ಕೊಪ್ಪಳ, ಸೆ.೨೬: ಹೈದ್ರಬಾದ್- ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಯ ನಿವಾಸಿಗಳಿಗೆ ಹೊರತು ಪಡಿಸಿ ಅನ್ಯ ಜಿಲ್ಲೆಯಿಂದ ಆಗಮಿಸಿದವರಿಗೆ ವಾಸಸ್ಥಳ ಸೇರದಿಂತೆ ಇತರ ದೃಢೀಕರಣ ನೀಡದಿರುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್. ಮೂರ್ತಿ ಸ್ಥಾಪಿತ) ರಾಜ್ಯ ಸಮಿತಿ ಒತ್ತಾಯಿಸಿದೆ.
ಈ ಕುರಿತು ರಾಜ್ಯ ಸಮಿತಿಯ ಹಿರಿಯ ಸದಸ್ಯ ಡಾ. ಬಿ.ಜ್ಞಾನಸುಂದರ ಹಾಗೂ ಗುಲಬರ್ಗಾ ವಿಭಾಗ ಸಮಿತಿ ಸಂಘಟನಾ ಕಾರ್ಯದರ್ಶಿ ರಾಮಣ್ಣ ಕಂದಾರಿ ಜಂಟಿ ಪ್ರಕಟಣೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಒತ್ತಾಯಿಸಿದರು.
ಹೈ-ಕ ಪ್ರದೇಶದ ಒಟ್ಟು ಆರು ಜಿಲ್ಲೆಗಳ ಹೋರಾಟದ ಫಲವಾಗಿ ಈ ಭಾಗಕ್ಕೆ ಕೇಂದ್ರ ಸರಕಾರ ೩೭೧ ನೇ ಕಲಂ ತಿದ್ದುಪಡಿ ಜಾರಿಗೊಳಿಸಿ ವರದಾನ ನೀಡಿದೆ. ಇದನ್ನು ಅನ್ಯ ಜಿಲ್ಲೆಗಳ ನಿವಾಸಿಗಳು ದುರುಪಯೋಗಕ್ಕೆ ಮುಂದಾಗಿದ್ದು. ದಯವಿಟ್ಟು ಇಲ್ಲಿನ ನಿವಾಸಿಗಳಾದ ಪಲಾನುಭವಿಗಳಿಗೆ ಮಾತ್ರ ಸದುಪಯೋಗಬೇಕಿದೆ. ಈ ಕುರಿತು ಸಂಘಟನೆ ಸಾಕಷ್ಟು ಹೋರಾಟಗಳ ಮೂಲಕ ಶ್ರಮಿಸುತ್ತಲಿದೆ ಆದರೆ ಈಗ ಇಲಾಖೆ ಕೆಲ ಅಧಿಕಾರಿಗಳು ಇಂತಹ ಅವಕಾಶಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಬಗ್ಗೆ ಅನುಮಾನ ಹುಟ್ಟಿದ್ದು ಕೂಡಲೇ ಈ ಭಾಗದ ಆಯಾ ಜಿಲ್ಲೆಯಲ್ಲಿ ಯಾರಾದರೂ ವಾಸಸ್ಥಳ, ಪಡಿತರ ಚೀಟಿ, ಮತದಾರರ ಚೀಟಿ, ಆಧಾರ ಕಾರ್ಡ ಸೇರಿದಂತೆ ಇತರೆ ದೃಢೀಕರಣಗಳಿಗೆ ಮನವಿ ಸಲ್ಲಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ಸ್ಥಳೀಯರಿಗೆ ಮಾತ್ರ ಆಧ್ಯತೇ ನೀಡಬೇಕೆಂದು ಅವರು ಒತ್ತಾಯಿಸಿದರು.
ಇದರಿಂದ ಸ್ಥಳೀಯ ನಿವಾಸಿಗಳಿಗೆ ಹಾಗೂ ಸೂಕ್ತ ಪಲಾನುಭವಿಗಳಿಗೆ ಅನುಕೂಲವಾಗಲಿದೆ ಇಲ್ಲದಿದ್ದಲ್ಲಿ ಭಾರಿ ಅನ್ಯಾಯವಾಗಲಿದ್ದು ಇದಕ್ಕೆ ಆಯಾ ಇಲಾಖೆ ಅಧಿಕಾರಿಗಳು ನೇರ ಹೊಣೆಗಾರರಾಗಲಿದ್ದಾರೆ ಎಂದು ತಿಳಿಸಿದ ಅವರು ಸಮಿತಿ ಈ ಕುರಿತು ಸಮಗ್ರ ಮಾಹಿತಿ ಪಡೆಯುವ ಮೂಲಕ ಹೆಚ್ಚಿನ ನಿಗಾವಹಿಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಭರಮಪ್ಪ ಬೆಲ್ಲದ, ನಿಂಗಪ್ಪ ಕಂಬಳಿ ಗಬ್ಬೂರು, ಮಹೇಶ ದೊಡ್ಡಮನಿ, ಮೋಹನ್ ಕಂದಾರಿ, ಮಂಜುನಾಥ ಬುಲ್ಟಿ, ದುರಗಪ್ಪ ಮ್ಯಾದನೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸ
0 comments:
Post a Comment