ನಗರದ ಕಾತರಕಿ ರಸ್ತೆಯಲ್ಲಿನ ಶಿರಸಪ್ಪಯ್ಯನ ಮಠದಿಂದ ಬೆಳೆಗ್ಗೆ ಆರಂಭವಾದ ರೋಡ್ ಶೋ ನಗರದ ಗಡಿಯಾರಕಂಬ, ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತದವರೆಗೂ ಜರುಗಿತು.
ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ರೋಡ್ ಶೋದಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಯ ಪರ ಜಯ ಘೋಷಗಳನ್ನು ಕೂಗಿದರು.
ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಕಾರ್ಯಕರ್ತರ ವಿಜಯದ ಹರ್ಷೋದ್ಘಾರಗಳ ಕರಾಡತನ ಮುಗಿಲು ಮುಟ್ಟಿತ್ತು. ಸುಮಾರು ೬೦ಕ್ಕೂ ಹೆಚ್ಚು ಅಲಂಕೃತವಾದ ಎತ್ತಿನ ಬಂಡಿಗಳು ರೋಡ್ ಶೋ ಮೆರವಣಿಗೆಯಲ್ಲಿ ಭಾಗವಹಿಸಿದ್ದು ರೋಡ್ ಶೋ ಗೆ ವಿಶೇಷ ಮೆರಗು ತಂದಿತು.
ನಂತರ ಅಶೋಕ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ, ರಾಘವೇಂದ್ರ ಹಿಟ್ನಾಳ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆಯಿರುವುದರಿಂದ ತಮ್ಮ ಗೆಲುವು ಖಚಿತವಾದಂತಿದೆ. ಕಳೆದ ೫ ವರ್ಷಗಳ ಬಿಜೆಪಿ ದುರಾಡಳಿತಕ್ಕೆ ಬೆಸತ್ತ ಜನತೆ ಇದಿಗ ಬಿಜೆಪಿ ಪಾಠ ಕಲಿಸಲು ಸಜ್ಜಾಗಿದ್ದಾರೆ. ಬಿಜೆಪಿಯಿಂದ ರೋಷಿ ಹೋಗಿರುವ ರಾಜ್ಯದ ಜನತೆ ಸಹಜವಾಗಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಎಂದರು.
ಕಾಂಗ್ರೆಸ್ ರೋಡ್ ಶೋದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಮುಖಂಡರಾದ ಎಸ್.ಬಿ ನಾಗರಳ್ಳಿ, ಜುಲ್ಲು ಖಾದ್ರಿ, ಎಚ್.ಎಲ್ ಹಿರೇಗೌಡ್ರ, ಸುರೇಶ ದೇಸಾಯಿ, ಅಂದಣ್ಣ ಅಗಡಿ, ಮಹೇಂದ್ರ ಛೋಪ್ರಾ, ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಭಾಗವಹಿಸಿದ್ದರು.
0 comments:
Post a Comment