PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ವಿದ್ಯಾರ್ಥಿ ಜೀವನದಲ್ಲಿ ಅದರಲ್ಲಿಯೂ ಕಾನೂನ ವಿಷಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳ ಬಗ್ಗೆ ಆಳವಾದ ಜ್ಞಾನ ಇರಬೇಕಾಗಿರುವುದು ಇಂದಿನ ಅವಶ್ಯಕ ಮತ್ತು ಅನಿವಾರ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಧೀಶರಾದ ಬಿ.ಎಸ್.ಚಾಗರಡ್ಡಿ ಅವರು ಸಲಹೆ ನೀಡಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಅವರು ರವಿವಾರದಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. 
ಕಾನೂನು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿಬೇಕಾಗಿರುವ ಪ್ರಯೋಗಿಕ ಜ್ಞಾನವನ್ನು ನ್ಯಾಯಾಲಯದಲ್ಲಿ ಪಡೆಯಬೇಕಾಗುತ್ತದೆ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಬಂದು ಆ ಜ್ಞಾನವನ್ನು ಪಡೆದುಕೊಳ್ಳುವುದು ತಮ್ಮ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ ಈ ಮಹಾವಿದ್ಯಾಲಯದಿಂದ ಪದವಿ ಪಡೆದು  ಹೊರ ಹೋಗುವ ವಿದ್ಯಾರ್ಥಿಗಳು ಯಶಸ್ವಿ ವಕೀಲರಾಗಲಿ ಎಂದು ಹಾರೈಸಿದರು. ದೇಶದ ಕಾನೂನು ಕ್ಷೇತ್ರದಲ್ಲಿ ಯುವ ಜನಾಂಗ ಬಹಳಷ್ಟು ಗುರುತಿಕೊಳ್ಳಬೇಕಿದೆ ಎಂದ ಅವರು ದೇಶದ ಭವಿಷ್ಯ ಯುವಕರಿಂದ ಮಾತ್ರ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.               
ರಾಜ್ಯ ಬಾರ ಕೌನ್ಸಿಲ್‌ನ ಸದಸ್ಯೆಯಾದ ಹಾಗೂ ಹಿರಿಯ ವಕೀಲರು ಆದ ಶ್ರೀಮತಿ ಸಂಧ್ಯಾ ಮಾದಿನೂರ ಮಾತನಾಡಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಬಹಳಷ್ಟು ಉತ್ಸುಕತೆಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದ ಅವರು ತಮ್ಮಿಂದ ಯಾವುದೇ ಸಲಹೆ  ಸೂಚನೆ ಹಾಗೂ ಮಾರ್ಗದರ್ಶನ ಬೇಕಾದ ಸಂಕೋಚ ಇಲ್ಲದೇ ಪಡೆಯಬೇಕು ಎಂದು ಅವರು ಹೇಳಿದರು. 
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಅವರು ಮಾತನಾಡಿದರು. ಕಾಂಗ್ರೆಸ್‌ನ ಪ.ಜಾ. ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಕಾಲೇಜಿನ ಜಿ.ಎಸ್. ಸುರೇಶ ಹಳ್ಳಕೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ.ಬಿ.ಬ್ಯಾಳಿಯವರು ವಹಿಸಿದ್ದರು. 
ಇದೇ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ಚಾಗರಡ್ಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಶ್ರೀಮತಿ ಸಂಧ್ಯಾ ಮಾದಿನೂರ ಅವರನ್ನು  ಕಾಲೇಜಿ ವತಿಯಿಂದ ಸನ್ಮಾನಿಸಲಾಯಿತು. ಮಹಾವಿದ್ಯಾಲದ ಪ್ರಾಚಾರ್ಯ ಡಾ. ಬಿ.ಎಸ್. ಹನಸಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯಾದ ಗಿರಿಜಾ  ಹಾಗು ಶಿಲ್ಪಾ ಪಾಟೀಲ್ ಪ್ರಾರ್ಥಿಸಿದರು, ಮಹೆರಾಜ್  ನಿರೂಪಿಸಿದರು

Advertisement

0 comments:

Post a Comment

 
Top