ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿನ ಪಕ್ಕದ ಕಿಶೋರ ಪೆಟ್ರೋಲ್‌ಬಂಕ್ ಹಿಂದುಗಡೆ ಹಿಂದಿನ ಜಿಲ್ಲಾಧಿಕಾರಿ, ಹಾಗೂ ನಗರಸಭೆ ಅಧಿಕಾರಿಗಳು ಕೊಪ್ಪಳ ಹಾಗೂ ಗುತ್ತಿಗೆದಾರರ ವತಿಯಿಂದ ಇತ್ತೀಚಿನ ದಿನಗಳಲ್ಲಿ ಮೂವರು ಮಹಾನ್ ರಾಷ್ಟೀಯ ನಾಯಕರಾದ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಸವಣ್ಣನವರು ಮತ್ತು ಡಾ||ಬಾಬುಜಗಜೀವನ್‌ರಾಮ್ ಪುತ್ತಳಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಪ್ರತಿಷ್ಠಾಪಿಸುವ ವೇಳೆ ನಗರದ ಯಾವುದೇ ಸಮಾಜದ ಮುಖಂಡರ ಗಮನಕ್ಕೆ ತಂದಿಲ್ಲ. ಹಾಗೂ ಸಂಘ ಸಂಸ್ಥೆ, ಕನ್ನಡಪರ ಸಂಘಟನೆಗಳನ್ನು ಕರೆಯದೇ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ತುಳಸಿ ಮದ್ದಿನೇನಿ ಹಾಗೂ ನಗರಸಭೆಯ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಏಕಪಕ್ಷೀಯವಾಗಿ ಪುತ್ತಳಿಗಳನ್ನು ಸಂಜೆ ೪-೦೦ ಗಂಟೆ ಸುಮಾರಿಗೆ ನಗರಸಭೆಯ ಪೌರ ಕಾರ್ಮಿಕರ ಸಹಾಯ ಹಾಗೂ ಕ್ರೇನ್ ಮುಖಾಂತರ ಪ್ರತಿಷ್ಠಾಪಿಸಿದ್ದಾರೆ. ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಡಾ|| ಬಾಬು ಜಗಜೀವನರಾಮ್ ಈ ಇಬ್ಬರ ಮಹಾನ್ ನಾಯಕರ ಎರಡು ಕಾಲುಗಳ ಪಾದಗಳನ್ನು ಪೂರ್ಣ ಪ್ರಮಾಣದಲ್ಲಿ ಅತಿ ಎತ್ತರದ ಸ್ಥಳದಲ್ಲಿ ಸಿಮೆಂಟ್ ಹಾಗೂ ಕಂಕರನಿಂದ ಮುಚ್ಚಿದ್ದಾರೆ. ಅದೇ ರೀತಿಯಾಗಿ ಮಹಾನ್ ನಾಯಕರಾದ ಬಸವಣ್ಣನವರ ಕುದರೆಯ ಬಾಲ ಸಹಿತ ತುಂಡಾಗಿದೆ. ಅದಕ್ಕೆ ಕೆಳ ಭಾಗದಲ್ಲಿ ಕಬ್ಬಿಣದ ಪೈಪ ಸಹಾಯದಿಂದ ನಿಲ್ಲಿಸಿದ್ದಾರೆ. ಹೀಗೆ ಮಾಡುವುದರ ಮುಖಾಂತರ ಮಹಾನ್ ರಾಷ್ಟ್ರೀಯ ನಾಯಕರ ಪುತ್ತಳಿಗಳನ್ನು ವಿಕೃತಗೊಳಿಸಿದ್ದಾರೆ.
ಅದೇ ರೀತಿ ಪುತಯ್ತಳಿಗಳ ಮುಂಭಾಗದ ಗಾರ್ಡನ್ ಕಂಪೌಂಡ್‌ನಲ್ಲಿ ಒಡೆದುಹೋದ ಬೃಹತ್ ಸಿಮೆಂಟ್‌ರೂಲ್ ಇಟ್ಟಿದ್ದಾರೆ. ಕಸ ಹಾಗೂ ಒಡೆದ ಟೈಲ್ಸಿನ ತುಕಡಿಗಳು, ಗೋಣಿಚೀಲ ಕಂಪೌಂಡಿನೊಳಗೆ ಪುತ್ತಳಿಯ ಮುಂದೆ ಬಿದ್ದಿವೆ.
ಇದನ್ನೆಲ್ಲಾ ನೋಡಿದರೆ ಸಂಬಂಧಪಟ್ಟ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾಡಿದ್ದಾರೆಂದು ಎದ್ದು ಕಾಣುತ್ತದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಅಧಿಕಾರದಿಂದ ವಜಾ ಮಾಡಿ ಇವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನೂ ಒಂದು ವಾರದಲ್ಲಿ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲದ ಮುಂದೆ ನ್ಯಾಯ ಸಿಗುವವರೆಗೂ ಕರ್ನಾಟಕ ಯುವ ಶಕ್ತಿ ವೇದಿಕೆ (ರಿ) ಜಿಲ್ಲಾ ಘಟಕದ ವತಿಯಿಂದ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ವೇಳೆ ನ್ಯಾಯಸಿಗುವ ಲಕ್ಷಣಗಳು ಕಾಣದಿದ್ದಲ್ಲಿ ರಾಜ್ಯಾದ್ಯಂತ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಿ ಎಲ್ಲಾ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ಯುವ ಶಕ್ತಿ ವೇದಿಕೆ (ರಿ) ಧರಣಿ ಹಮ್ಮಿಕೊಳ್ಳಲಾಗುತ್ತದೆಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ತಪ್ಪಿತಸ್ಥರ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಕಾನೂನು ಕ್ರಮ ಕೈಗೊಂಡು ಈ ಮೂವರ ರಾಷ್ಟ್ರೀಯ ನಾಯಕರ ಪುತ್ತಳಿಗಳನ್ನು ತೆರೆವುಗೊಳಿಸಿ ಗೌರವ ರೀತಿಯಲ್ಲಿ ಪುನಃ ಹೊಸ ಪುತ್ತಳಿಗಳನ್ನು ಪ್ರತಿಷ್ಠಾಪಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಾದ, ಸಿದ್ರಾಮಯ್ಯನವರಿಗೆ ಮನವಿಯನ್ನು ಅರ್ಪಿಸಲಾಯಿತು.
0 comments:
Post a Comment