PLEASE LOGIN TO KANNADANET.COM FOR REGULAR NEWS-UPDATES

 ಮುಖ್ಯಮಂತ್ರಿ ಸಿದ್ದರಾಮಯ್ಯರರು ಪರಿಷ್ಕೃತ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಬಜೆಟ್‌ನ ಮುಖ್ಯಾಂಶಗಳು:
 * ಧಾರವಾಡದಲ್ಲಿ IIIT ಸ್ಥಾಪನೆಗೆ 45 ಕೋಟಿ ರೂ. ಅನುಧಾನ
* ಉನ್ನತ ಶಿಕ್ಷಣಕ್ಕೆ - 3,243 ಕೋಟಿ ರೂ.ಅನುದಾನ
* ಪ್ರಾಥಮಿಕ ಶಿಕ್ಷಣ ಇಲಾಖೆಗೆ 15,680 ಕೋಟಿ
* ಸ್ಕೌಟ್ಸ್ ಆಂಡ್ ಗೈಡ್ಸ್‌ಗೆ 3 ಕೋಟಿರೂ.
* ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗಾಗಿ 100 ಕೋಟಿ ರೂ. ಅನುದಾನ
* ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ
* ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆಗೆ ಕ್ರಮ
* ರಾಜ್ಯದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಸ್ಥಾಪನೆ
* ಎಸ್‌ಸಿ/ಎಸ್‌ಟಿ ವಸತಿ ಶಾಲೆಗಳ ಮೂಲ ಸೌಕರ್ಯಕ್ಕೆ 100 ಕೋಟಿ ರೂ.
* 4 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
* ಮೀನುಗಾರರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಧನ 60 ಸಾವಿರದಿಂದ 1.2 ಲಕ್ಷಕ್ಕೆ ಏರಿಕೆ
* ಪ್ರಕೃತಿ ವಿಕೋಪದಿಂದ ಸಾವನ್ನಪ್ಪುವ ಕುರಿ, ಮೇಕೆ ಮಾಲೀಕರಿಗೆ 3000 ರೂ. ಸಬ್ಸಿಡಿ
* ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ 8 ಕೋಟಿ ರೂ.
* ಸರ್ಕಾರಿ ಜಮೀನು ಒತ್ತುವರಿ ವಿರುದ್ಧ ಕಠಿಣ ಕ್ರಮ
* ಸರಕಾರಿ ಆಸ್ಪತ್ರೆಗಳ ಆಧುನೀಕರಣ
* ಸ್ತ್ರೀಯರ ಮೇಲಿನ ದೌರ್ಜನ್ಯ ಇತ್ಯರ್ಥಕ್ಕೆ 10 ನ್ಯಾಯಾಲಯಗಳ ಸ್ಥಾಪನೆ

