PLEASE LOGIN TO KANNADANET.COM FOR REGULAR NEWS-UPDATES

 ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ದಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಯುವಜನರಿಗೆ ಹಾಗೂ ಯುವಕ/ಯುವತಿ ಸಂಘಗಳಿಗೆ ೨೦೧೨-೧೩ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
೨೦೧೨ ರ ಏಪ್ರಿಲ್ ೦೧ ರಿಂದ ೨೦೧೩ ರ ಮಾರ್ಚ್ ೩೧ ರ ಅವಧಿಯಲ್ಲಿ ಯುವಕ/ಯವತಿ ಮಂಡಳಿ ಹಾಗೂ ಯುವಕ/ಯುವತಿಯರು ಕೈಗೊಂಡಿರುವ ಕಾರ್ಯಕ್ರಮಗಳ ಸಾಧನೆಗಳನ್ನು ಮಾತ್ರ ಪ್ರಶಸ್ತಿಗಾಗಿ ಪರಿಗಣಿಸಲಾಗುವುದು. ಯುವಕ-ಯುವತಿಯರು ೧೫ ರಿಂದ ೩೫ ವಯೋಮಿತಿಯವರಾಗಿರಬೇಕು, ೨೦೧೩ ರ ಮಾರ್ಚ್ ೩೧ಕ್ಕೆ ೩೫ ವರ್ಷ ಮೀರಬಾರದು, ವಯೋಮಿತಿ ಬಗ್ಗೆ ವಯಸ್ಸಿನ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿ ಸಲ್ಲಿಸಬೇಕು ಹಾಗೂ ಯಾವುದೇ ಕ್ರೀಮಿನಲ್ ಮೊಕದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ದೃಢೀಕರಣದ ಮೂಲ ಪ್ರತಿಗಳೊಂದಿಗೆ ಅರ್ಜಿಗಳನ್ನು  ಸಲ್ಲಿಸಬೇಕು.  ೨೦೧೨ ರ ಏಪ್ರಿಲ್ ೦೧ ರಿಂದ ೨೦೧೩ ರ ಮಾರ್ಚ್ ೩೧ ರ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳ ಅನುಸಾರ ಪತ್ರಿಕಾ ವರದಿ, ಛಾಯಾಚಿತ್ರ, ಬ್ಯಾನರಗಳು ಸ್ಪಷ್ಟವಾಗಿ ಕಾಣುವಂತೆ ಒದಗಿಸುವುದು, ಈ ಎಲ್ಲಾ ಸ್ಪಷ್ಟವಾದ  ವಿವರಗಳನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ ಈ ಕಛೇರಿಯಲ್ಲಿ ನಿಗದಿತ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಾಧನೆಗಳ ದಾಖಲೆಗಳನ್ನು ಲಗತ್ತಿಸಿ ಜು.೨೫ ರೊಳಗಾಗಿ ೩ ಪ್ರತಿಗಳೊಂದಿಗೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top