PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಜಗತ್ತಿನ ಸರ್ವ ಸಮಸ್ಯೆಗಳಿಗೆ ವಚನಸಾಹಿತ್ಯದಲ್ಲಿ ಪರಿಹಾರವಿದೆ ಎಂದು ನಗರದ ವಚನಶ್ರಾವಣ ಕಾರ್‍ಯಕ್ರಮದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಸಂದೇಶ ನೀಡಿದ ಬೀದರನ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಯವರು ಹೇಳಿದರು.
ಪ್ರಪಂಚವು  ಇಂದು ನಾಗಾಲೋಟದಿಂದ ಮುಂದುವರೆಯುತ್ತಿರುವುದು ಎಷ್ಟು ನಿಜವೋ ಅಷ್ಟೇ ನೈತಿಕ ಅಧಃಪತನವನ್ನು ಕಾಣುತ್ತಿದ್ದೇವೆ. ಯಾವುದೋ ಮೂಲದಿಂದ ಹಣ ಸಂಪಾದಿಸುವ ಮಾರ್ಗ ಹಿಡಿಯುವ ಬದಲು ಕಾಯಕ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಅತ್ಯಾಚಾರ, ಭ್ರಷ್ಟಾಚಾರ , ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆಗಳನ್ನು ಗುರು ಬಸವಣ್ಣನವರು ಛಲಬೇಕು ಶರಣಂಗೆ, ಪರಧನ ,ಪರಸ್ತ್ರೀ ಪರದೈವ ಒಲ್ಲೆನೆಂಬ ಎಂದು ಹೇಳಿದ್ದಾರೆ. ಶರಣ ಎಂದರೆ ಜಾಗೃತ ಮನುಷ್ಯ ಚಿಂತನೆ ನೀಡುವ ವ್ಯಕ್ತಿ ಎಂದು ಅರಿಯಬೇಕು ಎಂದು ಹೇಳಿದರು.
 ದುಡಿಯದೆ ಉಣ್ಣುವ ಗಳಿಸುವ ಪ್ರವೃತ್ತಿ ಬದಲಾಗಬೇಕಿದೆ. ದುಡಿಯದೇ ಇರುವ ವ್ಯಕ್ತಿಗೆ ಉಣ್ಣುವ ಹಕ್ಕಿಲ್ಲ ಎಂಬುದನ್ನೇ ಶರಣರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಮನುಷ್ಯನ ದೇಹ ರೋಗಗಳ ಖಜಾನೆಯಾಗುತ್ತಲಿದೆ. ಅದಕ್ಕೆ ಕಾರಣ ದೈಹಿಕ ಶ್ರಮ ಕಡಿಮೆಯಾಗಿರುವುದು ಆದ್ದರಿಂದ ದೈಹಿಕವಾಗಿ ಸದೃಡನಾದ ವ್ಯಕ್ತಿಯ ಮನಸ್ಸು ಸದೃಡವಾಗುತ್ತದೆ. ವಚನಸಾಹಿತ್ಯದಲ್ಲಿ ಜಗತ್ತಿನ ಹೊರಗಿನ ಸಮಸ್ಯೆಗಳಿಗೂ ಪರಿಹಾರವಿದೆ. ಮನುಷ್ಯ ಒಳಗಿನ ಅಂದರೆ ಒತ್ತಡ,ಖಿನ್ನತೆ, ಮಾನಸಿಕ  ಅಸ್ತಿರತೆ, ಏಕಾಗ್ರತೆ ಕೊರತೆ ಇವುಗಳಿಗೂ ಪರಿಹಾರವಾಗಿದೆ ಅದಕ್ಕೆ ವಚನಸಾಹಿತ್ಯವನ್ನು ಅಭ್ಯಸಿಸುವ ಪರಿಪಾಠ ರೂಡಿಸಿಕೊಳ್ಳಿ ಎಂದು ಹೇಳಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಬಸವಸಮಿತಿ ಜಿಲ್ಲಾಧ್ಯಕ್ಷ ಬಸವಾಜ ಬಳ್ಳೊಳ್ಳಿ ವಹಿಸಿದ್ದರು.ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ಗೌರವಾಧ್ಯಕ್ಷ ಪಂಪಾಪತಿ ಹೊನ್ನಳ್ಳಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಪ್ಪ ಶೆಟ್ಟರ್, ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಕೋಮಲಾ ಕುದರಿಮೋತಿ ಉಪಸ್ಥಿತರಿದ್ದರು.
ಕುಮಾರಿ ವರ್ಷಿಣಿ ಹಾಗೂ ಅನುಶ್ರೀ ವಚನಪ್ರಾರ್ಥಿಸಿದರು.ಶರಣ ಹನುಮೇಶ ಕಲ್ಮಂಗಿ ನಿರೂಪಿಸಿದರು. ಶಿವಕುಮಾರ ಕುಕನೂರ ಸ್ವಾಗತಿಸಿದರು. ರಾಜೇಶ ಸಸಿಮಠ ವಂದಿಸಿದರು.

Advertisement

0 comments:

Post a Comment

 
Top