PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ : ಫಾರ್ಮಸಿ ಆಕ್ಟ ಆಂಡ್ ರೂಲ್ಸ ಹಾಗೂ ಫಾರ್ಮಸಿ ಕಾಯ್ದೆ ಮತ್ತು ನಿಯಮಗಳು ಎಂಬ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಹೊರ ತ
ಫಾರ್ಮಸಿ ಆಕ್ಟ (ಬೇರ್ ಆಕ್ಟ) ಪುಸ್ತಕ ಇಂಗ್ಲೀಷ್ ಭಾಷೆಯಲ್ಲಿ ದೊರೆಯುತ್ತದೆಯಾದರೂ ಪ್ರಕಟಣೆಯಲ್ಲಿ ಪ್ರಕಾಶಕರು ನಿರುತ್ಸಾಹ ತೊರುತ್ತಿರುವುದರಿಂದ ಪುಸ್ತಕ ಸರಳವಾಗಿ ಲಭ್ಯವಾಗುತ್ತಿಲ್ಲ. ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿತ್ತಿರುವುದು ಇದೇ ಮೊದಲು ಎಂದು ಪುಸ್ತಕದ ಪ್ರಕಾಶಕ, ನ್ಯಾಯವಾದಿ ಅಶೋಕಸ್ವಾಮಿ ಹೇರೂರ ವಿವರಿಸಿದರು. ಫಾರ್ಮಸಿ ನಿಯಮಾವಳಿ ಪುಸ್ತಕ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು, ಇದೊಂದು ಇತಿಹಾಸ, ಈ ಕಾರಣಕ್ಕಾಗಿ ತಾವು ತುಂಬಾ ಹೆಮ್ಮೆ ಪಡುತ್ತಿರುವುದಾಗಿ ಹೇರೂರ ಹೇಳಿಕೊಂಡರು.

ಈ ಹಿಂದೆ ಔಷಧ ಮತ್ತು ಕಾಂತಿ ವರ್ಧಕ ನಿಯಮಗಳ ಪುಸ್ತಕವನ್ನು ಕನ್ನಡದಲ್ಲಿ ಹೊರತರಲಾಗಿರುವುದನ್ನು ಉಲ್ಲೇಖಿಸಿದ ಅವರು ಔಷಧ ವ್ಯಾಪಾರಿಗಳು ಪುಸ್ತಕವನ್ನು ಖರೀದಿಸಿದರೆ ಸಾಲದು, ಓದುವ ಮೂಲಕ ಜ್ಞಾನವನ್ನು ಹೊಂದಬೇಕು ಇದರಿಂದ ನಿಯಮಗಳ ಉಲ್ಲಂಘನೆಯನ್ನು ತಡೆಯಬಹುದು ಎಂದರು.ಮುಖ್ಯ ಅತಿಥಿ, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ರಾಯಚೂರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್.ಸ್ವಾಮಿ, ಔಷಧ ಪರಿವೀಕ್ಷಕ ಮಂಜುನಾಥ ಮಾತಾನಾಡಿದರು.
ಎ.ಪಿ.ಎಂ.ಸಿ  ನೂತನ ಅಧ್ಯಕ್ಷರಿಗೆ ಸನ್ಮಾನ
ಗಂಗಾವತಿ, ಗಂಗಾವತಿ ತಾಲೂಕ ಎ.ಪಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಕನಕಗಿರಿಯ ಗಂಗಾಧರಸ್ವಾಮಿ ಕಲ್‌ಬಾಗಿಲಮಠ ಅವರನ್ನು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಗಂಗಾಧರ ಸ್ವಾಮಿಯವರನ್ನು ಸನ್ಮಾನಿಸಿದರು.
ರಲಾಗಿರುವ ಪುಸ್ತಕವನ್ನು ನಗರದ ಔಷಧೀಯ ಭವನದಲ್ಲಿ ಬಿಡುಗಡೆ ಮಾಡಲಾಯಿತು.  ನಾಡಿನ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಇಂತಹ ಕಾನೂನು ಪುಸ್ತಕಗಳನ್ನು ನಾಡಿಗೆ ಪರಿಚಯಿಸುತ್ತಿರುವ ಅಶೋಕಸ್ವಾಮಿ ಹೇರೂರ ಅವರ ಕಾರ್ಯ ಶ್ಲಾಘನೀಯ ಎಂದರು.ಇಡೀ ದೇಶದ ಫಾರ್ಮಾಸಿಸ್ಟಗಳ ಬಳಿ ಇರಲೇಬೇಕಾದ ಪುಸ್ತಕ ಇದಾಗಿದ್ದು, ರಾಜ್ಯದ ಫಾರ್ಮಸಿಸ್ಟಗಳು ಓದಲು ಅನುಕೂಲವಾಗುವಮತೆ ಕನ್ನಡದಲ್ಲಿಯೂ ಅನುವಾದಗೊಳಿಸಿದ್ದು ಅಭಿನಂದನಾರ್ಹ ಎಂದು ಅಭಿಪ್ರಾಯ ಪಟ್ಟರು.
ಔಷಧ ವ್ಯಾಪಾರಿಗಳ ಜಾಗೃತಿ ಸಭೆ

