PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೨೪: ಇಡೀ ಸಮಾಜದಲ್ಲಿಯೇ ಕಡಿಮೆ ಸಂಖ್ಯೆಯಲ್ಲಿರುವ ಹಡಪದ ಸಮಾಜ ಭಾಂಧವರು ಸಲ್ಲಿಸುತ್ತಿರುವ ಅತ್ಯಂತ ಪ್ರಾಮಾಣಿಕ ಸೇವೆ ಅತ್ಯಮೂಲ್ಯವಾದದ್ದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಮಂಗಳವಾರ ಇಲ್ಲಿನ ಬೆಂಕಿನಗರದಲ್ಲಿ ಹಡಪದ ಸಮಾಜ ಕ್ಷಾರಿಕರ ಪತ್ತಿನ ಸಹಕಾರ  ಸಂಘದ ೩೧ ನೇ ವಾರ್ಷಿಕ ಮಹಾಸಭೆಯ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಒಂದು ಊರಿನಲ್ಲಿ ಇವರಿಲ್ಲದ ಪರಸ್ಥಿತಿಯನ್ನು ಉಹಿಸಿ ನೋಡಿ ಎಂದು ಅವರು ಮಾರ್ಮಿಕವಾಗಿ ಸಮಾಜದ ಜನತೆಯ ಅಗತ್ಯತೇಯನ್ನು ಏತ್ತಿಹಿಡಿದರು. ಹಡಪದ ಸಮಾಜವು ತುಳಿತಕ್ಕೆ ಓಳಗಾಗಿದ್ದು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರೆಯಬೇಕಿದೆ. ತಮ್ಮ ಮಕ್ಕಳನ್ನು ಉನ್ನತ ಮಟ್ಟದ ಶಿಕ್ಷಣ ಕೋಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಅವರಿಲ್ಲಿ ಕರೆ ನೀಡಿದರು.
ಸಂಘಟನೆ ಮೂಲಕ ಸಮಾಜ ಇನ್ನಷ್ಟು ಜಾಗೃತಗೊಳ್ಳಬೇಕಿದೆ ಅಲ್ಲದೇ ಸಮಾಜದಲ್ಲಿ ಮುಖಂಡತ್ವ ಮೂಲಕ ಮುಖ್ಯವಾಹಿನಿಗೆ ತರಲು ಪರಿಶ್ರಮಿಸುವ ಉತ್ತಮ ನಾಯಕರನ್ನು ಆಯ್ಕೆಗೊಳಿಸಿ ಸಂಘಟನೆ ಗಟ್ಟಿಗೊಳಿಸಿರಿ. ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಒತ್ತಾಯಕ್ಕೆ ತಮ್ಮ ಬೆಂಬಲವಿದ್ದು ಈ ಕುರಿತು ಮುಖ್ಯಮಂತ್ರಿಗಳ ಸಂಪರ್ಕಕ್ಕೆ ತಾವು ಅವಕಾಶ ಕಲ್ಪಿಸಿಕೊಡುವುದಾಗಿ ಅವರಿಲ್ಲಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸಭೆ ಸದಸ್ಯ ಪ್ರಾಣೇಶ ಮಾದನೂರ ಮತನಾಡಿ, ಸಮಾಜ ಕೇವಲ ಒಂದೇ ವೃತ್ತಿಗೆ ಸೀಮಿತವಾಗದೇ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸುವ ಮೂಲಕ ಮಕ್ಕಳನ್ನು ಇತರ ವೃತ್ತಿ ಹಾಗೂ ಉನ್ನತ ಹುದ್ದೆಗಳಿಗೆ ಕಳಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಸಮಾಜ ಜಾಗೃತವಾಗಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಪಕ್ಷಾತೀತವಾಗಿ ಸಹಕರಿಸಬೇಕೆಂದು ಹೇಳಿದರು.
ವೇದಿಕೆ ಮೇಲೆ ನಗರಸಭಾ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರು, ನಗರಸಭಾ ಸದಸ್ಯ ಪ್ರಾಣೇಶ ಮಹೇಂದ್ರಕರ್, ಕಾಂತಣ್ಣಸಾ ಮಗಜಿ, ಪ್ರಾಣೇಶ ಮಾದಿನೂರು, ಪತ್ರಕರ್ತ ಪರಮಾನಂದ ಯಾಳಗಿ, ಕಾಂಗ್ರೆಸ್ ಮುಖಂಡರಾದ ಗೂಳಪ್ಪ ಹಲಗೇರಿ, ಮುನಿರ್ ಸಿದ್ದೀಕಿ, ಸಂಘದ ಅಧ್ಯಕ್ಷ ನಿಂಗಪ್ಪ ಹಂದ್ರಾಳ, ಶರಣಪ್ಪ ದದೇಗಲ್, ಜಗದೀಶ ಮುದ್ದಾಬಳ್ಳಿ, ರಮೇಶ ಹಿಟ್ನಾಳ, ಮಂಜುನಾಥ ಅಂದ್ರಾಳ, ಗುರುಬಸಪ್ಪ ಮೆಳ್ಳಿಕೇರಿ, ಶರಣಪ್ಪ ಕುದರಿಮೋತಿ, ಶಶಿಕಲಾ ಕೋಳೂರು, ಶಾಂಭವಿ ಹಡಪದ, ಈಶಪ್ಪ ಓಜನಹಳ್ಳಿ, ಶಿವುಬಸವ ಇಟಗಿ, ಗವಿಸಿದ್ದಪ್ಪ ಕಾಟ್ರಳ್ಳಿ ಸೇರಿದಂತೆ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ನೂತನವಾಗಿ ಚುನಾಯಿತ ಸದಸ್ಯರಾದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯರಾದ ಲತಾ ಸೊಂಡೂರು, ಪ್ರಾಣೇಶ ಮಾದನೂರು, ಪ್ರಾಣೇಶ ಮಹೇಂದ್ರಕರ್, ಶಾಂಭವಿ ಹಡಪದ ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈಶಪ್ಪ ಒಜನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗುಡದಪ್ಪ ಕೊಳೂರು ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top