೆಚ್.ಎಸ್.ಶಿವರೆಡ್ಡಿ ಹೇಳಿದರು . 
                    ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ , ಮಕ್ಕಳಲ್ಲಿರು ಪ್ರತಿಭೆಯನ್ನು ಗುರುತಿಸಲು ಸರ್ಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಲ್ಲಿ ಇರುವ ಹಲವಾರು ಪ್ರತಿಭೆಗಳನ್ನು ಹೊರತರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಒಂದು ಕಾರ್ಯಕ್ರಮ ಶಿಕ್ಷಕರ ಪ್ರತಿಭೆಯನ್ನು ಹೊರಹಾಕಲು ಸಹಾಯಕವಾಗುತ್ತದೆ.
          ನಂತರ ಮುಖ್ಯಅತಿಥಿಗಳಾಗಿ ಆಗಮಿಸಿದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಪ್ಪಳ ತಾಲ್ಲೂಕಾ ಸಂಘದ ಅಧ್ಯಕ್ಷರಾದ ಎಸ್.ಬಿ.ಕುರಿ ಮಾತನಾಡಿ , ಇಂದಿನ ದಿನಗಳಲ್ಲಿ ಶಿಕ್ಷಕರಾಗುವ ಮುಂಚೆ ತರಬೇತಿ ಪಡೆಯುವ ಹಂತದಲ್ಲಿ ಎಲ್ಲಾರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಶಿಕ್ಷಕರು ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ, ಆದರೆ ಶಿಕ್ಷಕರಾಗಿ ನೇಮಕವಾದಾಗ  ಇಂತಹ ಚಟುವಟಿಕೆಯಲ್ಲಿ ಭಾಗವಹಿಸುವ ಆಸಕ್ತಿ ಏಕೆ ಕಡಿಮೆಯಾಗುತ್ತದೆ? ಎಂಬುದನ್ನು ನಾವೆಲ್ಲರು ಚಿಂತನೆ ಮಾಡಬೇಕಿದೆ.
ಪ್ರಾಸ್ತಾವಿಕವಾಗಿ ಕೊಪ್ಪಳ ವಲಯ ಶಿಕ್ಷಣ ಸಂಯೋಜಕರಾದ ಚನ್ನಬಸಪ್ಪ ಹಮ್ಮಿಗಿ ಮಾತನಾಡುತ್ತಾ , ಶಿಕ್ಷಕರಿಗೆ ಉಪಯೋಗವಾಗುವ ರೀತಿಯಲ್ಲಿ ಇಲಾಖೆಯು ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು , ಇಂತಹ ಕಾರ್ಯಕ್ರಮದಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಮಾತ್ರ ಸ್ಪರ್ಧೆಯ ಮಹತ್ವ ಹೆಚ್ಚುತ್ತದೆ ಎಂದು ಹೇಳಿದರು.
      ಕಾರ್ಯಕ್ರಮದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ವಿಜಯಲಕ್ಷ್ಮೀ ಮಠದ , ಶಿಕ್ಷಕರಾದ ಅಶೋಕ ಭದ್ರಶೆಟ್ಟಿ   ಮುಂತಾದವರು ಹಾಜರಿದ್ದರು.
       ಶಿಕ್ಷಕರಾದ ನಾಗರಾಜ ಪರಡೇಕರ ಸ್ವಾಗತಿಸಿ , ಬಸವರಾಜ ಕಮಲಾಪುರ ವಂದಿಸಿದರು.

Advertisement

0 comments:

Post a Comment

 
Top