ಕೊಪ್ಪಳ, ೫- ಶ್ರೀ ಯಾಜ್ಞವಲ್ಕ್ಯ ವೇದ ಗುರುಕುಲದಲ್ಲಿ ವೇದ ಹಾಗೂ ಕರ್ಮಕಾಂಡದ ವಿಷಯಗಳ ಕುರಿತು ಅಧ್ಯಯನಕ್ಕೆ ಪ್ರವೇಶ ಪ್ರಾರಂಭವಾಗಿವೆ.
ಈ ಕುರಿತು ಪ್ರಕಟಣೆ ನೀಡಿರುವ ಗುರುಕುಲ ಶ್ರೀ ಯಾಜ್ಞವಲ್ಕ್ಯ ವೇದ ಗುರುಕುಲವು ಹಲವಾರು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ವೇದ ಹಾಗೂ ಕರ್ಮಕಾಂಡದ ವಿಷಯಗಳ ಅಧ್ಯಯನವನ್ನು ಮಾಡುವ ೬ ರಿಂದ ೧೫ ವರ್ಷದೊಳಗಿನ ವಿದ್ಯಾರ್ಥಿಗಳು ಗುರುಕುಲ ನಿಯಮಗಳಿಗೆ ಒಳಪಟ್ಟು ಶುಕ್ಲ-ಯಜುರ್ವೇದ ಮೂಲ ಹಾಗೂ ಕರ್ಮಕಾಂಡ (ಪೌರೋಹಿತ್ಯ)ದ ೭ ವರ್ಷಗಳ ಪರ್ಯಂತ ವಿದ್ಯಭ್ಯಾಸಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟ ಉಪಹಾರ ಹಾಗೂ ವಸತಿ ಸೌಕರ್ಯವಿರುತ್ತದೆ. ಆಸ್ತಕರು ವೇ. ಕೊಪ್ರೇಶಾಚಾರ್ಯ ಅಗ್ನಿಹೋತ್ರಿ ಸಂಸ್ಥಾಪಕರು. ಸಂಚಾಲಕರು ಹಾಗೂ ಪ್ರಾಚಾರ್ಯರು ಶ್ರೀ ಯಾಜ್ಞವಲ್ಕ್ಯವೇದ ಗುರುಕುಲ ಪ್ಲಾಟ್ ನಂ. ೭. ೩ನೇ ಕ್ರಾಸ್ ಪ್ರಗತಿ ನಗರ, ಕಿನ್ನಾಳ ರಸ್ತೆ ಕೊಪ್ಪಳ. ದೂರವಾಣಿ ೯೪೪೮೪೨೭೬೬೪ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.