PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಆ. ೩:  ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯು ಸಾಂಸ್ಕೃತಿಕ ನೆಲೆಗಟ್ಟಿನಿಂದ ಬೆಳೆದು ಬಂದಿರುವ ವೇದಿಕೆಯಾಗಿದ್ದು ಕೊಪ್ಪಳ ಜಿಲ್ಲಾ ಉತ್ಸವವನ್ನು ಅರ್ಥಪೂರ್ಣವಾಗಿ  ಆಚರಿಸಲು ಇಂದು ನಡೆದ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ ಸುರ್ವೆ ಹೇಳಿದರು
ಅವರು ಇಂದು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ  ನಡೆದ ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಪ್ಪಳ ಜಿಲ್ಲೆ ಎಂದು ಘೋಷಣೆಯಾದ ದಿನವಾದ ಆಗಸ್ಟ್ ೨೪ ರಂದು ಕೊಪ್ಪಳ ಜಿಲ್ಲಾ ಉತ್ಸವವನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು ಈ ವರ್ಷವೂ ಸಹ ಆಗಸ್ಟ್ ೨೪ ಮತ್ತು೨೫ ಹಾಗೂ೨೬ ರಂದು ಕೊಪ್ಪಳ ಜಿಲ್ಲಾ ಉತ್ಸವ ಮತ್ತು ತಿರುಳುಗನ್ನಡ ಸಾಹಿತ್ಯ ಸಮ್ಮೇಳನ  ನಗರದ ಹೃದಯ ಭಾಗವಾದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ ಎಂದರು.
ಮುಂದುವರಿದು ಮಾತನಾಡಿದ ಅವರು ಪ್ರಸಕ್ತವರ್ಷ ಜಿಲ್ಲಾ ಕೇಂದ್ರದಲ್ಲಿ  ಕೇವಲ ನಾಟಕ ಮತ್ತು ಮನರಂಜನೆ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಕೊಪ್ಪಳ ನಗರ ವೇದಿಕೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಿದೆ. ಈ ವರ್ಷದ ಉತ್ಸವದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗ್ರಾಮೀಣ ಕಲೆ ಕ್ರೀಡೆಗೆ ನೀಡಲಾಗಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶವನ್ನು ವೇದಿಕೆ ಹೊಂದಿದೆ. ಎಂದು ವೇದಿಕೆಯ ರಾಜ್ಯ ಅಧ್ಯಕ್ಷ ಮಹೇಶ ಬಾಬು ಸುರ್ವೆ ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ  ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ಜನಪ್ರಿಯವಾಗಿ  ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂಥ ಕಾರ್ಯಕ್ರಮಗಳನ್ನು ಕಳೆದ ಎಂಟು ವರ್ಷಗಳಿಂದ ಮಾಡುತ್ತ ಬಂದಿದ್ದು ಕನ್ನಕಡ ಮತ್ತು ಸಂಸ್ಕೃತ ಇಲಾಖೆ ನಾಗರೀಕರ ವೇದಿಕೆಗೆ ಹೆಚ್ಚು ಅನುದಾನ ನೀಡಬೇಕೆಂದು ಪೂರ್ವಭಾವಿ ಸಭೆಯಲ್ಲಿ ಒತ್ತಾಯ ಮಾಡಿದರು. 
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಂ.ಸಾಧಿಕ್ ಅಲಿ. ಉದಯ ಟಿವಿ ಕೊಪ್ಪಳ ಜಿಲ್ಲಾ ವರದಿಗಾರ ನಾಗರಾಜ ಸುಣಗಾರ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ  ವೈ.ಬಿ. ಜೂಡಿ. ಪರಮಾನಂದ ಯಾಳಗಿ ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಖಜಾಂಚಿ ಹನುಮಂತಪ್ಪ ಹಳ್ಳಿಕೇರಿ. ಜಿಲ್ಲಾ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ಪತ್ರಕರ್ತರಾದ ಮಂಜುನಾಥ ಕೋಳುರು. ಪುರುಷೋತ್ತಮ ಜೂಡಿ. ರಾಜಾಸಾಬ್ ತಾಳಕೇರಿ. ವೀರಕನ್ನಡಿಗ ಸಂಘಟನೆಯ ಜಿ

