ಕೊಪ್ಪಳ ಜಿಲ್ಲೆಯು ಪುರಾತನ, ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಾದರೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಸ್ಥಳೀಯ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯುವ ಸಲುವಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಿನ್ನೆಲೆ, ರಾಮಾಯಣದ ಐತಿಹ್ಯಗಳು ಅಲ್ಲದೆ ಶಿಲಾಯುಗಕ್ಕೆ ಸಂಬಂಧಿಸಿದ ಪಳೆಯುಳಿಕೆಗಳನ್ನು ಕಾಲಗರ್ಭದಲ್ಲಿ ಇರಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಂಪಿ ಪ್ರದೇಶಕ್ಕೆ ನೀಡಿದಷ್ಟು ಪ್ರಾಧಾನ್ಯತೆಯನ್ನು ಕೊಪ್ಪಳ ಜಿಲ್ಲೆಯ ಆನೆಗೊಂದಿ ಪ್ರದೇಶ ಮತ್ತು ಹಿರೇಬೆಣಕಲ್‌ನ ಮೌರೇರ ಗುಡ್ಡಕ್ಕೆ ನೀಡದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಗಂಗಾವತಿ ತಾಲೂಕಿನ ಆನೆಗೊಂದಿ ಮತ್ತು ಕುಮ್ಮಟದುರ್ಗ ಐತಿಹಾಸಿಕವಾಗಿ ಖ್ಯಾತಿಯನ್ನು ಹೊಂದಿದ್ದರೆ, ಪಂಪಾ ಸರೋವರ ಮತ್ತು ಅಂಜನಾದ್ರಿ ಬೆಟ್ಟ ಧಾರ್ಮಿಕವಾಗಿ ಮತ್ತು ರಾಮಾಯಣ ಮಹಾ ಕಾವ್ಯದ ಐತಿಹ್ಯವನ್ನು ಒಳಗೊಂಡಿದೆ. ಹಿರೇಬೆಣಕಲ್ ಬಳಿಯ ಮೌರೇರ ಗುಡ್ಡ ಶಿಲಾಯುಗಕ್ಕೆ ಸೇರಿದ ಹಿನ್ನೆಲೆಯನ್ನು ಹೊಂದಿದೆ. ಈ ರೀತಿ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಹಿನ್ನೆಲೆಯನ್ನು ಒಂದೆಡೆ ಹೊಂದಿರುವ ಪ್ರದೇಶಗಳು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಇಂತಹ ಮಹತ್ವದ ಸ್ಥಳಗಳ ಸಮಗ್ರ ವಿವರವನ್ನು ನೀಡುವಂತಹ ಕೊಪ್ಪಳ ಜಿಲ್ಲೆಯ ಪ್ರವಾಸಿ ಮಾರ್ಗಸೂಚಿ ಇದುವರೆಗೂ ಸಿದ್ಧವಾಗದೇ ಇರುವುದರಿಂದ, ಪ್ರವಾಸಿಗರಿಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಸಮರ್ಪಕ ಮಾಹಿತಿ ದೊರಕುತ್ತಿಲ್ಲ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೆ ಮುಖ್ಯ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ವಿವರಗಳುಳ್ಳ ಒಂದು ಮಾರ್ಗಸೂಚಿ ಕೈಪಿಡಿಯನ್ನು ಹೊರತರಲು ನಿರ್ಧರಿಸಲಾಗಿದೆ. ನಂತರ ಎರಡನೆ ಹಂತದಲ್ಲಿ ಇಂತಹ ಎಲ್ಲ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವಂತಹ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಸಮಗ್ರವಾದ ಕ್ರಿಯಾ ಯೋಜನೆಯನ್ನು ತಯಾರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ಸ್ಥಳೀಯ ತಜ್ಞರ ಸಲಹೆ, ಸೂಚನೆ ಮತ್ತು ಸಹಕಾರದ ಅಗತ್ಯವಿದೆ ಎಂದು ಜಿಲ್ಲಾದಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಹೇಳಿದರು.
ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ವೈ. ನಾಯಕ್ ಅವರು ಮಾತನಾಡಿ, ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆಯ ೧೫ ಗ್ರಾಮಗಳು ಮತ್ತು ಬಳ್ಳಾರಿ ಜಿಲ್ಲೆಯ ೧೪ ಗ್ರಾಮಗಳು ಬರುತ್ತವೆ. ಈ ವ್ಯಾಪ್ತಿಯಲ್ಲಿನ ಎಲ್ಲ ಸ್ಮಾರಕಗಳನ್ನು ಸಂರಕ್ಷಿತ ಪ್ರದೇಶಗಳೆಂದು ಈಗಾಗಲೆ ಘೋಷಿಸಲಾಗಿದ್ದು, ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೊದಲು ಪ್ರಾಧಿಕಾರದ ಅನುಮತಿ ಪಡೆಯುವುದು ಅಗತ್ಯವಾಗಿದೆ ಎಂದರು.
ಗಂಗಾವತಿಯ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮಾತನಾಡಿ, ಮೊದಲಿಗೆ ಜಿಲ್ಲೆಯ ಎಲ್ಲ ಐತಿಹಾಸಿಕ ತಾಣಗಳು, ಮತ್ತು ಸ್ಮಾರಕಗಳ ಬಗ್ಗೆ ಪಟ್ಟಿಯನ್ನು ತಯಾರಿಸಿಬೇಕು. ಕನಕಗಿರಿ, ಆನೆಗೊಂದಿ, ಕುಮ್ಮಟದುರ್ಗ, ಮುಕ್ಕುಂಪಿ, ಎಮ್ಮಿಗುಡ್ಡ ಮುಂತಾದೆಡೆ ಇರುವ ಸ್ಮಾರಕಗಳ ರಕ್ಷಣೆಗೆ ಹಾಗೂ ಒತ್ತುವರಿಯ ತೆರವಿಗೆ ಮುಂದಾಗಬೇಕು ಎಂದರು.
ಹಂಪಿ ಕನ್ನಡ ವಿವಿಯ ಡಾ. ಚೆಲುವರಾಜು ಅವರು ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ತಾಣಗಳ ಬಗ್ಗೆ ಫೋಟೋ ಹಾಗೂ ವಿಡಿಯೋ ಸಹಿತ ಸಮಗ್ರ ವರದಿ ಸಂಗ್ರಹಿಸಿ, ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆಯನ್ನು ತಜ್ಞರ ತಂಡದೊಂದಿಗೆ ಸಿದ್ಧಪಡಿಸಿ, ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದರು.
ಗಂಗಾವತಿಯ ಲಲಿತಾರಾಣಿ ಶ್ರೀರಂಗದೇವರಾಯಲು, ರಾಜೇಶ್ ನಾಯಕ್, ಕನಕಗಿರಿಯ ಡಾ. ಡಿ.ಕೆ. ಮಾಳೆ, ಕೊಪ್ಪಳದ ಅಲ್ಲಮಪ್ರಭು ಬೆಟ್ಟದೂರ, ಬಸವರಾಜ ಆಕಳವಾಡಿ, ಇಟಗಿಯ ಬಸವರಾಜ ಎಂ. ಹಳ್ಳಿ ಮುಂತಾದವರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗ ಶೆಟ್ಟಿ, ಈಶಾನ್ಯ ಕ.ರಾ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್, ಲೋಕೋಪಯೋಗಿ ಇಲಾಖೆ, ವಾರ್ತಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

0 comments:
Post a Comment