ಕೊಪ್ಪಳ, ಅ. ೧೪. ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ಕೇತೇಶ್ವರ ಕಲ್ಯಾಣ ಮಂಟಪ ಹತ್ತಿರ ಶ್ರೀ ಸಹಸ್ರಾಂಜನೇಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಸುಬ್ಬಣ್ಣಾಚಾರ ಗಿಣಗೇರಿ ಇವರ ಪೌರೋಹಿತ್ಯದಲ್ಲಿ ವಿವಿಧ ಹೋಮ ಹವನಾಧಿಗಳು ಜರುಗಿದವು. ಶ್ರೀ ಸಹಸ್ರಾಂಜನೇಯ ಐತಿಹಾಸಿಕ ಶಿಲಾ ದೇವಸ್ಥಾನದ ಕಾರ್ಯಾರಂಭ ನಿಮಿತ್ಯ ಚಿಕ್ಕ ದೇವಸ್ಥಾನ ನಿರ್ಮಾಣ ಮಾಡಿದ್ದು ಖ್ಯಾತ ಶಿಲ್ಪ ಯುವ ಕಲಾವಿದರು, ಆಂಜನೇಯ ಭಕ್ತರಾದ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಸದರಿ ದೇವಸ್ಥಾನದಲ್ಲಿ ಹಾವೇರಿ ಜಿಲ್ಲೆಯ ಕದರಮಂಡಲಗಿ ಶ್ರೀ ಆಂಜನೇಯನ ಸನ್ನಿಧಿಯಲ್ಲಿ ಮೇಣವನ್ನು ತರಿಸಿ ಮೂರ್ತಿಯ ಅಡಿಯಲ್ಲಿಟ್ಟು ಹನುಮಸಾಗರ ಕಲ್ಲಿನಲ್ಲಿ ಮಾಡಿದ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ವೃಷ್ಚಿಕ ಲಗ್ನದ ಶುಭ ಸಮಯದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಪ್ರಕಾಶ ಶಿಲ್ಪಿಯವರ ೨೪೫೯ ನೇ ನಿತ್ಯ ಆಂಜನೇಯ ಮೂರ್ತಿ ಸೇವೆ ಪೂಜೆ, ಪಂಚಾಮೃತಭಿಷೇಕ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ ದಂಪತಿಗಳು ಹೋಮ ನಡೆಸಿಕೊಟ್ಟರು.
ಸಂಗಪ್ಪ ವಕ್ಕಳದ, ಕಳಕಪ್ಪ ಜಾಧವ, ಟ್ರಸ್ಟ್ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಅಶೋಕ ಬಜಾರಮಠ, ಸದಸ್ಯರಾದ ಪ್ರಹ್ಲಾದ ಮುಧೋಳ, ಬಾಸುರಾವ್ ಅಳವಂಡಿಕರ್, ವಿರೇಶ ಚೋಳಪ್ಪನವರ, ಶಿವಾಜಿ ಜಾಧವ, ಅಣ್ಣಪ್ಪ, ಮಂಜುನಾಥ ಶಿಲ್ಪಿ, ಪರಮೇಶ ಚಕ್ಕಿ, ಬಸವರಾಜ ಅಂಗಡಿ, ಸತೀಶ, ಪ್ರಕಾಶ, ಅನೇಕರು ಪಾಲ್ಗೊಂಡಿದ್ದರು. ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಜನರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ಐತಿಹಾಸಿಕ ಶಿಲಾ ದೇಗುಲವನ್ನು ಶೀಘ್ರದಲ್ಲಿಯೇ ಮಾಡುವ ಕುರಿತು ಭಕ್ತರು ಆಶಯ ವ್ಯಕ್ತಪಡಿಸಿದ್ದು, ಜಗತ್ತಿನಲ್ಲಿಯೇ ಶ್ರೇಷ್ಟ ಮತ್ತು ವಿಶಿಷ್ಟ ಎನ್ನುವಂಥಹ ದೇಗುಲವನ್ನು ಕೊಪ್ಪಳದ ಜನ ಕಾಣುವಂಥಹ ದಿನ ದೂರವಿಲ್ಲವೆಂದು ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ ಅಭಿಪ್ರಾಯಪಟ್ಟರು.
0 comments:
Post a Comment