ಕೊಪ್ಪಳ ೦೫, ಸಾಮಾಜಿಕ, ಧಾರ್ಮಿಕ, ವೈಚಾರಿಕ, ಹಾಗೂ ನೈತಿಕ ಬದಲಾವಣೆಗೆ ವಚನ ಕ್ರಾಂತಿಯೇ ಕಾರಣವೆಂದು ನಿವೃತ್ತ ಶಿಕ್ಷಕರಾದ ಭೀಮನಗೌಡ ಪಾಟೀಲ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯಲಬುರ್ಗಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಯಲಬುರ್ಗಾ ಪಟ್ಟಣದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ ವಚನ ವೈಭವ ಹಾಗೂ ಮುಕ್ತ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ವಚನ ಗಳಬಗ್ಗೆ ಉಪನ್ಯಾಸ ನೀಡಿದ ಅವರು ನಮ್ಮ ನಾಡಿನ ಶರಣರು, ಮಾನವ ಅಂದರೆ ಏನು ಎಂಬುವದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ, ಪ್ರತಿಯೊಂದು ಜೀವಿಯನ್ನು ಪ್ರೀತಿಯಿಂದ ಕಾಣುವ ಮಾನವ ಧರ್ಮ ನಿಜಕ್ಕೂ ಶ್ಲಾಘನೀಯ ಎಂದರು.
ಕಜಾಪ ಅಧ್ಯಕ್ಷ ಮುನಿಯಪ್ಪ ಹುಬ್ಬಳ್ಳಿ, ಕಜಾಪ ಕಾರ್ಯದರ್ಶಿ ಶರಣಬಸವ ದಾನಕೈ, ಯಮುನಾ ಗಿಡ್ಡಿ, ಅನಂತನಾಡಿಗೇರ, ಬಸವರಾಜ ಕೊಂಡಗುರಿ ಇನ್ನಿತರರು ಮಾತನಾಡಿ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡರು.
ನೌಕರರ ಸಂಘದ ನೂತನ ನಿದೆಶಕ ಮರ್ಧಾನಸಾಬ ಕೊತ್ವಾಲ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಸ. ಶರಣಪ್ಪ ಪಾಟೀಲ, ನೀಲಪ್ಪ ಹಳ್ಳಿಕೇರಿ, ವೀರಪಾಕ್ಷ ಪತ್ತಾರ, ಕಲ್ಲಯ್ಯ ಹಿರೇಮಠ, ಗೊವಿಂದರಾಜು, ವೀರಯ್ಯ ಶಿವಪ್ಪಯ್ಯನಮಠ, ಖಾಜಾ ವಲಿ ಜರಕುಂಟಿ ಇನ್ನಿತರರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸದ್ದರು.
ಯಲಬುರ್ಗಾ ಕಸಾಪ ನಗರ ಘಟಕದ ಅಧ್ಯಕ್ಷ ಕಾರ್ಯಕ್ರಮ ನಿರೂಪಿಸಿದರು, ಸಂಚಾಲಕ ಮಾಂತೇಶ ಚಲವಾದಿ ಸ್ವಾಗತಿಸಿ ವಂದಿಸಿದರು.
0 comments:
Post a Comment