ಲ್ಲಾ ಅಧ್ಯಕ್ಷ ಶಿವಾನಂದ ಹುದ್ಲುರು ಮತ್ತು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಗಂಗಾವತಿಯ ಹಿರಿಯ ಪತ್ರಕರ್ತ ವೆಂಕಟೇಶ ಕುಲಕರ್ಣಿ ಕನಕಗಿರಿಯ ಪತ್ರಕರ್ತ ಸೋಮಶೇಖರಯ್ಯ ಹಿರೆಮಠ ಸಂಯುಕ್ತ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕ ಉಮೇಶ ಅಬ್ಬಿಗೇರಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಮಂಜುನಾಥ ಕೊಳೂರು ವಂದಿಸಿದರು.
ಇಂದು ಶಾಸಕರಿಂದ ಕೊಪ್ಪಳ ಜಿಲ್ಲಾ ಉತ್ಸವದ ಲಾಂಛನ  ಬಿಡುಗಡೆ
ಕೊಪ್ಪಳ: ಆ. ೩:  ಇದೆ ಆಗಸ್ಟ್ ೨೪ ಮತ್ತು೨೫ ಹಾಗೂ೨೬ ರಂದು ಕೊಪ್ಪಳ ಜಿಲ್ಲಾ ಉತ್ಸವ ಮತ್ತು ತಿರುಳುಗನ್ನಡ ಸಾಹಿತ್ಯ ಸಮ್ಮೇಳನ  ನಡೆಯಲಿದ್ದು ಇದರ ಲಾಂಛನವನ್ನು ಕೊಪ್ಪಳ  ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಆಗಸ್ಟ್ ೪ ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ರಾಜ್ಯ ಅಧ್ಯಕ್ಷ ಮಹೇಶ ಬಾಬು ಸುರ್ವೆ, ಜಿಲ್ಲಾ ಅಧ್ಯಕ್ಷ ಎಂಸಾಧಿಕ್ ಅಲಿ, ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ. ಉಪಾಧ್ಯಕ್ಷರಾದ ಪರಮಾನಂದ ಯಾಳಗಿ.ವೈ.ಬಿ.ಜೂಡಿ. ಜಿಲ್ಲಾ ಕಾರ್ಯದರ್ಶಿ ಎನ್.ಎಂ. ದೊಡ್ಡಮನೆ. ಖಜಾಂಚಿ ಹನುಮಂತ ಹಳ್ಳಿಕೇರಿ. ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜಾಸಾಬ್ ಎಂ.ತಾಳಕೇರಿ. ಪ್ರಕಾಶ ಡಂಬಳ ಬಸವರಾಜ ಗುಡ್ಲಾನೂರು. ಪುರುಷೋತ್ತಮ ಜೂಡಿ.ಮಂಜುನಾಥ ಕೋಳುರು. ಉದಯ ಟಿವಿ.ಜಿಲ್ಲಾ ವರದಿಗಾರ ನಾಗರಾಜ ಸುಣಗಾರ. ವೀರಣ್ಣ ಕಳ್ಳಿಮನಿ. ಎಂ.ಜಿ.ಕಟ್ಟಿಮನೆ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಹರೀಶ ಎಚ್.ಎಸ್.ಪಕೀರಪ್ಪ ಗೋಟೂರು ಉಮೇಶ ಅಬ್ಬಿಗೇರಿ. ಶೇಖರ ಎಂ.ಹಿರೆಮಠ.  ರಮೇಶ ಪವಾರ.  ಹರೀಶ ಕುಲಕರ್ಣಿ ರವಿಚಂದ್ರ ಬಡಿಗೇರ ಭಾಗವಹಿಸಲಿದ್ದು ಜಿಲ್ಲೆಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ ಬೇಕೆಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹನುಮಂತ ಹಳ್ಳಿಕೇರಿ ತಿಳಿಸಿದ್ದಾರೆ.

Advertisement

0 comments:

Post a Comment

 
Top