ಹೆಚ್.ಯು. ತಳವಾರ, ಮಾನ್ಯ ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಮುಂಜಾನೆ ೧೦.೩೦ ಕ್ಕೆ ಉದ್ಘಾಟಿಸಿದರು. ಹಾಗೂ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣವನ್ನು ಕೊಡಬೇಕೆಂದು ತಿಳಿಸಿದರು. ಹಾಗೂ ಇಂಜಿನೀಯರಿಂಗ್ ಶಿಕ್ಷಕರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಯುತ ಶಿಕ್ಷಣವನ್ನು ಕೊಡಲು ತಿಳಿಸಿದರು.
ಎ. ಎಂ. ಭೋಜದಾರ, ಜಂಟಿ ನಿರ್ದೇಶಕರು, ಆಡಳಿತ ವಿಭಾಗ, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ತಮ್ಮ ಭಾಷಣದಲ್ಲಿ ಶಿಕ್ಷಕರು ಸಮರ್ಪಣಾಭಾವದಿಂದ ವಿದ್ಯಾರ್ಥಿಗಳಿಗೆ ಬೋಧಿಸಬೇಕೆಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ಇನ್ನೊರ್ವ ಅತಿಥಿಯಾಗಿ ಆಗಮಿಸಿರುವ ಪ್ರೋ: ಡಿ.ಜಿ. ಕುಲಕರ್ಣಿ, ಜೈನ್ ಕಾಲೇಜ್ ಆಫ್ ಇಂಜಿನೀಯರಿಂಗ್, ಬೆಳಗಾವಿ ಇವರು ಮಾತನಾಡಿ, ಶಿಕ್ಷಕರು ಸಮಾಜದ ಸೃಷ್ಟಿಕರ್ತರು ಎಂದು ತಿಳಿಸಿದರು. ಪ್ರೋ. ಉಮೇಸಬಾಬು ಕೆ., ಪ್ರಿನ್ಸಿಪಾಲ, ಐ.ಎಸ್.ಎಸ್.ಎ.ಆರ್., ಎಂ.ಎಸ್.ಡಬ್ಲ್ಯೂ ಕಾಲೇಜ್, ಕೊಪ್ಪಳ,
ಎಸ್.ಸಿ. ಬೈರಪ್ಪನವರ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಗಜೇಂದ್ರಗಡ, ಎನ್. ಆರ್. ಕುಕನೂರ, ಪ್ರಾಚಾರ್ಯರು, ಡಾ:ಜಿ.ಎಸ್.ಎಂ.ಆರ್. ಪಾಲಿಟೆಕ್ನಿಕ್, ಕುಕನೂರ ಇವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಎ. ಆರ್. ಶಿವಕುಮಾರ್, ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಇವರು ಅಧ್ಯಕ್ಷತೆ ವಹಿಸಿದ್ದರು.
ವಾದಿರಾಜ ಮಠದ, ವಿಭಾಗಾಧಿಕಾರಿ ಇ & ಸಿ, ಇವರು ಕಾರ್ಯಕ್ರಮದ ಪ್ರಾಸ್ತಾವಿಕ ವರದಿ ಮಾಡಿದರು. ನಂತರ ಶ್ರೀಮತಿ ಭಾರತಿ ಎನ್. ಆಯ್ಕೆ ಶ್ರೇಣಿ ಉಪನ್ಯಾಸಕರು ಇವರು ಸ್ವಾಗತ ಕೋರಿದರು. ಜಿ. ಕೆ. ವಿಶ್ವನಾಥಗೌಡ, ಆಯ್ಕೆ ಶ್ರೇಣಿ ಉಪನ್ಯಾಸಕರು ಹಾಗೂ ಕೋ-ಆರ್ಡಿನೇಟರ್ ಇವರು ಕಾರ್ಯಕ್ರಮವನ್ನು ವಂದಿಸಿದರು. ಸಂತೋಷ ಹೆಚ್.ಎಂ. ಆಂಗ್ಲ ಉಪನ್ಯಾಸಕರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಭಾರತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.
0 comments:
Post a Comment