ಶ್ರೀಗುರುಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯಿಂದ ಕೆ.ಯು.ಐ.ಡಿಎಫ್.ಸಿ/ ಎನ್.ಕೆ.ಯು.ಎಸ್.ಐ.ಪಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವದ್ದಿ ಮತ್ತು ಹಣಕಾಸು ಸಂಸ್ಥೆಯ ಯೋಜನೆ ಅಡಿಯಲ್ಲಿ ಸ್ವ ಸಹಾಯ ಸಂಘಗಳ ಬಲವರ್ಧನೆ ಕಾರ್ಯಕ್ರಮ
ವನ್ನು ವಾರ್ಡ ನಂ. ೮ ಗೌರಿ ಅಂಗಳದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ್ ಮುರಡಿ ನಗರಸಭಾ ಸದಸ್ಯರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ವಾರ್ಡಿನ ಹಿರಿಯರಾದ ಮೌಲಾಹುಸೇನ್ ಕುಕನೂರ ಮತ್ತು ಮಂಜುನಾಥ ಗಾಳಿ, ಮಾಜಿ ನಗರಸಭೆಯ ಸದಸ್ಯರು, ಮತ್ತು ಮುಖ್ಯೋಪಾದ್ಯಾಯರಾದ ಹೆಚ್.ಎಸ್. ಲಕ್ಕುಂಡಿ, ಮತ್ತು ಪತ್ರಿಕಾ ಮಾದ್ಯಮದವರಾದ ಬಸವರಾಜ ಶೀಲವಂತರ, ಶರಣಪ್ಪ ಕೊತಬಾಳ, ಬಡಿಮಾ, ರಾಜಾಸಾಬ್ ಗೊಂಡಬಾಳ ಸಂಪನ್ಮೂಲ ವ್ಯಕ್ತಿಗಳು, ಯೋಜನಾಅಧಿಕಾರಿಗಳಾದ ವಜೀರಸಾಬ್ ತಳಕಲ್ಲ ಸಂಯೋಜಕರಾದ ಮೇಹರಾಜ ಮನಿಯಾರ, ಭಾಗವಹಿಸಿದ್ದರು, ಈ ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಪದ್ಮಾವತಿ ದಸ್ತೆನ್ನವರ ಪ್ರಾರ್ಥನೆಯೊಂದಿಗೆ ಮತ್ತು ಉದ್ಘಾಟನೆಯೊಂದಿಗೆ ಪ್ರಾರಂಬಿಸಲಾಯಿತು.
ನಂತರ ಪ್ರಾಸ್ಥಾವಿಕವಾಗಿ ವಜೀರಸಾಬ ತಳಕಲ್ಲ ಯೋಜನಾಧಿಕಾರಿಗಳು ಈ ಯೋಜನೆಯಲ್ಲಿಬರುವ ಉದ್ದೇಶಗಳು ಮತ್ತು ಇದರಿಂದ ಜನರಿಂದ ಅನುಕೂಲಗಳು ಮತ್ತು ಸಂಸ್ಥೆಯಿಂದ ನಗರದಲ್ಲಿ ಹಮ್ಮಿಕೊಳ್ಳುವ ಬಗ್ಗೆ ಸ್ವಚ್ಚತೆ ಮತ್ತು ತೆರಿಗೆ ಬಗ್ಗೆ ಹಾಗೂ ಶೌಚಾಲಯಗಳ ಬಗ್ಗೆ ವಯಕ್ತಿಕ ನಳಗಳನ್ನು ತೆಗೆದುಕೋಳ್ಳುವ ಬಗ್ಗೆ ಕೌಶಲ್ಯ ತರಬೇತಿಗಳ ಬಗ್ಗೆ ತಿಳಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಸಿದಂತ ಹೆಚ್.