PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ದೆಹಲಿಯ ಭೀಕರವಾದ ಗ್ಯಾಂಗ್ ರೇಪ್ ಪ್ರಕರಣ ಮತ್ತು ಮಣಿಪಾಲದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರಗಳ ಕರಾಳ ನೆನಪು ಜನಮಾನಸದಿಂದ ಇನ್ನೂ ದೂರವಾಗಿಲ್ಲದ ಸಂದರ್ಭದಲ್ಲಿಯೇ ಐದು ಜನ ದುಷ್ಕರ್ಮಿಗಳು ಮುಂಬೈನ ಛಾಯಾಗ್ರಾಹಕ ಪತ್ರಕರ್ತೆಯ ಮೇಲೆ ಅತ್ಯಾಚಾರ ಪ್ರಕರಣ ನಡೆದಿದೆ. ಮುಂಬಯಿಯಂತ ಜನನಿಬಿಡಿನ ನಗರದಲ್ಲಿ ಪತ್ರಿಕಾರಂಗದಲ್ಲಿರುವ ಮಹಿಳೆಯ ಮೇಲೆಯೇ ಹೀಗಾದರೆ ಸಾಮಾನ್ಯ ಮಹಿಳೆಯರ ಗತಿ ಹೇಗೆ? ಹಾಗಾದಿ ಇದೇ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಆಕೆಯ ಆತ್ಮಹತ್ಯೆಯಿಂದ ಮುಚ್ಚಿಹೋಯಿತು. ವಿದೇಶಿ ಹೆಣ್ಣುಮಕ್ಕಳ ಮೇಲೆಯೂ ಸಾಕಷ್ಟು ಅತ್ಯಾಚಾರಗಳು ನಡೆದಿದ್ದರಿಂದ ಭಾರತದಲ್ಲಿ ಮಹಿಳೆರಿಗೆ ರಕ್ಷಣೆಯಿಲ್ಲ ಎನ್ನುವ ಕುಖ್ಯಾತಿ ಅಂತರಾಷ್ಟ್ರೀಯವಾಗಿ ಬೆಳೆದಿದೆ. ಇದನ್ನು ತಪ್ಪಿಸಲು ಈಗ ಸೆರೆಹಿಡಿದಿರುವವರಿಗೆ ಸರಿಯಾದ ಶಿಕ್ಷೆಯಾಗಬೇಕು ಮತ್ತು ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವ ಹೊಸ ಕಾಯ್ದೆ ರೂಪಿಸಬೇಕೆಂದು ಆಗ್ರಹಿಸಿ ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. 
ಹಿರಿಯರಾದ ವಿಠ್ಠಪ್ಪ ಗೋರಂಟ್ಲಿ,ಶರಣಪ್ಪ ಬಾಚಲಾಪೂರ ಮಾತನಾಡಿದರು. ಪತ್ರಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಬಸವರಾಜ್ ಬಿನ್ನಾಳ,  ದತ್ತು ಕಮ್ಮಾರ,ಶಿವರಾಜ್ ನುಗಡೋಣಿ,ಬಸವರಾಜ್ ಶೀಲವಂತರ, ಸಂತೋ ದೇಶಪಾಂಡೆ, ಅಮಿತ್, ಗುರುರಾಜ್ ಬಿ.ಆರ್, ತಿಪ್ಪನಗೌಡ ಪಾಟೀಲ್, ವಿಠ್ಠಪ್ಪ ದುತ್ತರಗಿ,ಕೆ.ನಿಂಗಜ್ಜ, ಗಂಗಾಧರ ಬಂಡಿಹಾಳ, ಶ್ರೀಪಾದ ಆಯಾಚಿತ್ ,ಸಿರಾಜ್ ಬಿಸರಳ್ಳಿ, ಪ್ರಕಾಶ ಕಂದಕೂರ, ನಾಭಿರಾಜ್ ದಸ್ತೆನವರ,ಸತೀಶ ಮರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top