PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜು.೧೯: ಕೊಪ್ಪಳ ಜಿಲ್ಲಾ ಹಾಗೂ ತಾಲೂಕ ವಿಶ್ವಕರ್ಮ ಸಮಾಜ, ತಾಲೂಕ ವಿಶ್ವಕರ್ಮ ನೌಕರರ ಸಂಘ ಹಾಗೂ ವಿಶ್ವಕರ್ಮ ವಿದ್ಯಾರ್ಥಿ ನಿಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಾವಂತ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಜು.೨೧ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಸಿರಸಪ್ಪಯ್ಯ ಸ್ವಾಮಿ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು ಗಿಣಿಗೇರಿಯ ದೇವೀಂದ್ರ ಮಹಾಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಮಹಾಸ್ವಾಮಿಗಳು, ಕೊಪ್ಪಳ ಶಾಖಾ ಮಠದ ಲೆಕ್ಕಿಹಾಳದ ಸಿರಸಪ್ಪಯ್ಯ ಮಹಾಸ್ವಾಮಿಗಳು, ಲೇಬಗೇರಿಯ ಅಯ್ಯಪ್ಪಯ್ಯ ಸ್ವಾಮಿಗಳು, ಶಾಡ್ಲಗೇರಿಯ ವಿರುಪಾಕ್ಷಯ್ಯ ಸ್ವಾಮಿಗಳು, ಲೇಬಗೇರಿಯ ನಾಗಮೂರ್ತಿ ಸ್ವಾಮಿ, ಹಿರೇಹಾಳಮಠದ ಶಿವಶಂಕರ ಸ್ವಾಮಿ, ಗಿಣಗೇರಿಯ ನರಸಿಂಹ ಸ್ವಾಮಿ ದಿವಾಕರ ಸ್ವಾಮಿ, ಕಾತರಕಿ-ಗುಡ್ಲಾನೂರಿನ ವಿರುಪಾಕ್ಷಯ್ಯ ಸ್ವಾಮಿ ಅವರು ಸಾನಿಧ್ಯ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಖಂಡಿಯ ಸರ್ಕಾರಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಮಂಟೆಲಿಂಗಾಚಾರ ಅವರು ವಹಿಸಲಿದ್ದಾರೆ. ಉಪನ್ಯಾಸಕರಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿರೇಶ ಬಡಿಗೇರ ಅವರು ಆಗಮಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಸಂಗಣ್ಣ ಕರಡಿ, ಸಂಸದ ಶಿವರಾಮೇಗೌಡ, ಶಾಸಕರಾದ ಬಸವರಾಜ ರಾಯರೆಡ್ಡಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ವರವಿಯ ಶ್ರೀ ಮೌನೇಶ್ವರ ಟ್ರಸ್ಟ್‌ನ ಅಧ್ಯಕ್ಷ ಚಂದ್ರಕಾಂತ ಸೋನಾರ, ಉತ್ತರ ಕರ್ನಾಟಕ ವಿಶ್ವಕರ್ಮ ಸಮಾಜದ ರಾಯಚೂರು ಅಧ್ಯಕ್ಷ ಬಿ.ಚಂದ್ರಪ್ಪ, ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅಶೋಕ ವೇದಪಾಠಕ, ರಾಜ್ಯ ಮಾನವ ಹಕ್ಕು ಮಂಡಳಿ ಅಧ್ಯಕ್ಷ ಹಾಗೂ ವಿಜಾಪುರ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ ಬಡಿಗೇರ, ನಿಡಗುಂದಿಯ ಹನುಮಂತಪ್ಪ ಪತ್ತಾರ, ಕೆಪಿಟಿಸಿಎಲ್‌ನ ಇ.ಇ. ಎಂ.ಎಸ್.ಪತ್ತಾರ, ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಪ್ಪಣ್ಣ ಪದಕಿ, ಹಿರಿಯ ದಾನಿಗಳಾದ ವೀರಭದ್ರಪ್ಪ ಜಂತಕಲ್, ಮಂಜುನಾಥ ಬನ್ನಿಕೊಪ್ಪ ಸೇರಿದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಸಮಾಜದ ಅಧ್ಯಕ್ಷರು, ನೌಕರರು, ಸರ್ವ ಸದಸ್ಯರು, ಸಮಾಜದ ಗಣ್ಯರು ಆಗಮಿಸಲಿದ್ದಾರೆ ಎಂದು ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷರಾದ ರುದ್ರಪ್ಪ ಬಡಿಗೇರ ತಿಳಿಸಿದ್ದಾರೆ. 

Advertisement

0 comments:

Post a Comment

 
Top