ಕೊಪ್ಪಳ : ಆ. ೪ : ಆ. ೨೪ ರಿಂದ ಪ್ರಾರಂಭವಾಲಿರುವ ಕೊಪ್ಪಳ ಜಿಲ್ಲಾ ಉತ್ಸವ ಅಂವಾಗಿ ಆ. ೨೬ ರಂದು ನಡೆಯಲಿರುವ ೫ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನನಗೆ ಸಂತಸ ತಂದಿದೆ ಎಂದು ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡ್ರು ಹೇಳಿದ್ದಾರೆ.
ಅವರು ಇಂದು ತಮ್ಮ ನಿವಾಸದಲ್ಲಿ ತಿರುಳ್ಗನ್ನಡ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳು ನೀಡಿದ ಆತ್ಮೀಯ ಆಹ್ವಾನವನ್ನು ಸ್ವಿಕರಿಸಿ ಮಾತನಾಡಿ, ಜಿಲ್ಲೆಗೆ ನಾನು ಕೊಟ್ಟಿರುವುದಕ್ಕಿಂತ ಜಿಲ್ಲೆ ನನಗೆ ಕೊಟ್ಟಿರುವ ಗೌರವ ಅಪಾರವಾಗಿದೆ. ಜಿಲ್ಲೆಯ ಸಾಂಸ್ಕೃತಿಕ ವಲಯವನ್ನು ನಾನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನೋಡುತ್ತೇನೆ ವಿನಃ ಲೌಕಿಕ ನೆಲೆಯಲ್ಲಿ ಅಲ್ಲ ಎಂದರು. ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ ನನಗೆ ಇಂಥ ದೊಡ್ಡ ಗೌರವ ನೀಡಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದು ಮಲ್ಲನಗೌಡ್ರು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ರಾಜ್ಯ ಅಧ್ಯಕ್ಷ ಮಹೇಶ ಬಾಬು ಸುರ್ವೆ ಅವರು ಅಧ್ಯಕ್ಷತೆ ವಹಿಸಿ ಜಿಲ್ಲಾ ಉತ್ಸವದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಜಿಲ್ಲಾ ಅಧ್ಯಕ್ಷ ಎಂಸಾಧಿಕ್ ಅಲಿ, ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ. ಉಪಾಧ್ಯಕ್ಷರಾದ ವೈ.ಬಿ.ಜೂಡಿ, ಜಿಲ್ಲಾ ಕಾರ್ಯದರ್ಶಿ ಎನ್.ಎಂ. ದೊಡ್ಡಮನಿ, ಖಜಾಂಚಿ ಹನುಮಂತ ಹಳ್ಳಿಕೇರಿ, ಉದಯ ಟಿವಿ ಜಿಲ್ಲಾ ವರದಿಗಾರ ನಾಗರಾಜ ಸುಣಗಾರ. ಉಮೇಶ ಅಬ್ಬಿಗೇರಿ. ಪತ್ರಕರ್ತ ಭಿಮಪ್ಪ ನಾಯ್ಕರ್, ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರು, ಉಪನ್ಯಾಸಕ ಹನುಮತಪ್ಪ ಅಂಡಗಿ, ಛಾಯಾಗ್ರಾಹಕ ಉಮೇಶ ಪೂಜಾರ್, ಸಂಘಟಕ ಮಂಜುನಾಥ ಗೊಡಬಾಳ, ಶಿಕ್ಷಕರಾದ ಎ. ಪಿ. ಅಂಗಡಿ, ಶ್ರಿನಿವಾಸ ಚಿತ್ರಗಾರ, ಸಾಹಿತಿ ಈಶ್ವರ ಹತ್ತಿ ಹಾಗೂ ಜಿಲ್ಲಾ ನಾರಿಕರ ವೇದಿಕೆಯ ಮತ್ತು ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಂಗಕರ್ಮಿ ವೈ. ಬಿ. ಜೂಡಿ ನಿರೂಪಿಸಿದರು. ಜಿಲ್ಲಾಧ್ಯಕ್ಷ ಎಂ. ಸಾದಿಕಅಲಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಜಿ.ಎಸ್. ಗೋನಾಳ ವಂದಿಸಿದರು.
0 comments:
Post a Comment