ಗಂಗಾವತಿ, ಗಂಗಾವತಿ ತಾಲೂಕ ಔಷಧ ವ್ಯಾಪಾರಿಗಳ ಜಾಗೃತಿ ಸಭೆಯನ್ನು ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ ವೃತ್ತದ ಔಷಧ ಪರವೀಕ್ಷಕ ಮಂಜುನಾಥ ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ಔಷಧ ಮತ್ತು ಕಾಂತಿ ವರ್ಧಕ ನಿಯಮಗಳನ್ನು ಎಲ್ಲಾ ಔಷಧ ವ್ಯಾಪಾರಿಗಳು ಪಾಲಿಸುವ ಮೂಲಕ ನಿಯಮಗಳ ಉಲ್ಲಂಘನೆಯನ್ನು ತಡೆಯಬೇಕೆಂದು ಸೂಚಿಸಿದರು. ಡ್ರಗ್ಸ ಆಂಡ್ ಕಾಸ್ಮೆಟಿಕ್ ಆಕ್ಟ್ ಎಲ್ಲರಿಗೂ ಅರ್ಥವಾಗಲಿ ಎಂಬ ಕಾರಣಕ್ಕಾಗಿ ಅದನ್ನು ನ್ಯಾಯಾವಾದಿ ಅಶೋಕಸ್ವಾಮಿ ಹೇರೂರ ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಅದರ ಸದುಪಯೋಗನ್ನು ಪಡೆಯಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ಅಶೋಕಸ್ವಾಮಿ ಹೇರೂರ ಮಾತಾನಾಡಿ ಔಷಧ ವ್ಯಾಪಾರಿಗಳು ಅನೈತಿಕ ಪೈಪೋಟಿಯಿಂದ ವ್ಯಾಪಾರ ಮಾಡಿದರೆ ಶಿಸ್ತಿನ ಕ್ರಮ ಕೈಕೊಳ್ಳಬೇಕಾಗುತ್ತದೆ. ಮಿತಿ ಮೀರಿದರೆ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.

ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಜಂಟಿ ಕಾರ್ಯದರ್ಶಿ ಶರಣಪ್ಪ ಬೆಟಗೇರಿ ರಾಯಚೂರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್.ಸ್ವಾಮಿ, ಕೊಪ್ಪಳ ತಾಲೂಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಜಶೇಖರ ಪಾಟೀಲ್ ಆಗಮಿಸಿದ್ದರು.

