ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರದಲ್ಲಿ ಡಾ|| ಮಹದೇವಸ್ವಾಮಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೊಪ್ಪಳ, ಡಾ|| ಎಸ್.ಕೆ. ದೇಸಾಯಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಕೊಪ್ಪಳ, ಡಾ|| ಗುರುಮೂರ್ತಿ ವೈದ್ಯಾಧಿಕಾರಿಗಳು ಗೋಪಿ ಬ್ಲಡ್‌ಬ್ಯಾಂಕ್ ಗಂಗಾವತಿ, ಪ್ರೊ. ತಿಮ್ಮಾರೆಡ್ಡಿ ಮೇಟಿ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ, ಪ್ರಭುರಾಜ ನಾಯಕ್, ಉಪನ್ಯಾಸಕರು & ಎನ್.ಎಸ್.ಎಸ್. ಅಧಿಕಾರಿಗಳು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ, ಡಾ|| ಸಿದ್ದಲಿಂಗಪ್ಪ ಕೊಟ್ನೇಕಲ್, ಉಪನ್ಯಾಸಕರು & ಎನ್.ಎಸ್.ಎಸ್. ಅಧಿಕಾರಿಗಳು ಗವಿಸಿದ್ಧೇಶ್ವರ ಪದವಿ ಪೂ
ರ್ವ ಕಾಲೇಜು ಕೊಪ್ಪಳ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಗೂ ಸಂರಕ್ಷ, ಚೈತನ್ಯ, ಉಜ್ವಲ, ಹೊಂಗಿರಣ, ಸ್ನೇಹ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಹಾಗೂ ಡ್ಯಾಪ್ಕು ಸಿಬ್ಬಂದಿ ಸಹ ಹಾಜರಿದ್ದರು. ಸದರಿ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದ ೫ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
0 comments:
Post a Comment