PLEASE LOGIN TO KANNADANET.COM FOR REGULAR NEWS-UPDATES

 : ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆ ಪಿಐ ವಿಜಯಕುಮಾರ ಬಿರಾದಾರ್ ಅವರು ಚಾಲಕರಿಗೆ ಸೂಚನೆ ನೀಡಿದರು.
  ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆ ಆವರಣದ ಪೊಲೀಸ್ ಕಲ್ಯಾಣ ಮಂಟಪದಲ್ಲಿ, ನಗರದ ಆಟೋ ಚಾಲಕರು ಸೇರಿದಂತೆ ವಿವಿಧ ವಾಹನಗಳ ವಾಹನ ಚಾಲಕರಿಗೆ ಏರ್ಪಡಿಸಲಾಗಿದ್ದ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅ
ವರು ಮಾತನಾಡಿದರು.
  ಪ್ರತಿಯೊಬ್ಬ ವಾಹನ ಚಾಲಕರು ವಾಹನ ಚಾಲನೆ ಮಾಡುವ ಸಮಯದಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.  ವಾಹನ ಚಾಲನೆ ಮಾಡುವ ಸಮಯದಲ್ಲಿ ವಾಹನ ಚಾಲನಪತ್ರ ಸೇರಿದಂತೆ ವಾಹನ, ವಿಮೆ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು.  ಸಮವಸ್ತ್ರವನ್ನು ಧರಿಸುವುದು ಕಡ್ಡಾಯವಾಗಿದ್ದು, ಇದರ ಮಹತ್ವವನ್ನು ಚಾಲಕರು ಅರಿತುಕೊಳ್ಳಬೇಕು.  ಆಟೋ ಚಾಲಕರು ನಗರದಲ್ಲಿ ಸಂಚರಿಸುವಾಗ ದಾರಿಯ ಮಧ್ಯದಲ್ಲಿಯೇ ಎಲ್ಲೆಂದರಲ್ಲಿ ನಿಲ್ಲಿಸಿ, ಹತ್ತಿಸುವುದು, ಇಳಿಸುವುದು ಮಾಡುವುದು ಸರಿಯಲ್ಲ.  ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದರ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು.  ಶಾಲಾ ವಾಹನಗಳು, ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಲ್ಲದೆ, ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ಬರುವುದರ ಬಗ್ಗೆ ಆದ್ಯತೆ ನೀಡಬೇಕು.  ವಾಹನಗಳ ಮೇಲ್ಛಾವಣೆ ಪ್ರಯಾಣ, ಫುಟ್‌ಬೋರ್ಡ್ ಪ್ರಯಾಣ, ಮಿತಿಮೀರಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಂತಹ ವಾಹನ ಚಾಲಕರು ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಸಂಚಾರ ಪೊಲೀಸ್ ಠಾಣೆ ಪಿಐ ವಿಜಯಕುಮಾರ ಬಿರಾದಾರ್ ಅವರು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು.
  ನಗರ ಸಂಚಾರ ಪೊಲೀಸ ಠಾಣೆ ಪಿಎಸ್‌ಐ ರವಿ ಪುರುಷೋತ್ತಮ ಅವರು ಮಾತನಾಡಿ, ವಾಹನ ಚಾಲಕರಿಗೂ ಸಾಮಾಜಿಕ ಜವಾಬ್ದಾರಿ ಇದ್ದು, ನಗರದಲ್ಲಿ ಅನುಮಾನಾಸ್ಪದವಾಗಿ ಸಂಚಾರ ನಡೆಸುವಂತಹ ವಾಹನಗಳು, ಜನರು ಇವರ ಬಗ್ಗೆ ಮಾಹಿತಿ ಸಂಗ್ರಹಿಸಬಹುದಾಗಿದ್ದು, ಇಂತಹ ಮಾಹಿತಿಗಳನ್ನು ಪೊಲೀಸರಿಗೆ ನೀಡಿದಲ್ಲಿ, ಕಳ್ಳತನ ಮುಂತಾದ ಅಪರಾಧಗಳನ್ನು ತಡೆಗಟ್ಟಲು ಸಹಾಯವಾಗಲಿದೆ ಎಂದರು.   ನಗರದ ಸಂಚಾರ ಠಾಣೆಯ ಹೆಚ್. ದೊಡ್ಡಣ್ಣ, ಡಿ.ಎಸ್. ಆಂಜನೇಯ  ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಹನ ಚಾಲಕರಿಗೆ ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.  ನಗರದ ಆಟೋ ಚಾಲಕರು, ಶಾಲಾ ವಾಹನಗಳ ಚಾಲಕರು ಸೇರಿದಂತೆ ನೂರಾರು ವಾಹನ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಸಂಚಾರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಸಹಕರಿಸುವುದಾಗಿ ವಾಗ್ದಾನ ಮಾಡಿದರು.

Advertisement

0 comments:

Post a Comment

 
Top