ಎಬಿವಿಪಿಯ ಪ್ರಮುಖ ಬೇಡಿಕೆಗಳು
೧. ೩ನೇ ಸುತ್ತಿನ ಕೌನ್ಸಲಿಂಗ್ ನಡೆಸುವ ಮೂಲಕ ಪೂರ್ಣ ಪ್ರಕ್ರಿಯೆ ಮಾಡಬೇಕು.
೨. ವಿದ್ಯಾರ್ಥಿಗಳಿಂದ ಹಲವಾರು ಕಾಲೇಜುಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಲು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ತುರ್ತಾಗಿ ದೂರು ಕೇಂದ್ರಗಳನ್ನು ತೆರೆಯಬೇಕು.
೩. ಈಗಾಗಲೇ ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹೆಚ್ಚುವರಿ ಹಣವನ್ನು ಕೂಡಲೇ ಹಿಂತಿರುಗಿಸಬೇಕು. ನೀಡದೇ ಇರುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು
೪. ಡಿಪ್ಲೊಮೋ ಲ್ಯಾಟರಲ್ ಪ್ರವೇಶಕ್ಕೆ ಎಲ್ಲಾ ಸುತ್ತಿನ ಕೌನ್ಸಲಿಂಗ್ ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
೫. ಹೆಸರಿಗಷ್ಟೆ ಆನ್‌ಲೈನ್ ಪ್ರವೇಶ ಪ್ರಕ್ರಿಯೆ ಎಂಬದು ಗೋಚರಿಸುತ್ತಿದ್ದು, ತಕ್ಷಣವೇ ಆನ್‌ಲೈನ್ ವ್ಯವಸ್ಥೆಯನ್ನು ಸುಧಾರಿಸಬೇಕು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿ.ಇ.ಟಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ . ಈ ಪತ್ರಿಭಟನೆಯ ನೇತೃತ್ವವನ್ನು ರಾಕೇಶ ಪಾನಘಂಟಿ, ಮೌನೇಶ ಕಮ್ಮಾರ, ಬಸವರಾಜ, ನಾಗರಾಜ, ಮಲ್ಲಿಕರ್ಜುನ, ಶಿವಾನಂದ, ಶರಣು ಚೌದ್ರಿ, ನಾಗರಾಜ ಕಂದಗಲ್, ಪ್ರತಾಪ, ಶಿವಾನಂದ ಬಿರಾದಾರ, ಉಪಸ್ಥಿತರಿದ್ದರು.
0 comments:
Post a Comment