ವಿಧಾನಸಭಾ ಚುನಾವಣೆಗೆ ಮತದಾನದ ಅವಧಿಯನ್ನು ಸಂಜೆ ೦೬ ಗಂಟೆಯವರೆಗೆ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ವಿಧಾನಸಭಾ ಚುನಾವಣೆಗೆ ಮತದಾನವು ಮೇ. ೦೫ ರಂದು ನಡೆಯಲಿದ್ದು, ಮತದಾನದ ಅವಧಿಯನ್ನು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೦೬ ಗಂಟೆಯವರೆಗೆ ನಡೆಸಲಾಗುವುದು. ಈ ಮೊದಲು ಮತದಾನ ಅವಧಿಯನ್ನು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಸಂಜೆ ೦೬ ಗಂಟೆಯವರೆಗೂ ಮತದಾನ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದಾಗಿ ಮತದಾನದ ಅವಧಿಯನ್ನು ಹೆಚ್ಚುವರಿಯಾಗಿ ಒಂದು ಗಂಟೆ ವಿಸ್ತರಿಸಿದಂತಾಗಿದೆ. ಮತದಾನದ ಅವಧಿ ವಿಸ್ತರಣೆಯ ಸೌಲಭ್ಯವನ್ನು ಎಲ್ಲ ಮತದಾರರೂ ಸದುಪಯೋಗಪಡಿಸಿಕೊಂಡು, ತಪ್ಪದೆ ಎಲ್ಲ ಮತದಾರರೂ ತಮ್ಮ ಅಮೂಲ್ಯ ಮತ ಚಲಾಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕೋರಿದ್ದಾರೆ.

0 comments:
Post a Comment