ಕೊಪ್ಪಳ, ೨೪- ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ (ಜೆ) ವಿಧೇಯಕಕ್ಕೆ ಕೆಂದ್ರ ಸಚಿವ ಸಂಪುಟದ ನಿರ್ಣಯಕ್ಕೆ ರಾಷ್ಟ್ರಪತಿಗಳ ಅಂಕಿತ ಹಾಕಿದ್ದು, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಯುವ ಘಟಕದಿಂದ ವಿಜಯೋತ್ಸವ ಆಚರಿಸಲಾಯಿತು.
ಗುರುವಾರ ಸಂಜೆ ರಾಷ್ಟ್ರಪತಿಗಳು ಅಂಕಿತ ಹಾಕುತ್ತಿದ್ದಂತೆ ವಿಷಯ ತಿಳಿದ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳು ನಗರದ ಆಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹೈ.ಕ.ಹೋರಾಟ ಸಮಿತಿಯ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ, ರಮೇಶ ತುಪ್ಪದ, ಮಂಜುನಾಥ ಅಂಗಡಿ, ಜಗದೀಶಗೌಡ ತೆಗ್ಗಿನಮನಿ, ಸಿದ್ದಲಿಂಗಪ್ಪ ಕೊಟ್ನೇಕಲ್, ಬಸವರಾಜ ಪೂಜಾರ, ಜಿ.ಎಸ್.ಗೋನಾಳ, ಹಿರಿಯರಾದ ರಾಘವೇಂದ್ರ ಪಾನಘಂಟಿ, ಆಸೀಫ್ ಅಲಿ,
ಶ್ರೀನಿವಾಸ ಗುಪ್ತಾ, ಸಂಗಪ್ಪ ವಕ್ಕಳದ, ಶಿವಾನಂದ ಹೊದ್ಲೂರ, ಮಂಜುನಾಥ ಗೊಂಡಬಾಳ, ಮುನೀರ್ ಸಿದ್ಧಿಖಿ, ಪೃಥ್ವಿರಾಜ ಚಾಕಲಬ್ಬಿ, ನಾಗರಾಜ ಡೊಳ್ಳಿನ, ಸಿರಾಜ ಬಿಸರಹಳ್ಳಿ, ಬೀರಪ್ಪ ಅಂಡಗಿ, ಶಾರದಾ ಕೆಳಗಿನಗೌಡ್ರ, ಪ್ರಭುಗೌಡ ಪಾಟೀಲ, ಮಾರುತೇಶ ಅಂಗಡಿ, ರಾಜಶೇಖರ ಅಂಗಡಿ, ರಾಕೇಶ ಪಾನಘಂಟಿ, ಗಿರೀಶಾನಂದ ಜ್ಞಾನಸುಂದರ ಸೇರಿದಂತೆ ಆನೇಕರು ಹಾಜರಿದ್ದರು.
0 comments:
Post a Comment