PLEASE LOGIN TO KANNADANET.COM FOR REGULAR NEWS-UPDATES

೧೯ ನೇ ದಿನದಲ್ಲಿ ಜಿಲ್ಲಾ ಆಡಳಿ ಕಛೇರಿ ಮುಂದೆ ಮುಂದುವರೆದ ಹಿಂದೂಸ್ಥಾನ ಕೊಕೊ-ಕೋಲಾ ಕಾಂಟ್ರ್ಯಾಕ್ಟರ ವರ್ಕರ್‍ಸ್ ಯೂನಿಯನಿನ ಕಾರ್ಮಿಕರು ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೆಟ್ಟಿಕೊಟ್ಟ ಡಾ|| ಲಕ್ಷ್ಮಿ ನಾರಾಯಣ ( ಪಿ.ಯೂ.ಸಿ.ಎಲ್.) ರಾಜ್ಯ ಪ್ರಧಾನ ಕಾರ್ಯದರ್ಶಿಗಳು  ಹೋರಾಟಕ್ಕೆ ಬೆಂಬಲಿಸಿ ಹೊಸದಾಗಿ ಅಸ್ಥಿತವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣಿಯದೆ ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಲು ಹೆಚ್ಚಿನ ಮುತವರ್ಜಿಯನ್ನು ವಹಿಸಿಬೇಕೆಂದು ಹೇಳಿದರು.  ಕಾರ್ಮಿಕರು ಹೋರಾಟದಿಂದ ಮಾತ್ರ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವೆಂದರು. ಕಾರ್ಮಿಕರ ಹಕ್ಕುಗಳು ಸೇರಿದಂತೆ ಶೋಷಿತ ಸಮುದಾಯದ ಯಾವುದೇ ಜನಾಗಂದ ಹಕ್ಕುಗಳು ಹರಣವಾದರೆ ಪಿ.ಯೂ.ಸಿ.ಎಲ್ ಹೊರಾಡಲು ಸದಾ ಸಿದ್ದವಾಗಿರುತ್ತದೆ ಎಂದು ಹೇಳಿದರು. 
ಪಿ.ಯೂ.ಸಿ.ಎಲ್. ಮಹಿಳಾ ಸಂಘದ ಉಪಾಧ್ಯಕ್ಷರಾದ ರತೀರಾವ್ ಗುತ್ತಿಗೆ ಕಾರ್ಮಿಕರ ಪದ್ದತಿಯಿಂದ ಕಾರ್ಮಿಕರಿಗೆ ಬಹಳ ತೋಂದರೆಯಾಗುತ್ತಿದೆ. ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಕೆಲಸ ಅಭದ್ರತೆ ನೆಪದಲ್ಲಿ ಹಲವಾರು ರೀತಿಯ ಕಿರುಕುಳ, ದೌರ್ಜನ್ಯ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಈ ಕಾರಣಗಳಿಂದ

ಗುತ್ತಿಗೆ ಕಾರ್ಮಿಕರ ಪದ್ದತಿಗಳನ್ನು ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
 ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಅಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ ಜಿಲ್ಲಾ ಆಡಳಿತ ಕೋಕೋ-ಕೊಲಾ ಕಾರ್ಮಿಕರ ಬೇಡಿಕೆಗಳನ್ನು ಆದಷ್ಟು ಶಿಘ್ರದಲ್ಲಿ ಪರಿಹರಿಸಲು ಮುಂದಾಗಬೇಕೆಂದು ಹೇಳಿದರು. ಸಂಘದ ಕಾನೂನು ಸಲಹೆಗಾರರಾದ  ಮಂಜುನಾಥ ಚಕ್ರಸಾಲಿ ಅವರು ಮಾತನಾಡಿ ಆದಷ್ಟು  ಬೇಗ ಈ ಕಾರ್ಮಿಕರ ಬೇಡಿಕೆಗಳನ್ನು  ಸಂಭಂದಪಟ್ಟ ಅಧಿಕಾರಿಗಳು ಬಗೆಹರಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ಹೋರಾಟ   ಮಾಡೋಣ ಎಂದು ಕಾರ್ಮಿಕರಲ್ಲಿ ದೈರ್ಯ ತುಂಬಿದರು. ಟಿ.ಯೂ.ಸಿ.ಐ ರಾಜಾಧ್ಯಕ್ಷರಾದ ಡಿ.ಹೆಚ್.ಪೂಜಾರ ಮಾತನಾಡಿ ಕಾರ್ಮಿಕ ಅಧಿಕಾರಿಗಳ ಸಲಹೆಯನ್ನು ಒಪ್ಪದ ಕೋಕೋ-ಕೊಲಾ ಆಡಳಿತ ಮಂಡಳಿಯ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಹೇಳಿದರು. ಈ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಎ.ಐ.ಸಿ.ಸಿ.ಟಿ.ಯೂ ರಾಜ್ಯಾಧ್ಯಕ್ಷರಾದ ಜೆ.ಭಾರದ್ವಜ, ಟಿ.ಯೂ.ಸಿ.ಐ ಜಿಲ್ಲಾಧ್ಯಕ್ಷರಾದ ಬಸವರಾಜ ನರೆಗಲ್ಲ, ಆರ್.ವಾಯ್. ಎಫ್.ಐ ರಾಜ್ಯ ಸಮಿತಿಯ ಸದಸ್ಯನಾದ ನಾಗರಾಜ ಪೂಜಾರ, ಸಂಘದ ಪದಾಧಿಕಾರಿಗಳಾದ ಎನ್.ರಾಘವೇಂದ್ರ ಇನ್ನೂ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.  

Advertisement

0 comments:

Post a Comment

 
Top