PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜು. ೨೪ : ನಾಟಕ ಸಾಹಿತ್ಯದ ಒಂದು ರೂಪ. ಮೊದಲು ಸಂಸ್ಕೃತ ನಾಟಕಗಳಿದ್ದವು. ಮಿತ್ರವೃಂದ ಗೋವಿಂದ ಅಳಸಿಂಗರಾರ್‍ಯನ ಕನ್ನಡದ ಮೊದಲ ನಾಟಕ. ಅದು ಕೂಡ ಸಂಸ್ಕೃತ ನಾಟಕದ ಅನುವಾದವಾಗಿದೆ ಎಂದು ನಗರದ ಖ್ಯಾತ ವೈದ್ಯ ಡಾ|| ಎಂ.



ಬಿ. ರಾಂಪೂರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲಲಿತಕಲಾ ನಾಟ್ಯ ಸಂಘ ಕುಕನೂರು ಇವರ ಸಹಯೋಗಲ್ಲಿ ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ ಅವರ ಸಹಾಯಾರ್ಥ ನಗರದ ಸಾಹಿತ್ಯಭವನದಲ್ಲಿ ಮಧ್ಯಾಹ್ನ ಆಯೋಜಿಸಿದ್ದ ಅಜಾತ ಶ್ರೀ ನಾಗಲಿಂಗ ಲೀಲೆ ಎಂಬ ಭಕ್ತಿಪ್ರಧಾನ ನಾಟಕವನ್ನು ಉದ್ಘಾಟಿಸಿ ಮಾತನಾಡಿ, ಟಿ.ಪಿ. ಕೈಲಾಸಂ, ಶ್ರೀರಂಗ ಮೊದಲಾದವರು ಆಧುನಿಕ ನಾಟಕಗಳನ್ನು ಬರೆದರು. ಕಂಪನಿ ನಾಟಕಗಳು ನಮಗೆಲ್ಲ ಪರಿಚಿತ.  ರೆಹಮಾನೆವ್ವ ಕಲ್ಮನಿಯವರ ನಾಟಕ ನೋಡಿದ್ದೇನೆ. ಅವರ ಮಗ ಬಾಬಣ್ಣ ಕಲ್ಮನಿ ಪ್ರಸಿದ್ಧ ನಟರು. ದೊಡ್ಡ ಕಲಾವಿದರು. ಅವರು ಅಭಿನಯಿಸುವ ಈ ನಾಟಕವನ್ನು ಉದ್ಘಾಟಿಸುವುದು ನನಗೆ ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿ ಮುನಿಯಪ್ಪ ಹುಬ್ಬಳ್ಳಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ವೃತ್ತಿ ರಂಗಭೂಮಿಗೆ ತುಂಬ ಪ್ರಸಿದ್ಧವಾದದ್ದು. ಶಿರಹಟ್ಟಿ ವೆಂಕೋಬರಾಯರು, ಗರುಡ ಸದಾಶಿವರಾಯರು, ತಳಕಲ್ಲ ವೆಂಕರಡ್ಡಿಯವರು, ರೆಹಮಾನೆವ್ವ ಕಲ್ಮನಿ ಪ್ರಸಿದ್ಧರು. ಅದರಲ್ಲೂ ಯಲಬುರ್ಗದಲ್ಲಿ ೬೯ ನಾಟಕ ಕಂಪನಿಳಿದ್ದವು. ನೂರಾರು ಪ್ರಸಿದ್ಧ ನಟ ನಟಿಯರು ಇದ್ದರು. ಕಷ್ಟ ಸ್ಥಿತಿಯಲ್ಲಿರುವ ನಾಟಕ ಕಂಪನಿಗಳು ಕುಕನೂರು ಹಾಗೂ ಯಲಬುರ್ಗಾಗಳಲ್ಲಿ ನಾಟಕ ಪದ್ರರ್ಶಿಸಿ ಹಣ ಮಾಡಿಕೊಂಡು ಹೋಗುತ್ತವೆ ಎಂದರು. ಬಾಬಣ್ಣ ಕಲ್ಮನಿ ಹಾಗೂ ರೆಹಮಾನೆವ್ವ ಕಲ್ಮನಿ ದೊಡ್ಡ ನಟರು. ಸ್ವಾತಂತ್ರ್ಯಪೂರ್ವದಲ್ಲಿ ೧೯೪೫ರಲ್ಲಿ ಲಲಿತಕಲಾ ನಾಟ್ಯ ಸಂಘ ಕಟ್ಟಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಸ್ವಾಗತ ಕೋರಿದರು. ಪತ್ರಕರ್ತ ಹಾಗೂ ಜಾನಪದ ಕಲಾವಿದ ವೈ. ಬಿ. ಜೂಡಿ ಸಮಾರಂಭವನ್ನು ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ನಂತರ ನಡೆದ ನಾಟಕ ಪ್ರರ್ಶನಕ್ಕೆ ಕಿಕ್ಕಿರಿದು ಪ್ರೇಕ್ಷಕರು ಸೇರಿದ್ದರು.



ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿಗೆ ಹೃದಯಸ್ಪರ್ಶಿ ಸನ್ಮಾನ, ಲಕ್ಷ ರೂ. ಹಮ್ಮಿಣಿ ಅರ್ಪಣೆ
ಕೊಪ್ಪಳ, ಜು. ೨೪ : ನಗರದ ಸಾಹಿತ್ಯಭವನದಲ್ಲಿ ಜು. ೨೧ರ ಸಂಜೆ ನಡೆದ ಸಮಾರಂಬದಲ್ಲಿ ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ ಹಾಗೂ ಅವರ ಶ್ರೀಮತಿ ಮೆಹಬೂಬಬಿ ಅವರಿಗೆ ಅಭಿಂದನ ಸಮಿತಿಯಿಂದ ಒಂದು ಲಕ್ಷ ರೂ. ಹಮ್ಮಿಣಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರದರ್ಶನಗೊಂಡ ಅಜಾತ ಶ್ರೀ ನಾಗಲಿಂಗ ಲೀಲೆ ನಾಟಕದಲ್ಲಿ ರಂಗ ನಟ ಎಂ.ಎಸ್. ಕೊಟ್ರೇಶ  ನಾಗಲಿಂಗ, ಬಾಬಣ್ಣ ಕಲ್ಮನಿ ಶಿಶುನಾಳ ಶರೀಫ, ಬರಮಣ್ಣ ದಫೇದ ಗರಗದ ಮಡಿವಾಳೇಶ್ವರ, ಸಮಗಾರ ಭೀಮವ್ವನ ಪಾತ್ರಲ್ಲಿ ಅನ್ನಪೂರ್ಣ ಸಾಗರ, ಬಾಲನಾಗಲಿಂಗನಾಗಿ ಪ್ರತಾಪ ಮುಂತಾವರು ಅಭಿನಯಿಸಿದ್ದರು.
ನಾಟಕ ಪ್ರದರ್ಶನವನ್ನು ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಡಾ|| ಎಂ. ಬಿ. ರಾಂಪುರ ಅವರು ಉದ್ಘಾಟಿಸಿದರು. ಸಾಹಿತಿ ಎಚ್. ಎಸ್. ಪಾಟೀಲ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಾಹಿತಿ ಎ. ಎಂ. ಮದರಿ ಅವರು ವೃತ್ತಿ ರಂಗಭೂಮಿ ಕುರಿತು ಮಾತನಾಡಿರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ. ಬಿ. ಬ್ಯಾಳಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಕ್ಷ್ಮೇಶ ಬಡಿಗೇರ, ಈಶ್ವರ ಹತ್ತಿ, ಮಲ್ಲಿಕಾರ್ಜುನಗೌಡ, ನಿವೃತ್ತ ತಹಶೀಲ್ದಾರ ವೆಂಕನಗೌಡ ಪಾಟೀಲ ಪಾಲ್ಗೊಂಡಿದ್ದರು. ರಂಗನಟ ಎಸ್.ಎನ್. ತಿಮ್ಮನಗೌಡ ನಿರೂಪಿಸಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ವಂದಿಸಿದರು.


Advertisement

0 comments:

Post a Comment

 
Top