PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಚಿಕ್ಕಬಳ್ಳಾಪುರದ  ಜನಶ್ರೀ ವಾಹಿನಿಯ ವರದಿಗಾರರ ಮೇಲೆ ಸೆಪ್ಟಂಬರ್ ೧೭ ರಂದು ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಖಂಡಿಸಿದರು. ಬುಧವಾರ ಈ ಕುರಿತು ಸಭೆ ನಡೆಸಲಾಯಿತು.
"ಚಿಕ್ಕಬಳ್ಳಾಪುರ ಜಿಲ್ಲೆಯ ಜನಶ್ರೀ ವಾಹಿನಿಯ ವರದಿಗಾರ ಮಲ್ಲಪ್ಪ  ಹಾಗೂ ಕ್ಯಾಮೆರಾಮನ್ ಮಹಾಂತೇಶ  ಮೇಲೆ ಹಲ್ಲೆ ಮಾಡಿರುವುದು ಹಾಗೂ ಕ್ಯಾಮೆರಾ,ಲ್ಯಾಪ್‌ಟಾಪ್  ನಾಶ ಮಾಡಿರುವ ಕೃತ್ಯ ಖಂಡನೀಯ. ಸಮಾಜಮುಖಿಯಾಗಿ, ಸತ್ಯಕ್ಕಾಗಿ ಕೆಲಸ ಮಾಡುವ ಪತ್ರಕರ್ತರ ಮೇಲೆ  ಇತ್ತೀಚಿನ ದಿನಗಳಲ್ಲಿ ಹಲ್ಲೆ,ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಸೂಕ್ತವಾದ ಕಾನೂನು ರೂಪಿಸಬೇಕು " ಎಂದು ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ  ಒತ್ತಾಯಿಸಿದರು.  .
    ಪದೇ ಪದೇ ಈ ರೀತಿಯ ಕೃತ್ಯಗಳು ನಡೆಯುತ್ತಲೇ ಇವೆ. ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ ಅಳವಂಡಿ, ಶರಣಪ್ಪ ಬಾಚಲಾಪೂರ, ಬಸವರಾಜ್ ಕರುಗಲ್, ದೊಡ್ಡೇಶ ಯಲಿಗಾರ್, ದೇವು ನಾಗನೂರ,ಗಂಗಾದರ ಬಂಡಿಹಾಳ,ಮಹೇಶ ಗೌಡ ಭಾನಾಪೂರ, ಮಾರುತಿ,ಮೌನೇಶ ಬಡಿಗೇರ,ಸಮೀರ್ ,ಸಿರಾಜ್ ಬಿಸರಳ್ಳಿ,ಪ್ರಕಾಶ ಕಂದಕೂರ,ಬಸವರಾಜ ಶೀಲವಂತರ,ದತ್ತು ಕಮ್ಮಾರ,ತಿಪ್ಪನಗೌಡ ಮಾಲೀಪಾಟೀಲ್,ಪರಮೇಶ ರಡ್ಡಿ ಹ್ಯಾಟಿ, ಶಿವರಾಜ್ ನುಗಡೋಣಿ, ಗುರುರಾಜ್ ಬಿ.ಆರ್. ಈರಣ್ಣ,ಶರಣಪ್ಪ ಕೊತಬಾಳ,ಶಂಕರ ಕೊಪ್ಪದ,ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top