ಕೊಪ್ಪಳ: ಪರಿಸರದ ಕಾಳಜಿ ಪ್ರತಿಯೊಬ್ಬರಿಗೂ ಅಗತ್ಯ ಎಂದು ಕೇಂದ್ರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರದ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಪರಿಸರ ಎಂಬುದು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು ಅದರ ಅರಿವು ಹಾಗೂ ಕಾಳಜಿಯ ಬಗ್ಗೆ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು,ಪರಿಸರವನ್ನು ರಕ್ಷಿಸಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ನಂತರ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಇಂದಿನ ದಿನಗಳಲ್ಲಿ ಸರಿಯಾದ ಮಳೆ-ಬೆಳೆ ಆಗದಿರುವುದು,ಜಾಗತಿಕ ತಾಪಮಾನದ ಏರಿಕೆಗೆ ಪರಿಸರದ ನಾಶವೇ ಮುಖ್ಯ ಕಾರಣವಾಗಿದೆ.ಮಾನವನು ಪರಿಸರವನ್ನು ಸಂರಕ್ಷಿಸದಿದ್ದರೆ ಖಂಡಿತಾವಾಗಿ ಅವನು ಕೂಡಾ ನಾಶವಾಗಿತ್ತಾನೆ ಅಲ್ಲದೆ ಶುದ್ದ ಗಾಳಿ,ನೀರು,ಆಹಾರ ಸರಿಯಾದ ರೀತಿಯಲ್ಲಿ ದೊರೆಯಬೇಕಾದರೆ ಪರಿಸರವನ್ನು ರಕ್ಷಣೆ ಮಾಡುವುದರೊಂದಿಗೆ ಅದನ್ನು ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಾಗಬೇಕು.ಸರ್ಕಾರವು ಕೂಡಾ ಹೆಚ್ಚಿನ ರೀತಿಯಲ್ಲಿ ಜಾಗೃತಿ ಜನರಲ್ಲಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸಾವಿತ್ರಿದಾಸ್,ವಾಣಿ,ಶಾಂತಾ,ಭಾರತಿ,ವಿಜಯಲಕ್ಷ್ಮಿ,ರಾಜೇಶ್ವರಿ,ಮೋಹಿನ ಪಾಷಾ,ಶಂಕ್ರಮ್ಮ,ಗೌಸಿಯಾಬೇಗಂ,ರತ್ನ,ಗಂಗಮ್ಮ ಮುಂತಾದವರು. ಕಾರ್ಯಕ್ರಮವನ್ನು ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ ನಿರೂಪಿಸಿದರು.ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ,ಗುರುರಾಜ ಕಟ್ಟಿ ಎಲ್ಲರಿಗೂ ವಂದಿಸಿದರು.
0 comments:
Post a Comment