PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜೂನ್ ೨೪, ಪ್ರತಿವರ್ಷದಂತೆ ಈ ವರ್ಷವು ಸಹ ಕೊಪ್ಪಳದ ಶ್ರೀ ಶಿರಸಪ್ಪಯ್ಯ ಸ್ವಾಮಿ ಮಠದಲ್ಲಿ ಇರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ನಿಲಯಕ್ಕೆ ಸಮಾಜದ ಬಡ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ ಆಸಕ್ತಿ ಯುಳ್ಳವರು ಅರ್ಜಿಗಳನ್ನು ಕೊಪ್ಪಳದ ವಿಶ್ವಕರ್ಮ ವಿದ್ಯಾರ್ಥಿ ನಿಲಯದಲ್ಲಿ ಪಡೆಯಬಹುದಾಗಿದೆ. ವಿದ್ಯಾರ್ಥಿ ನಿಲಯಕಕೆ ಸೇರಬಯಸುವ ವಿದ್ಯಾರ್ಥಿಗಳು ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರನ್ನು ಬೇಟಿಯಾಗಿ ವಿಷಯವನ್ನು ತಿಳಿದುಕೊಳ್ಳಬಹುದು. 
ಸೇರಬಯಸುವ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದಿಂದ ಹಿಡಿದು ಪದವಿ ವರೆಗೆ ಅಥವಾ ಯಾವುದೇ ಕೋರ್ಸಗಳಲ್ಲಿ ಪಾಸಾಗಿರಬೇಕು. ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ. ಈಗಾಗಲೇ ವಿದ್ಯಾರ್ಥಿ ನಿಲಯವು ಪ್ರಾರಂಭವಾಗಿದ್ದು ಆಸಕ್ತರು ಈ ಕೆಳಗಿನವರನ್ನು ಸಂಪರ್ಕಿಸಲು ಕೋರಲಾಗಿದೆ. 
ಹಾಗೂ ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜ, ನೌಕರ ಸಂಘ, ಮತ್ತು ವಿದ್ಯಾರ್ಥಿ ನಿಲಯದ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೧-೦೭-೨೦೧೩ ರಂದು ಕೊಪ್ಪಳದ ಶ್ರೀ ಶಿರಸಪ್ಪಯ್ಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಸಮಾಜದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದಿಂದ ಹಿಡಿದು ಯಾವುದೇ ಕೋರ್ಸಗಳಲ್ಲಿ ಪ್ರಥಮ ವರ್ಗದಲ್ಲಿ ಪಾಸಾಗಿರಬೇಕು. ಅಂತಹ ವಿದ್ಯಾರ್ಥಿಗಳು ಪಾಸಾದ ಅಂಕಪಟ್ಟಿ, ಟಿಸಿ, ಪೋಟೋ, ವಾಸಸ್ಥಳದ ಸರ್ಟಿಪಿಕೇಟಗಳನ್ನು ಜರಾಕ್ಸ ಪ್ರತಿಯಲ್ಲಿ ಆಯಾ ತಾಲೂಕಿನ ಅಧ್ಯಕ್ಷರ ಸಹಿಯೊಂದಿಗೆ ದಿನಾಂಕ ೧೫/೦೭/೨೦೧೩ ರ ಇಳಗಾಗಿ ಕೊಪ್ಪಳದ ವಿದ್ಯಾರ್ಥಿ ನಿಲಯಕ್ಕೆ ಕಳುಹಿಸಿ ಕೊಡಲು ಕೋರಲಾಗಿದೆ. 
ಪ್ರಥಮ ವರ್ಗದಲ್ಲಿ ಪಾಸಾದವರಿಗೆ ಹಣದ ರೂಪದಲ್ಲಿ ಪುರಸ್ಕಾರ ಹಾಗೂ ನೆನಪಿನ ಕಲಾಣಿಕೆಗಳನ್ನು ಸಮಾಜದ ಬಂದುಗಳಿಂದ ವಿತರಿಸಲಾಗುವದು. ಕಾರಣ ಈ ಕೆಳಗಿನವರನ್ನು ಸಂಪರ್ಕಿಸಲು ತಿಳಿಸಲಾಗಿದೆ. 
೧.  ಶೇಖರಪ್ದಪ ಬಡಿಗೇರ ಅಧ್ಯಕ್ಷರು ತಾ.ವಿ.ಸ. ೯೫೩೫೧೮೩೯೯೮
೨. ಎ.ಪ್ರಕಾಶ ಅಧ್ಯಕ್ಷರು ವಿ.ವಿ.ನಿಲಯ ೯೮೪೫೮೯೩೦೨೫
೩. ರುದ್ರಪ್ಪ ಕೆ. ಬಡಿಗೇರ ಕಾರ್ಯದರ್ಶಿಗಳು ವಿ. ವಿ. ನಿಲಯ ೯೮೪೫೨೨೪೦೬೭

Advertisement

0 comments:

Post a Comment

 
Top