ಇತ್ತೀಚೆಗೆ ಸರಕಾರಿ ಪ್ರೌಢಶಾಲೆಗಳ ದೈಹಿಕ ಶಿಕ್ಷಕರಿಗೆ ಕರಾಟೆ ತರಬೇತಿ ಮುಕ್ತಾಯ ಸಮಾರಂಭವು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಸಮಾರಭದ ಅಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಣಾಧಿಕಾರಿ ವೈ.ಸುದರ್ಶನರಾವ್ ಮಾತನಾಡಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಪ್ರತಿಕೂಲ ಸನ್ನಿವೇಶಗಳಲ್ಲಿ ರಕ್ಷಿಸಿಕೊಳ್ಳುವಷ್ಟು ಸಮರ್ಥರನ್ನಾಗಿ ಮಾಡುವುದು ಅವಶ್ಯವಾಗಿದೆ. ಕಾರಣ ೧೨ ದಿನಗಳವರೆಗೆ ದೈಹಿಕ ಶಿಕ್ಷಕ/ಕಿ ರಿಗೆ ಕರಾಟೆ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ವಾರಕ್ಕೆ ಎರಡು ಮೂರು ಅವಧಿಗಳನ್ನು ಬಳಸಿಕೊಂಡು ಬಾಲಕಿಯರಿಗೆ ಆತ್ಮರಕ್ಷಣೆ ಕಲೆಯಾದ ಕರಾಟೆ ತರಬೇತಿಯನ್ನು ಪ್ರಾರಂಭಿಸಬೇಕು ಅಲ್ಲದೇ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಹೇಳಿದರು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕರಾಟೆ ಕ್ರೀಡಾಪಟುವಾದ ಶ್ರೀನಿವಾಸ ಪಂಡಿತ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆದುಕೊಂಡಿದ್ದು ಸಂತೋಷದ ವಿಷಯ ಎಂದರು. ಜೊತೆಗೆ ಸರಕಾರದ ಆದೇಶಗಳ ಕುರಿತು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ದೈ ಶಿ ರಿಗೆ ಕರಾಟೆ ತರಬೇತಿ ನೀಡಿದ ಶ್ರೀನಿವಾಸ ಪಂಡಿತ ರಿಗೆ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಕೋಚ್ ಶ್ರೀನಿವಾಸ ಪಂಡಿತ ಮಾತನಾಡಿ ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ ಸದೃಡವಾಗಲು ಮತ್ತು ಸರ್ವತೋಮುಖ ಬೆಳವಣಿಗೆಗೆ ಕರಾಟೆ ಪ್ರತಿಯೊಬ್ಬರಿಗೂ ಅವಶ್ಯಕವೆಂದರು. ಎಷ್ಟೋ ವರ್ಷಗಳಿಂದ ಕರಾಟೆ ಕ್ರೀಡೆಯನ್ನೂ ಪಠ್ಯದಲ್ಲಿ ಸೇರಿಸಿರಿ ಎಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೆವು ತಡವಾದರು ಶಿಕ್ಷಣ ಇಲಾಖೆಯ ಕರಾಟೆ ತರಬೇತಿಯ ಕ್ರಮಕ್ಕೆ ಸ್ವಾಗತವೆಂದರು. ೫೮ವರ್ಷದ ದೈ ಶಿ ರು ಕೂಡಾ ಕರಾಟೆ ತರಬೇತಿಗೆ ಭಾಗವಹಿಸಿರುವುದು ತರಬೇತಿಗೆ ಕಳೆತಂದಿತ್ತು ಎಂದರು. ಕರಾಟೆ ತರಬೇತಿ ಪಡೆದ ದೈ ಶಿಕ್ಷಕಿ ಸುನಿತಾ ಮಾತನಾಡಿ ಕರಾಟೆ ಎಂದರೆ ಗೊತ್ತಿಲ್ಲದ ನಮಗೆ ಕೇವಲ ೧೨ ದಿನಗಳಲ್ಲಿ ಸಾಕಷ್ಟು ಕರಾಟೆಯ ಕೌಶಲ ತಂತ್ರಗಳನ್ನು ತಿಳಿಹೇಳಿಕೊಟ್ಟಿದ್ದಾರೆ. ಇದರ ಉಪಯುಕ್ತತೆ ಹೆಣ್ಣು ಮಕ್ಕಳು ಅತೀ ಅವಶ್ಯಕವೆಂದರು. ಎಂ ಎಂ ಮುಜಗೊಂಡ ಮಾತನಾಡಿ ೧೨ ದಿನ ನಮ್ಮನ್ನು ನಾವು ರಕ್ಷಿಸುವ ತಂತ್ರಗಾರಿಕೆ, ಎದುರಾಳಿಯ ವರಸೆಗೆ ರಕ್ಷಣಾತ್ಮಕವಾಗಿ ಕೈವೊಡ್ಡಿ ಪಂಚ್ ಕೊಡುವ ಕರಾಟೆ ತರಬೇತಿಯನ್ನು ಕಲಿಸುತ್ತಾ ಎಲ್ಲರ ಮನಸ್ಸನ್ನು ಗೆದ್ದಿದ್ದರು ಎಂದರು. ತಾ ದೈ ಶಿ ಸಂ ಅಧ್ಯಕ್ಷ ವೀರಭದ್ರಯ್ಯ ಪೂಜಾರ ಮಾತನಾಡಿ ಕರಾಟೆ ಕೇವಲ ಆತ್ಮರಕ್ಷಣೆ ಅಲ್ಲದೇ ಜೀವನದ ಕ್ರಮವೆಂದರು. ವೇದಿಕೆಯಲ್ಲಿ ಶಿ ಸಂ ಅಧ್ಯಕ್ಷ ಪ್ರಭು ಇದ್ದರು. ಎಂ ಎಂ ಮುಜಗೊಂಡ ಪ್ರಾಸ್ತಾವಿಕ ನುಡಿ ಮತ್ತು ಕಾರ್ಯಕ್ರಮ ನಿರ್ವಹಿಸಿದರು. ಪ್ರಾಣೇಶ ವಂದಿಸಿದರು.
Home
»
karnataka elections
»
karnataka news information
»
koppal district information
»
Koppal News
»
school college koppal district
» ದೈಹಿಕ ಶಿಕ್ಷಕರಿಗೆ ಕರಾಟೆ ತರಬೇತಿ ಮುಕ್ತಾಯ ಸಮಾರಂಭ.
Subscribe to:
Post Comments (Atom)
0 comments:
Post a Comment