ಗಂಗಾವತಿ ತಾಲೂಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕನಕರಾಜ ದರೋಜಿ, ಕಾರ್ಯದರ್ಶಿ ಹನುಮರೆಡ್ಡಿ ಪಾಟೀಲ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಹೊಸ ಔಷಧೀಯ ವಾರ್ತೆ ಪತ್ರಿಕೆ ಬಿಡುಗಡೆ
ಗಂಗಾವತಿ, ನಗರದ ಔಷಧೀಯ ಭವನದಲ್ಲಿ ಇತ್ತೀಚೆಗೆ ಹೊಸ ಔಷಧೀಯ ವಾರ್ತೆ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು.

ಈ ಮಾಸಿಕ ಪತ್ರಿಕೆಯನ್ನು ಕೊಪ್ಪಳದ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಬಿಡುಗಡೆಗೊಳಿಸಿದರು.
ಪತ್ರಿಕೋದ್ಯಮದ ವಿಷಯದಲ್ಲಿ ಒಲವು ಹೊಂದಿರುವ ಪತ್ರಿಕೆಯ ಸಂಪಾದಕ ಅಶೋಕಸ್ವಾಮಿ ಹೇರೂರ, ಔಷಧ ವಿಜ್ಷಾನ ಅಭ್ಯಾಸ ಮಾಡಿರುವ ಕಾರಣ ಈ ವಿಷಯಕ್ಕೆ ಸಂಭಂದಿಸಿದ ಮಾಹಿತಿಯನ್ನೊಳಗೊಂಡ ಪತ್ರಿಕೆಯನ್ನು ಆರಂಭಿಸಿ ಔಷಧೀಯ ವಲಯದಲ್ಲಿ ಜಾಗ್ರತೆಯನ್ನು ಉಂಟುಮಾಡುತ್ತಿದ್ದಾರೆಂದು ಶ್ಲಾಘಿಸಿದರು.

ಸಾಮ್ರಾಟ ಅಶೋಕ ಚಕ್ರವರ್ತಿಯ ಇತಿಹಾಸದಿಂದ ಅಶೋಕಸ್ವಾಮಿ ಹೇರೂರ ಪ್ರಭಾವಿತರಾಗಿದ್ದಾರೇನೋ? ಎನ್ನುವಂತೆ ಅಶೋಕಸ್ವಾಮಿ ಹೇರೂರ ನಿರಂತರ ಹೋರಾಟ ನಡೆಸಿರುತ್ತಾರೆ, ಅವರ ಏಕಾಂಗಿ ಹೋರಾಟಕ್ಕೆ ಸಮಾನ ಮನಸ್ಕರ ಬೆಂಬಲದ ಅವಶ್ಯಕತೆ ಇದೆ ಎಂದರಲ್ಲದೆ, ಸಮಾಜದಲ್ಲಿನ ಹಲವರು ಅಶೋಕಸ್ವಾಮಿಯವರ ಕ್ರೀಯಾಶೀಲತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಅಭಿಪ್ರಾಯ ಪಟ್ಟರು.

ಹೋರಾಟಗಾರರಿಗೆ ಹಿಂಸೆಗಳು, ಒತ್ತಡಗಳು ಸಾಮಾನ್ಯ ಯಾವುದಕ್ಕೂ ಎದೆಗುಂದದೆ ಹೇರೂರ ಅವರು ತಮ್ಮ ಹೋರಾಟವನ್ನು ಮುಂದುವರಿಸಬೇಕೆಂದು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯರಾದ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ನಾನು ಔಷಧಿಯ ವಾರ್ತೆ ಪತ್ರಿಕೆಯ ಕಾಯಂ ಓದುಗ. ಪತ್ರಿಕೆ ಚಿತೋಹಾರಿ ಲೇಖನಗಳನ್ನು ಹೊಂದಿರುತ್ತದೆ. ಅದೇ ರೀತಿ ಹಲವು ರೋಗಗಳ ಬಗ್ಗೆ, ಔಷಧಿಗಳ ಮಾಹಿತಿಯ ಜೊತೆಗೆ ಓದಿಸಿಕೊಂಡು ಹೋಗುವ ರೀತೆಯಲ್ಲಿ ಅವುಗಳನ್ನು ಪ್ರಕಟಿಸಲಾಗಿರುತ್ತದೆ ಎಂದರು. ಔಷಧ ವ್ಯಾಪಾರಿಗಳು ಈ ಪತ್ರಿಕೆಯ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಜಾಗ್ರತೆಯನ್ನು ಮೂಡಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.

