ಕೊಪ್ಪಳ : ಶ್ರೀ ಚಂದ್ರಲಾ ಗ್ರಾಮೀಣಾಭಿವೃದ್ದಿ ಹಾಗೂ ಶಿಕ್ಷಣ ಸಂಸ್ಥೆಯು ಏರ್ಪಡಿಸಿದ್ದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಮತ್ತು ಯುವಕರಿಗೆ ಕಂಪ್ಯೂಟರ್ ಹಾರ್ಡವೇರ್ ಕುರಿತು. ದಿನಾಂಕ ೧೫-೦೪-೨೦೧೩ ರಿಂದ ೩೧-೦೫-೨೦೧೩ ರ ವರೆಗೆ ಉಚಿತ ಕಂಪ್ಯೂಟರ ಶಿಕ್ಷಣ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ ೦೬-೦೬-೨೦೧೩ ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಆಚಾರ ಗ್ರಾಮಪುರೋಹಿತ್, ಉಪಾಧ್ಯಕ್ಷರಾದ ಮಂಜುನಾಥ ಕಡೆಮನಿ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಮಲ್ಲಿಕಾರ್ಜುನ ಖ್ಯಾದಿಗೆರಾ ಅಥಿತಿಗಳಾಗಿ ಗ್ರಾ. ಪಂ ಸದಸ್ಯರಾದ ಗೋವಿಂದರಾವ್ ಕುಲಕರ್ಣಿ, ಬ್ರಹ್ಮಸಮಾಜದ ಅಧ್ಯಕ್ಷರಾದ ಎನ್. ಕೆ. ದೀಕ್ಷಿತ್, ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಯುವಕರಿಗೆ ಕಂಪ್ಯೂಟರ್ ಹಾರ್ಡವೇರ್ ಬಗ್ಗೆ ತರಬೇತಿ ನೀಡಲಾಯಿತು.
ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಅಥಿತಿಗಳಿಂದ ವಿತರಿಸಿಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪ್ರದ್ಯುಮ್ನ ಅಗ್ನಿಹೊತ್ರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮಾಜ ಮುಖಿಯಾದ ಈ ಉಚಿತ ತರಬೇತಿ ಶಿಬಿರದ ಬಗ್ಗೆ ಮುಖ್ಯ ಅಥಿತಿಗಳು ಹಾಗೂ ಪಾಲಕರು ಶ್ಲಾ
ಘಿಸಿದರು. ಶಿಬಿರದ ತರಬೇತುದಾರರಾದ ಕುಮಾರಿ ಕೃತಿಕಾ ಪೂಜಾರ ಇವರನ್ನು ಸದಸ್ಯರಾದ ಭಾಮಾ ಕುಲಕರ್ಣಿ ವೇದಿಕೆಯಲ್ಲಿ ಸನ್ಮಾನಿಸಿದರು. ನಂತರ ಶಿಬಿರಾರ್ಥಿಗಳು ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಕೆ.ಆರ್. ಕುಲಕರ್ಣಿ ವಂದನಾರ್ಪಣೆ ಮಾಡಿದರು.
0 comments:
Post a Comment