ಕೊಪ್ಪಳ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಸಾಹಿತಿ ಯೋಗೀಶ್ ಮಾಸ್ಟರ್ ಬಂಧನವನ್ನು ಖಂಡಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ್ದಲ್ಲದೇ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಪತ್ರವನ್ನು ಸಲ್ಲಿಸಿದೆ. ಜಿಲ್ಲೆಯ ೨೦ಕ್ಕೂ ಹೆಚ್ಚು ಸಾಹಿತಿಗಳು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಪತ್ರಕರ್ತರು ಈ ಪತ್ರವನ್ನು ಬರೆದಿದ್ದು, ಯೋಗೀಶ್ ಮಾಸ್ಟರ್ ಬಂಧನ ಪ್ರಜಾಪ್ರಭುತ್ವಕ್ಕೆ ಆತಂಕವನ್ನು ಒಡ್ಡಿದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ.
ಢುಂಢಿ ಕಾದಂಬರಿಯು ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂಬ ನಿರ್ಣಯಕ್ಕೆ ಬರುವುದಾದರೆ, ಅದನ್ನು ಓದಿದಾಗ ಮಾತ್ರ. ಆದರೆ ಕೃತಿಯನ್ನೇ ಓದದ ಮತೀಯ ಹಿನ್ನೆಲೆಯ ಕೆಲವರು ಇದನ್ನು ನಿಶೇಧಿಸಬೇಕೆಂದು ಒತ್ತಾಯಿಸಿರುವುದು ಬೌದ್ಧಿಕ ದಿವಾಳಿತನವಾಗಿದೆ ಎಂದು ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಢುಂಢಿ ಕಾದಂಬರಿಯನ್ನು ವಿರೋಧಿಸುವ ನೆಪದಲ್ಲಿ ಕೆಲವರು ಬುದ್ಧಿ ಜೀವಿಗಳನ್ನು ಬಯೋತ್ಪಾದಕರೆಂದು ಕರೆದಿರುವುದು ಸಾಹಿತ್ಯ ಪರಂಪರೆಗೆ ಮಾಡಿದ ಅವಮಾನವಾಗಿದೆ. ನಮ್ಮ ಪರಂಪರಯ ಧಾರ್ಮಿಕ ಪಠ್ಯಗಳನ್ನು ಓದದೇ ಇರುವ ಕುಹುಕಿಗಳು ಧರ್ಮ ರಕ್ಷಣೆಯ ಮಾತಾಡುತ್ತಿರುವುದು ಸಾಂಸ್ಕೃತಿಕ ಲೋಕದ ದುರುಂತವಾಗಿದೆ. ಕರ್ನಾಟಕದ ಚರಿತೆಯಲ್ಲಿಯೆ ಮೊದಲ ಬಾರಿಗೆ ಬಂಧಿಸಿರುವ ಹೆಗ್ಗಳಿಕೆಗೆ ಈ ಸರ್ಕಾರ ಪಾತ್ರವಾಗಿದೆ ಎಂದು ಸಾಹಿತಿ ಬಿ. ಪೀರ್‌ಬಾಷಾ ಖಂಡಿಸಿದರು.
ಈ ಪ್ರಕರಣದಲ್ಲಿ ಯೋಗೀಶ್ ಮಾಸ್ಟರ್ ಪರವಾಗಿ ಸರ್ಕಾರವೆ ವಾದ ಮಂಡಿಸುವ ಮೂಲಕ ಸರ್ಕಾರ ತಾನು ಪ್ರಜಾಸತ್ತಾತ್ಮಕವಾಗಿದೆ ಎಂದು ಕಾರ್ಮಿಕ ಮುಖಂಡರಾದ ಜೆ. ಭಾರದ್ವಾಜ್ ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ ಬಸವರಾಜ್ ಶೀಲವಂತರ್, ಕುಮಾರ್ ಸಮತಳ್, ರಾಘವೆಂದ್ರ, ಸಿರಾಜ್ ಬಿಸರಳ್ಳಿ, ಮಹೇಶ ಬಳ್ಳಾರಿ, ಎಂ. ವಿರುಪಾಕ್ಷಪ್ಪ, ರಾಜಾಭಕ್ಷಿ ಹೆಚ್.ವಿ, ಶರಣಪ್ಪ ಕೊತಬಾಳ್, ರಾಮಣ್ಣ ಬಿಸೆಟ್ಟಿ, ಕರಿಯಪ್ಪ ಗುಡಿಮನಿ, ಹುಸೆನ್‌ಬಾಷಾ, ಮೊದಲಾದವರು ಪಾಲ್ಗೊಂಡಿದ್ದರು.

0 comments:
Post a Comment