ಎಸ್ ಲಕ್ಕುಂಡಿ ಮುಖ್ಯೋಪಾದ್ಯಾಯರು, ಈ ಯೋಜೆಯಿಂದ ಆಗುವಂತ ಸೌಲತ್ತುಗಳನ್ನು ಸಹಕಾರದಿಂದ ನಗರದಲ್ಲಿ ವಾಸಿಸುವ ಜನರು ಪಡೆದುಕೊಂಡಲ್ಲಿ ನಮ್ಮ ನಗರ ಸುಂದರವಾಗಿ ಸ್ವಚ್ಚತೆಯಿಂದ ಕಾಣುತ್ತದೆ ಎಂದು ಮಾಹಿತಿಯನ್ನು ತಿಳಿಸಿದರು. ಹಾಗೂ ನಮ್ಮ ವಬಾರ್ಡಿನಲ್ಲಿ ಬರುವವ ಶಾಲೆಯ ಮುಂದೆ ನಾಗರಿಕರು ಪರಿಸರವನ್ನು ಹಾಳು ಮಾಡುತ್ತಿದದಾರೆ. ಇದನ್ನು ತಡೆಗಟ್ಟಲು ನಾವೆಲ್ಲರೂ ಎಚ್ಚರವಾಗಿ ನಮ್ಮ ಶಾಲೆಯನ್ನು ಗುಡಿಯಂತೆ ನೋಡಿಕೊಳ್ಳಬೇಕೆಂಬ ಮಾತನ್ನು ನಂತರ ಪತ್ರಿಕ ಮಾದ್ಯಮದವರಾದ ಬಸವರಾಜ ಶೀಲವಂತರ ಮೊದಲಿಗೆ ನಗರ ಸಭೆಯವರು ನಗರದಲ್ಲಿ ನಡೆಯುವ ಕಾಮಗಾರಿಯನ್ನು ಸರಿಯಾಗಿ ನೀರು ಹರಿದು ಹೋಗುವಂತೆ ಚರಂಡಿಗಳನ್ನು ನಿಮಾಣ ಮಾಡಬೇಕು ಅಧಿಕಾರಿಗಳು ಕೂಡ ಕಾಮಗಾರಿಯನ್ನು ಸರಿಯಾಗಿ ಪರಿಶಿಲನೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹಾಗೂ ನಗರದಲ್ಲಿರುವ ಶೌಚಾಲಯಗಳ ಸ್ಥಿತಿಗತಿಗಳ ಬಗ್ಗೆ ಮಾತನಾಡದಿರು.
ಸಂಪನ್ಮೂಲ ವ್ಯಕ್ತಿಗಳಾದ ರಾಜಾಸಾಬ್ ಗೊಂಡಬಾಳ ಅವರು ಸ್ವ ಸಹಾಯ ಸಂಘಗಳ ಬಲವರ್ಧನೆ ಕುರಿತು ಸಂಘಗಳು ಯಾವ ರೀತಿಯಾಗಿ ಲೆಕ್ಕ ಪತ್ರಗಳನ್ನು ಬರೆದಿಡಬೇಕು ಮತ್ತು ಉಳಿತಾಯದ ಬಗ್ಗೆ ಗುಂಪುಗಳಲ್ಲಿರುವ ನಿಯಮಗಳನ್ನು ಪಾಲಿಸಬೇಕೆಂದನ್ನು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಂತಕುಮಾರ ಸೊಂಪೂರ ಸಮುದಾಯ ಸಂಘಟಿಕರು ನಡೆಸಿದರು. ಸ್ವಾಗತವನ್ನು ಮೇಹರಾಜ ಮನಿಯಾರ ಯೋಜನಾ ಸಂಯೋಜಕರು ನೆರವೇರಿಸಿದರು. ವಂದನಾರ್ಪಣೆಯನ್ನು ಲತಾ ಎಂ. ಸಮುದಾಯ ಸಂಘಟಿಕರು ನೆರವೇಸಿದರು. ಮಾರುತಿ ಗುಜ್ಜಲ, ಮಾಲನಬೀ ಎಸ್, ಬಾಗವಹಿಸಿದ್ದರು.
0 comments:
Post a Comment