ಕೊಪ್ಪಳ, ಜೂ. ೦೫ : ಅನಿಷ್ಠ ಪದ್ದತ್ತಿಯಿಂದ ದೇವದಾಸಿ ಮಹಿಳೆಯರು ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಲು ಸರಕಾರ ಶ್ರಮಿಸುತ್ತಿದೆ. ಅವರು ಆರ್ಥಿಕ ಸ್ವಾವಲಂಭಿಗಳಾಗಲು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಮಹಿಳಾ ಅಭಿವೃದ್ಧಿನಿಗಮದ ಯೋಜನಾಧಿಕಾರಿ ಸುಧಾ ಚಿದ್ರಿ ಅವರು ಹೇಳಿದರು.
ಅವರು ಮಂಗಳವಾರ ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ಯ ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಸಹಯೋಗದಲ್ಲಿ ಹುಲಿಗಿ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಅನಿಷ್ಟ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾ ತಂಡದ ನಾಯಕ, ಜಾನಪದ ಕಲಾವಿದ ವೈ. ಬಿ. ಜೂಡಿ ಅವರ ನಿದೇರ್ಶನದಲ್ಲಿ ಕಲಾವಿದರಾಗಿ ಲಲಿತವ್ವ ಪೂಜಾರ್, ಶಶಿಕಲಾ ಯಾಧವ, ಮಲ್ಲಪ್ಪ ಹೂಗಾರ, ಮಲ್ಲೇಶ ಬೀರನಾಯಕನಹಳ್ಳಿ, ಗ್ಯಾನೇಶ ಹಾಗೂ ಮಹ್ಮದ್ ಓಜನಹಳ್ಳಿ ಅಭಿನಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅನುಷ್ಠಾನಾಧಿಕಾರಿಗಳಾದ ಬೀಮಣ್ಣ ಗರಿಜಿನಾಳ, ದಾದ್ಯಾಸಾಬ, ಸ್ವಯಂಸೇವಕಿಯರಾದ ಹುಲಿಗೆಮ್ಮ ಗಂಗಾವತಿ, ಲಕ್ಷ್ಮಿ ಕನಿಕಗಿರಿ, ಗಂಗಮ್ಮ ಕರಕಿಹಳ್ಳಿ, ಶಿವಗಂಗಮ್ಮ ಕವಲೂರು ಸೇರಿದಂತೆ ಇತರರು ಇದ್ದರು.
0 comments:
Post a Comment