ಗಂಗಾವತಿ೨೧: ಕವಿ ಬರೆದ ಕಾವ್ಯಕ್ಕೆ ಅನುಭವಿತ ಕಲಾವಿದ ಧ್ವನಿ ಸಂಯೋಜನೆ ಮಾಡಿದಾಗ ಕವಿಗೂ ಮತ್ತು ಕಾವ್ಯಕ್ಕೂ ಮೆರಗು ಬರುತ್ತದೆ. ಕಲಾವಿದನ ಧ್ವನಿಗೂ ಬೆಲೆ ಬರುತ್ತದೆ ಎಂದು ರಾಜ್ಯ ಮಟ್ಟದ ಹೋರಾಟದ ಹಾಡುಗಾರ ಡಿಂಗ್ರಿ ನರಸಪ್ಪ ಹೇಳಿದರು.
ಕ್ರಾಂತಿಕಾರಿ ಯುವಜನ ಸಂಘ, ಅಖಿಲ ಭಾರತ ವಿದ್ಯಾರ್ಥಿ ಸಂಘ ಹಾಗೂ ಸ್ಲಂ ಜನರ ಸಾಂಸ್ಕೃತಿಕ ಪ್ರತಿಭಾ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ದಿನಾಂಕ:೧೯ ರಿಂದ ೨೧-೦೭-೨೦೧೩ರ ವರೆಗೆ ಜರುಗಿದ ಮೂರು ದಿನಗಳ ಹೋರಾಟದ ಹಾಡುಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಹಾಡು ಮನುಷ್ಯನ ಅಭಿವ್ಯಕ್ತಿಯ ಒಂದು ಪ್ರಕ್ರಿಯೆ. ಇದರ ಮೂಲಕ ಶ್ರಮ ಸಂಸ್ಕೃತಿಯ ಹಕ್ಕಿಗಾಗಿ ಹಾಡುಗಳು ಹೋರಾಟದ ಸ್ವರೂಪಕ್ಕೆ ಶಕ್ತಿ ನೀಡಿದವು. ಇದರಿಂದ ಚಳುವಳಿಗೆ ಮತ್ತಷ್ಟು ಮೆರಗು ಬರಲು ಕಾರಣವಾಯಿತೆಂದು ಡಿಂಗ್ರಿ ನರಸಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ ಜಿಲ್ಲಾ ಸಂಚಾಲಕರಾದ ಕಾ. ಜೆ. ಶಾಂತಕುಮಾರಿಯವರು ಮಾತನಾಡುತ್ತ ಯುವಜನತೆ ಸಮಾಜದ ದಾರಿದ್ರ್ಯವನ್ನು ಸರಿಪಡಿಸುವ ಹಾದಿಯತ್ತ ಹೆಜ್ಜೆ ಹಾಕಬೇಕು. ಹೋರಾಟದ ಜೊತೆಗೆ ಕ್ರಾಂತಿಗೀತೆಗಳಲ್ಲಿ ಹಾಡು ಕಲೆ ಕರಗತವಾಗಬೇಕು. ಮುಂದಿನ ಪೀಳಿಗೆಗೆ ಹೋರಾಟದ ಹಾಡುಗಳು ಉಳಿಯಬೇಕು ಎಂದು ಕರೆನೀಡಿದರು
ಎಐಸಿಸಿಟಿಯು ಕಾರ್ಯಾಲಯದಲ್ಲಿ ಜರುಗಿದ ಸಮಾರೋಪ ಸಮಾರಂಭದ ವೇದಿಕೆಯ ಮೇಲೆ ರಂಗ ನಿರ್ದೇಶಕರಾದ ಶ.ಶಿ. ಪಾಟೀಲ್, ಜ್ಯೋತಿಬಾ ಪುಲೆ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿಯಾದ ಕಾ. ಶಕುಂತಲಾ ನಾಯಕ, ಎಐಸಿಸಿಟಿಯು ಸದಸ್ಯರಾದ ಕಾ. ಪಾರ್ವತಮ್ಮ, ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕ ಸಂಘದ ಜಿಲ್ಲಾ ಸಂಚಾಲಕ ಕಾ.ಏಸಪ್ಪ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಲ್ಲಾಗಿರಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾ. ವೀರೇಶ ಹಗೆದಾಳ್ ಸ್ವಾಗತಿಸಿದರು, ಕಾ. ರಾಘವೇಂದ್ರ ವಂದಿಸಿದರು. ಈ ಸಂದರ್ಭದಲ್ಲಿ ಕೆಲವು ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
0 comments:
Post a Comment