ಕೊಪ್ಪಳ : ದಿನಾಂಕ ೧೮ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕೊಪ್ಪಳದ ಬನ್ನಿಕಟ್ಟಿ ವಿಜಯ ನಗರ ಪ್ರೌಢಶಾಲೆಯ ೧೦ ತರಗತಿ ವಿದ್ಯಾರ್ಥಿಗಳಿಗೆ ಯೂನಿಸೇಫ್ ಜಿಲ್ಲಾ ಮಕ್ಕಳ ರಕ್ಷಣೆ ಯೋಜನೆ ಸಮುದಾಯ ಸಂಘಟಕರಾದ ಆನಂದ ಎನ್ ಹಳ್ಳಿಗುಡಿ ತೆರೆದ ಮನೆ ಕಾರ್ಯಕ್ರಮ ಆಯೋಜಿಸಿದ್ದರು
ಈ ಕಾರ್ಯಕ್ರಮದಲ್ಲಿ ಪಿ.ಎಸ್.ಐ ಆಂಜನೇಯ, ನೇತ್ರಾವತಿ ಪಾಟಿಲ, ಇಲಾಖೆಯ ಹುದ್ದೆಗಳು, ಸಿಬ್ಬಂದಿ ಸಂಖ್ಯಾ ಬಲಾ, ಕತ್ಯರ್ವಗಳು ಹಾಗೂ ಬಾಲ್ಯ ವಿವಾಹ, ಸಮಾಜದಲ್ಲಿ ಶಾಂತಿ ಮತ್ತು ನ್ಯಾಯ ಕಾಪಾಡುವಲ್ಲಿ ಪೊಲೀಸರ ಪಾತ್ರದ ಬಗ್ಗೆ ಮಕ್ಕಳಿಗೆ ಅಚ್ಚು ಕಟ್ಟಾಗಿ ಮಾಹಿತಿ ನೀಡಿದರು. ಕೊಪ್ಪಳ ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ, ಮಕ್ಕಳ ಸಾಗಾಣಿಕೆ ಜಾಲದ ಬಗ್ಗೆ ಪ್ರತಿಯೊಬ್ಬರು ಸಿವಿಲ್ ಪೊಲೀಸರಾಗಿ ಸ್ವ ಪ್ರೇರಣೆಯಿಂದ ಇಲಾಖೆಗೆ ಮಾಹಿತಿ ತಿಳಿಸಲು ಮಕ್ಕಳಿಗೆ ಪ್ರೇರೆಪಿಸಿದರು.
ಮಕ್ಕಳು ಮೋಸ ವಂಚನೆ, ಕಳ್ಳತನದಿಂದ ಊರವಿದ್ದು ರಾಷ್ರ್ಟಪ್ರೇಮ, ರಾಷ್ರ್ಟಭಕ್ತಿ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೇಗಳಾಗಲು ಕರೆನೀಡಿದರು. ಮಕ್ಕಳಲ್ಲಿ ಬಾಲ್ಯ ವಿವಾಹ, ಕಾನೂನು ಅಪರಾದದಲ್ಲಿ ಪಾಲ್ಗೊಂಡ ಎಲ್ಲರಿಗೂ ಶಿಕ್ಷೆ ಖಂಡಿತ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ ಇಲಾಖೆಯ ೧೦೦ ಅಥವಾ ಮಕ್ಕಳ ಸಹಾಯವಾಣಿ ೧೦೯೮ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದರು. ಠಾಣೆಯಲ್ಲಿ ಕಾರ್ಯ ವೈಖರಿಯ ಬಗ್ಗೆ ತಿಳಿಸುತ್ತಾ ರೈಫಲ್ ( ರಿವಾಲ್ವಾರ್ ) , ಬಂದಿಖಾನೆ ವಾಕಿಟಾಕಿ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಶ್ರೀನಿವಾಸ, ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
0 comments:
Post a Comment