PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಜೂನ್ ತಿಂಗಳ ಪ್ರಾರಂಭ ಉಂಟಾದ ಪರಿಸ್ಥಿತಿಯಿಂದ ರೈತರು ಆತಂಕಕ್ಕೊಳಗಾಗಿದ್ದರು.  ವರುಣನ ಕೃಪೆಯಿಂದ ಈಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.   ಈಗಾಗಲೆ ಜಿಲ್ಲೆಯಲ್ಲಿ ಶೇ. ೬೩ ರಷ್ಟು ಬಿತ್ತನೆಯಾಗಿದೆ.
  ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, ಆ ಪೈಕಿ ೧೮೧೪೫೦ ಹೆ. ಖುಷ್ಕಿ,  ೩೮೧೫೦ ಹೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಹಾಗೂ ೩೨೯೦೦ ಹೆ. ಇತರೆ ಸಾಗುವಳಿ ಕ್ಷೇತ್ರವಿದೆ.    ಈ ಬಾರಿ ವಾಡಿಕೆ ೨೨೨. ೨ ಮಿ.ಮೀ. (ಜುಲೈ ಅಂತ್ಯದವರೆಗೆ) ಬದಲಾಗಿ ಜು. ೨೨ ರವರೆಗೆ ೨೦೫. ೧೬ ಮಿ.ಮೀ. ಉತ್ತಮ ಮಳೆಯಾಗಿದೆ.  ಜಿಲ್ಲೆಯ ೨೫೨೫೦೦ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ೧೫೯೧೦೬ ಹೆ. ನಲ್ಲಿ ಬಿತ್ತನೆಯಾಗಿದ್ದು ಶೇ. ೬೩ ರಷ್ಟು ಬಿತ್ತನೆಯಾದಂತಾಗಿದೆ.  ತುಂಗಭದ್ರಾ ಜಲಾಶಯ ಈಗಾಗಲೆ ಸಂಪೂರ್ಣ ಭರ್ತಿಯಾಗಿದ್ದು, ಜು., ೯ ರಿಂದಲೇ ಕಾಲುವೆಗಳಿಗೆ ನೀರು ಹರಿಸಲಾಗಿದೆ.  ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲೇ ೩೮೧೫೦ ಹೆ. ಬಿತ್ತನೆಯ ಗುರಿ ಈ ತಿಂಗಳ ಅಂತ್ಯಕ್ಕೆ ಶೇ. ೧೦೦ ರಷ್ಟು ಆಗುವ ಸಾಧ್ಯತೆ ಇದೆ.
ಮಳೆ : ಜಿಲ್ಲೆಯಲ್ಲಿ ಈ ವರ್ಷದಲ್ಲಿ ಒಟ್ಟಾರೆಯಾಗಿ ೨೦೫. ೧೬ ಮಿ.ಮೀ. ಮಳೆಯಾಗಿದೆ.  ಇದೇ ವರ್ಷದ ಮೇ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕ್ರಮವಾಗಿ ೫೪, ೭೩. ೫ ಮತ್ತು ೬೨. ೫ ಮಿ.ಮೀ. ಸರಾಸರಿ ಮಳೆ ಬಿದ್ದಿದೆ.  ಈ ವರ್ಷ ಕೊಪ್ಪಳ ತಾಲೂಕಿನಲ್ಲಿ ೨೩೩ ಮಿ.ಮೀ. ವಾಡಿಕೆಯ ಮಳೆ ಬದಲಿಗೆ ೨೪೧ ಮಿ.ಮೀ. ಮಳೆಯಾಗಿದೆ.  ಕುಷ್ಟಗಿ- ೨೧೪ ಮಿ.ಮೀ. ವಾಡಿಕೆಯ ಎದುರು ೨೧೬. ೬ ಮಿ.ಮೀ., ಯಲಬುರ್ಗಾ- ೨೨೯ ಮಿ.ಮೀ. ವಾಡಿಕೆಯ ಬದಲಿಗೆ ೧೮೪ ಮಿ.ಮೀ. ಹಾಗೂ ಗಂಗಾವತಿ ತಾಲೂಕಿನಲ್ಲಿ ೨೧೨ ಮಿ.ಮೀ. ವಾಡಿಕೆಯ ಬದಲಿಗೆ ೧೭೮. ೨ ಮಿ.ಮೀ. ಮಳೆಯಾಗಿದೆ.