ಪತ್ರಿಕೆಯ ಸಂಪಾದಕ ಅಶೋಕಸ್ವಾಮಿ ಹೇರೂರ ಮಾತಾನಾಡಿ ಕಳೆದ ಒಂದು ದಶಕದಿಂದ ಔಷಧೀಯ ವಾರ್ತೆ ಪತ್ರಕೆ ಪ್ರಕಟವಾಗುತ್ತಿದೆ. ಈಗ ಹೊಸ ಔಷಧೀಯ ವಾರ್ತೆ ಹೆಸರಿನಲ್ಲಿ ಪತ್ರಿಕೆ ಪ್ರಕಟವಾಗುತ್ತಿರುವುದು ಕೇವಲ ತಾಂತ್ರಿಕ ಬದಲಾವಣೆ ಅಷ್ಟೇ. ಯಾವುದೇ ರೀತಿಯ ಧ್ಯೇಯ-ಧೋರಣೆಗಳಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಔಷಧೀಯ ಸಂಗತಿಗಳನ್ನೊಳಗೊಂಡ ಏಕೈಕ ಕನ್ನಡ ಮಾಸಿಕ ಪತ್ರಿಕೆ ತಮ್ಮದೆಂದು ಹೇಳಿ ಕೊಂಡ ಅವರು, ವರದಿಗಳನ್ನು ಪ್ರಕಟಿಸುವಾಗ ಓದುಗರಿಗೆ ಆಸಕ್ತಿ ಬರುವಂತೆ ಅವುಗಳನ್ನು ಪ್ರಕಟಿಸುತ್ತಿರುವುದು ಪತ್ರಿಕೆಯ ಹೆಗ್ಗಳಿಕೆ ಎಂದರು.
ವೇದಿಕೆಯ ಮೇಲೆ ಗಂಗಾವತಿ ಎ.ಪಿ.ಎಂ.ಸಿ ಅಧ್ಯಕ್ಷ ಕೆ.ಗಂಗಾಧರ ಸ್ವಾಮಿ, ಔಷಧ ಪರಿವೀಕ್ಷಕರಾದ ಮಂಜುನಾಥ, ರಾಯಚೂರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್..ಸ್ವಾಮಿ ತಾಲೂಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕನಕರಾಜ ದರೋಜಿ ಹಾಗೂ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಪಾಟೀಲ್ ಆಸೀನರಾಗಿದ್ದರು.

 
ಎ.ಪಿ.ಎಂ.ಸಿ ನೂತನ ಅಧ್ಯಕ್ಷ ಕೆ. ಗಂಗಾಧರಸ್ವಾಮಿ ಗಂಗಾವತಿ ತಾಲೂಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕನಕರಾಜ ದರೋಜಿ, ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಪಾಟೀಲ್, ಕೊಪ್ಪಳ ತಾಲೂಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಜಶೇಖರ ಪಾಟೀಲ್ ಹಲಗೇರಿ, ಜಿಲ್ಲಾ ಸಂಘದ ಜಂಟಿ ಕಾರ್ಯದರ್ಶಿ ಶರಣಪ್ಪ ಗುಳದಳ್ಳಿ, ಅಶೋಕಸ್ವಾಮಿ ಹೇರೂರ ಅಭಿಮಾನಿಗಳ ಬಳಗದ ಅಧ್ಯಕ್ಷ ಶರಣಗೌಡ ಕೇಸರಹಟ್ಟಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Advertisement

0 comments:

Post a Comment

 
Top