PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೧೭ : ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ೧೭ರಂದು ಬೆಳಿಗ್ಗೆ ೮:೧೫ಕ್ಕೆ ೬೬ನೇ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ ರವರು ನೆರವೇರಿಸಿದರು.  ಶಾಲಾ ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮದೇ ಆದ ಮಾತುಗಳಲ್ಲಿ ವಿಮೋಚನೆಗೆ ಹೋರಾಡಿದವರನ್ನು ಶ್ಲಾಘಿಸಿ ಅವರ ಜೀವನ ಮೌಲ್ಯಗಳನ್ನು ಅಳವಡಿಸಿ ಕೊಳ್ಳೋಣ ಎಂದು ವಿವರಿಸಿದರು.  ಶಿಕ್ಷಕ/ಶಿಕ್ಷಕಿಯರು ಸಹ ಈ ದಿನದ ಮಹತ್ವ ಕುರಿತು ಸಂಕ್ಷೀಪ್ತವಾಗಿ ಮಾತನಾಡಿದರು.  ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕೆ. ಇವರು ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ಕುರಿತು ಮಕ್ಕಳಲ್ಲಿ ಈ ಹೋರಾಟದ ಮಹತ್ವ ಮತ್ತು ಗತಿಸಿದ ವಿವರಣೆಯನ್ನು ಮಕ್ಕಳ ಮಟ್ಟಕ್ಕೆ ತಲುಪುವಂತೆ ತಿಳಿಸಿಕೊಡಿ ಎಂದು ಈ ಸಂದರ್ಭದಲ್ಲಿ ಶಿಕ್ಷಕ/ಶಿಕ್ಷಕಿಯರಿಗೆ ಕರೆ ನೀಡಿದರು.  ಕಾರ್ಯಕ್ರಮದ ಸ್ವಾಗತವನ್ನು


ಕಲ್ಲಯ್ಯ ಹಿರೇಮಠ, ನಿರೂಪಣೆಯನ್ನು ಜ್ಯೋತಿ ಎಸ್. ಎಸ್. ವಂದನಾರ್ಪಣೆಯನ್ನು ಶಿವರಾಜ್ ಏಣಿ. ವಹಿಸಿದ್ದರು.

Advertisement

0 comments:

Post a Comment

 
Top