ಬಿತ್ತನೆ : ಜಿಲ್ಲೆಯಲ್ಲಿ ಬಿದ್ದ ಮುಂಗಾರು ಮಳೆಯಿಂದ ಉತ್ತೇಜಿತರಾದ ರೈತರು ಕೃಷಿ ಚಟುವಟಿಕೆಯನ್ನು ಉತ್ತಮ ಬೆಳೆ ನಿರೀಕ್ಷೆಯಲ್ಲಿ ಪ್ರಾರಂಭಿಸಿದ್ದರು, ಇದೀಗ ಜಿಲ್ಲೆಯಲ್ಲಿ ಇನ್ನೂ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಹೊಸ ಹುರುಪು ಮೂಡಿದೆ.  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ  ೧೮೧೪೫೦ ಹೆ. ನಲ್ಲಿ ಬಿತ್ತನೆಯಾಗಿದೆ.  ಇದರಿಂದಾಗಿ ಒಟ್ಟು ಶೇ. ೬೩ ರಷ್ಟು ಬಿತ್ತನೆಯಾದಂತಾಗಿದೆ. ಕೊಪ್ಪಳ ತಾಲೂಕಿನಲ್ಲಿ ೬೪೬೦೦ ಹೆ. ಗುರಿಯ ಬದಲಿಗೆ ೩೪೯೯೭ ಹೆ. (ಶೇ. ೫೪. ೧೭), ಕುಷ್ಟಗಿ- ೬೮೨೫೦ ಹೆ. ಗುರಿಯ ಎದುರು ೫೭೬೩೭ ಹೆ. (ಶೇ. ೮೪. ೪೫), ಯಲಬುರ್ಗಾ- ೫೫೫೨೦ ಹೆ. ಗುರಿಯ ಬದಲಿಗೆ ೩೯೦೫೦ ಹೆ.(ಶೇ. ೭೦. ೩೪), ಹಾಗೂ ಗಂಗಾವತಿ ತಾಲೂಕಿನಲ್ಲಿ ೬೪೧೩೦ ಹೆ. ಗುರಿಯ ಬದಲಿಗೆ ೨೭೭೮೨ ಹೆ. (ಶೇ. ೪೩. ೩೨) ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.  ಗಂಗಾವತಿ ತಾಲೂಕಿನಲ್ಲಿ ಬಹುಭಾಗ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವುದರಿಂದ, ಕಾಲುವೆಗಳಿಗೆ ನೀರು ಹರಿಸಲಾಗಿದ್ದು, ಭತ್ತ ನಾಟಿಗೆ ರೈತರು ಸಜ್ಜುಗೊಂಡಿದ್ದಾರೆ.  ಜುಲೈ ತಿಂಗಳಾಂತ್ಯದ ವೇಳೆಗೆ ಶೇ. ೯೦ ರಷ್ಟು ಬಿತ್ತನೆಯಾಗುವ ಸಾಧ್ಯತೆ ಇದೆ.
  ಜಿಲ್ಲೆಯಲ್ಲಿ ಈ ಬಾರಿ ಮುಸುಕಿನ ಜೋಳ ಬೆಳೆ ಅತಿಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ.  ಈಗಾಗಲೆ ೧೦೬೫೪ ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದ್ದು,  ಬಿತ್ತನೆ ಬೀಜ ಹಾಗೂ  ಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ಜಂಟಿಕೃಷಿ ನಿರ್ದೇಶಕ ಪದ್ಮಯ ನಾಯಕ್  ತಿಳಿಸಿದ್ದಾರೆ.

Advertisement

0 comments:

Post a Comment

 
Top