ಕಂದಾಯ ಇಲಾಖೆಯಿಂದ ಮನಸ್ವಿನಿ ಯೋಜನೆ:
*40 ವರ್ಷ ದಾಟಿದ ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ 500 ರೂ. ಮಾಸಾಶನ
* 4 ಕೋಟಿ ವೆಚ್ಚದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜು ಅಭಿವೃದ್ಧಿ
* ನೀರಾ ಬಳಕೆಗೆ ಅವಕಾಶ, ಅಬಕಾರಿ ನೀತಿ ಬದಲು
* ಮೈಸೂರಿನಲ್ಲಿ ವಕೀಲರ ಭವನ ನಿರ್ಮಾಣಕ್ಕೆ 2 ಕೋಟಿ ರೂ.
* ಸಾವಯವ ಕೃಷಿಗಾಗಿ 25 ಕೋಟಿ ರೂ. ಅನುದಾನ
* ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣ ಖರೀದಿಗಾಗಿ 150 ಕೋಟಿ ರೂ.
* ಲೈಂಗಿಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ಮಾಸಿಕ 500 ರೂ.
  ಚಿತ್ರಮಂದಿರಗಳಲ್ಲಿ ಸೇವಾ ಶುಲ್ಕ ಏರಿಕೆ.
*ಎಸಿ ಟಾಕೀಸ್ 1 ರಿಂದ 3 ರೂ ಗೆ ಟಿಕೆಟ್ ಬೆಲೆ ಏರಿಕೆ
* ಅಬಕಾರಿ ಸುಂಕದಿಂದ 12,600 ಕೋಟಿ ರೂ. ಸಂಗ್ರಹಣೆ ಗುರಿ
* ಒಟ್ಟಾರೆ ಕೃಷಿಗೆ 3065 ಕೋಟಿ ರೂ ಅನುದಾನ.
* ಶಾಲಾ ಮ್ಯಾಕ್ಸಿ ಕ್ಯಾಬ್ ಗಳಿಗೆ ಶೆ. 50 ತೆರಿಗೆ ವಿನಾಯಿತಿ.
* ಸಮಾಜ ಕಲ್ಯಾಣ 5046 ಕೋಟಿ ರೂ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣ 3466 ಕೋಟಿರೂ.
* ಕೃಷಿ ಮತ್ತು ತೋಟಗಾರಿಕೆಗೆ 4378 ಕೋಟಿ ರೂ.
* ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 1903 ಕೋಟಿ ರೂ.
* ಸಾರಿಗೆ, ಒಳಾಡಳಿತಕ್ಕೆ 5315 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 8218 ಕೋಟಿ ರೂ.
* ಶಿಕ್ಷಣ 18923 ಕೋಟಿ ರೂ.
* ವಾಣಿಜ್ಯ ಮತ್ತು ಕೈಗಾರಿಕೆ 885 ಕೋಟಿ ರೂ.
* ನಗರಾಭಿವೃದ್ಧಿ 9,286 ಕೋಟಿ ರೂ.
* ಲೋಕೋಪಯೋಗಿ 5,862 ಕೋಟಿ ರೂ.
* ಜಲಸಂಪನ್ಮೂಲ 9,363 ಕೋಟಿ ರೂ.
* ಆರೋಗ್ಯ ಇಲಾಖೆಗೆ 5,421 ಕೋಟಿ ರೂ.
* ಇಂಧನ 10312 ಕೋಟಿ ರೂ.
 ಅಬಕಾರಿ ಇಲಾಖೆಗೆ ಕಾಯಕಲ್ಪ
* ಅಬಕಾರಿ ಸುಂಕ ಶೇ. 16 ರಿಂದ 40ಕ್ಕೆ ಏರಿಕೆ
* ಪಿಗ್ಮಿ ಏಜೆಂಟರಿಗೆ ವಾರ್ಷಿಕ ಆದಾಯ ಮಿತಿ 36,000 ದಿಂದ 1.2 ಲಕ್ಷಕ್ಕೆ ಏರಿಕೆ
* ಹನಿ ನೀರಾವರಿಗೆ ಉತ್ತೇಜನ : ಪ. ಪಂಗಡದವರಿಗೆ ಶೇ. 90ರಷ್ಟು ಮತ್ತು ಇತರರಿಗೆ ಶೇ.70ರಷ್ಟು ಸಹಾಯಧನ
* ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು 1,000 ಕೋಟಿ ರೂ.ಆವರ್ತ ನಿಧಿ ಸ್ಥಾಪನೆ
* ಕಬ್ಬು ಖರೀದಿ ತೆರಿಗೆ ಪ್ರತಿ ಟನ್‌ಗೆ ಶೇ. 20 ಇಳಿಕೆ
* ಶೇ. 1.1ರಷ್ಟು ಸೆಸ್ ಇಳಿಕೆ- ಡೀಸೆಲ್ 50 ಪೈಸೆ ಅಗ್ಗ
* ಸಕ್ಕರೆ ಮೇಲಿನ ಪ್ರವೇಶ ತೆರಿಗೆ ಶೇ. 1ರಷ್ಟು ಇಳಿಕೆ
* 300 ರೂ ವರೆಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯಿತಿ.
* ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಆದ್ಯತಾ ವಲಯವಾಗಿದೆ.
* ಹಿಂದಿನ ಸರಕಾರದ ಕೃಷಿ ಬಜೆಟ್ ಸಮರ್ಪಕವಾಗಿರಲಿಲ್ಲ. ಅದರಿಂದ ಏನೂ ಸಾಧನೆಯಾಗಿಲ್ಲ.
* ಗೊತ್ತುಗುರಿಯಿಲ್ಲದ ಸಾಲವು ಆರ್ಥಿಕ ಹೊರೆಗೆ ಕಾರಣವಾಗುತ್ತದೆ.
* ಪ್ರಾಕೃತಿಕ ವಿಕೋಪದಿಂದ ರೈತರ ಬೆಳೆ, ಜಾನುವಾರುಗಳಿಗಾಗುವ ಹಾನಿಯ ಪರಿಹಾರಕ್ಕಾಗಿ ವಿಕೋಪ ಉಪಶಮನ ನಿಧಿ ಸ್ಥಾಪನೆ
* ಕನಿಷ್ಠ ಬೆಂಬಲ ಬೆಲೆಗಾಗಿ ಆವರ್ತ ನಿಧಿಯ ಮೌಲ್ಯ 1 ಕೋಟಿ ರೂ ಗೆ ಏರಿಕೆ
* 97,986 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ, 22,731 ಕೋಟಿ ರೂ. ಬಂಡವಾಳ ಗುರಿ
* 1,20,717 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ
* ಕೃಷ್ಣಾ, ಕಾವೇರಿ ನೀರಿನ ಸಂಪೂರ್ಣ ಸದ್ಬಳಕೆಯ ಗುರಿ, ಕೃಷಿಕರ ಆದಾಯ ಹೆಚ್ಚಿಸಲು ಕ್ರಮ       curt: varthabharati news

Advertisement

0 comments:

Post a Comment

 
Top