PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕಾಂಗ್ರೆಸ್  ಸರಕಾರ ಬಂದ ಮೇಲೆ ಈಗ ಹೊಸದಾಗಿ ನಿಗಮ,ಮಂಡಳಿ ಹಾಗೂ ಅಕಾಡೆಮಿಗಳ ಸದಸ್ಯರು ಹಾಗೂ ಅಧ್ಯಕ್ಷರ ನೇಮಕಾತಿ ನಡೆಯಲಿದೆ.  ಪ್ರತಿಸಲವೂ ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ಈ ಸಲವಾದರೂ ಸೂಕ್ತ ಪ್ರಾತಿನಿಧ್ಯ ಸಿಗಲಿ. ನಮ್ಮ ಜಿಲ್ಲೆಯವರನ್ನು ಸಹ ಸರಕಾರ ವಿವಿಧ ಅಕಾಡೆಮಿಗಳಿಗೆ ನೇಮಕಮಾಡಲಿ  ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೫೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. 
ನಮ್ಮ ಜಿಲ್ಲೆಯಲ್ಲಿ ಇತ್ತೀಚಿಗೆ ಶಿಷ್ಟ ಸಾಹಿತ್ಯ ಬೆಳೆಯುತ್ತಿದೆ. ಜಿಲ್ಲೆಯ ಸಾಹಿತ್ತಿಕ ಕೊಡುಗೆ ಗಮನಾರ್ಹವಾದದು. ನಮ್ಮ ಜಿಲ್ಲೆಯಲ್ಲಿ ಉತ್ತಮ ಬರಹಗಾರರಿದ್ದಾರೆ, ಹೋರಾಟಗಾರರು ಚಿಂತಕರು ಇದ್ದಾರೆ. ಅಕಾಡೆಮಿಗಳ ನೇಮಕದಲ್ಲಿ ಅವರನ್ನು ಸರಕಾರ ಪರಿಗಣಿಸಲಿ ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ದತ್ತಿನಿಧಿ ಬಹುಮಾನಗಳನ್ನು ಪಡೆದ ಶಿ.ಕಾ.ಬಡಿಗೇರ ಹಾಗೂ ಮಾಲಾ ಬಡಿಗೇರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿ.ಕಾ.ಬಡಿಗೇರ ಹಾಗೂ  ಮಾಲಾ ಬಡಿಗೇರ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ -ನೆನಯದ ಕವನ, ಶಾಂತಾದೇವಿ ಹಿರೇಮಠ- ಶಿಕ್ಷೆ ಎಂಬುದೇ ರಕ್ಷೆ, ಪುಷ್ಪಲತಾ ಏಳುಬಾವಿ- ನಮ್ಮಮ್ಮ, ವಿಜಯಲಕ್ಷ್ಮೀ ಮಠದ- ಬೀಜಮಂತ್ರ, ಅನಸೂಯಾ ಜಾಗಿರದಾರ- ಚಾಣಕ್ಯ,ಭೀಷ್ಮ, ಮಾಲಾ ಬಡಿಗೇರ-ಬೂಸ್ಟ್, ಸಿರಾಜ್ ಬಿಸರಳ್ಳಿ- ಪೈಜ್ ಅಹ್ಮದ್ ಪೈಜ್ ರ ಕವನಗಳನ್ನು ವಾಚನ ಮಾಡಿದರು. 
ಕಾರ್‍ಯಕ್ರಮದಲ್ಲಿ  ಶಿವಾನಂದಹೊದ್ಲೂರ, ಹನುಮಂತಪ್ಪ ಅಂಡಗಿ,ರಾಕೇಶ ಕಾಂಬ್ಳೇಕರ್,ಬಸವರಾಜ ಸಂಕನಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತ ಮತ್ತು ನಿರೂಪಣೆಯನ್ನು ಸಿರಾಜ್ ಬಿಸರಳ್ಳಿ ಮಾಡಿದರೆ, ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರು. 

Advertisement

0 comments:

Post a Comment

 
Top