ಗಂಗಾವತಿ: ನಗರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ(ಎ.ಆರ್.ಟಿ.ಓ) ಆರಂಭಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಒತ್ತಾಯಿಸಿದೆ.
ಇತ್ತೀಚಿಗೆ ಮೈಸೂರನಲ್ಲಿ ನಡೆದ ರಾಜ್ಯ ಮಟ್ಟದ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನದಲ್ಲಿ ಭಾಗವಹಿಸಿದ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಸಮಾರಂಭವನ್ನು ಉದ್ಘಾಟಿಸಿದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
೧೯೮೨ ರಿಂದ ೧೯೮೮ ರವರೆಗೆ ಗಂಗಾವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎ.ಆರ್.ಟಿ.ಓ ಕಛೇರಿಯನ್ನು ಪ್ರಾದೇಶಿಕ ಸಾರಿಗೆ ಕಛೇರಿಯನ್ನಾಗಿ ಮೇಲ್ದರ್ಜಗೆ ಏರಿಸಲಾಗಿತ್ತು. ಆ ನಂತರ ೧-೪-೯೮ ರಿಂದ ಕೊಪ್ಪಳಕ್ಕೆ ಈ ಕಛೇರಿಯನ್ನು ವರ್ಗಾಯಿಸಲಾಗಿದೆ. ಇದರಿಂದ ನಗರದ ಜನತೆಗೆ ಅಡಚಣೆಯಾಗಿದೆ, ರಾಜ್ಯದ ಸಾಗರ, ಯಾದಗೀರ, ಬೈಲಹೊಂಗಲ ಮತ್ತು ಮುಂತಾದ ಕಡೆ ಇರುವಂತೆ ಎ.ಆರ್.ಟಿ.ಓ ಕಛೇರಿಯನ್ನು ಗಂಗಾವತಿಯಲ್ಲಿ ಆರಂಭಿಸಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.
0 comments:
Post a Comment