ಕೊಪ್ಪಳ : ಮತ ಎಣಿಕೆ ಫಲಿತಾಂಶ ವಿವರ
ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ಮೇ. ೦೫ ರಂದು ನಡೆದ ಮತದಾನದ ಫಲಿತಾಂಶ ಪ್ರಕಟಗೊಂಡಿದೆ. ಕೊಪ್ಪಳ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್-೦೩, ಬಿಜೆಪಿ-೦೧ ಮತ್ತು ಜೆಡಿಎಸ್-೦೧ ಸ್ಥಾನ ಗಳಿಸಿವೆ.
ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು,ಕುಷ್ಟಗಿ- ದೊಡ್ಡನಗೌಡ ಪಾಟೀಲ್ (ಬಿಜೆಪಿ)
ಕನಕಗಿರಿ- ಶಿವರಾಜ್ ತಂಗಡಗಿ (ಕಾಂಗ್ರೆಸ್)
ಗಂಗಾವತಿ- ಇಕ್ಬಾಲ್ ಅನ್ಸಾರಿ (ಜೆಡಿಎಸ್)
ಯಲಬುರ್ಗಾ- ಬಸವರಾಜ ರಾಯರೆಡ್ಡಿ (ಕಾಂಗ್ರೆಸ್) ಮತ್ತು
ಕೊಪ್ಪಳ- ಕೆ. ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್).
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರು ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗಿಂತ ೩೦೩೭ ಹೆಚ್ಚು ಮತಗಳಿಸಿ ಆಯ್ಕೆಯಾಗಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವರಾಜ್ ತಂಗಡಗಿ ಅವರು ಆಯ್ಕೆಯಾಗಿದ್ದು, ಕೆಜೆಪಿಯ ಬಸವರಾಜ ದಢೇಸೂಗೂರು ಅವರಿಗಿಂತ ೫೦೫೨ ಹೆಚ್ಚು ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರು ಬಿಜೆಪಿಯ ಪರಣ್ಣ ಮುನವಳ್ಳಿ ಅವರಿಗಿಂತ ೨೯೭೮೨ ಹೆಚ್ಚು ಮತಗಳಿಸಿ ಆಯ್ಕೆಯಾಗಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರು ಗೆಲುವು ಸಾಧಿಸಿದ್ದು, ಬಿಜೆಪಿಯ ಹಾಲಪ್ಪ ಆಚಾರ್ ಅವರಿಗಿಂತ ೧೬೯೦೦ ಹೆಚ್ಚು ಮತಗಳಿಸಿ ವಿಜೇತರಾಗಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಿಜೆಪಿಯ ಸಂಗಣ್ಣ ಕರಡಿ ಅವರಿಗಿಂತ ೨೬೭೯೧ ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ಅಭ್ಯರ್ಥಿಗಳು ಗಳಿಸಿದ ಮತಗಳ ವಿವರ ಈ ಕೆಳಗಿನಂತಿದೆ.
೬೦- ಕುಷ್ಟಗಿ ವಿಧಾನಸಭಾ ಕ್ಷೇತ್ರ
ಕ್ರಮ ಸಂಖ್ಯೆ ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತಗಳು ಫಲಿತಾಂಶ
೦೧ ಅಮರೇಗೌಡ ಪಾಟೀಲ ಬಯ್ಯಾಪುರ ಕಾಂಗ್ರೇಸ್ ೪೦೯೭೦
೦೨ ದೊಡ್ಡನಗೌಡ ಹನಮಗೌಡ ಪಾಟೀಲ ಬಿ.ಜೆ.ಪಿ. ೪೪೦೦೭ ಆಯ್ಕೆ
೦೩ ಕೆ. ಶರಣಪ್ಪ ವಕೀಲರು ಜೆ.ಡಿ.ಎಸ್. ೨೬೬೯೧
೦೪ ಶಿವಪುತ್ರಪ್ಪ ಗುಮಗೇರಿ ಬಿ.ಎಸ್.ಪಿ. ೮೩೩
೦೫ ಗೋನಾಳ ರಾಜಶೇಖರಗೌಡ ಬಿ.ಎಸ್.ಆರ್. ೧೭೫೪೩
೦೬ ಫಕೀರಪ್ಪ ಸೋಮಪ್ಪ ಚಳಗೇರಿ ಕೆ.ಜೆ.ಪಿ. ೧೪೪೨
೦೭ ಬಸವರಾಜ ಮರಿಯಪ್ಪ ಬುನ್ನಟ್ಟಿ ಸಿಪಿಐ (ಎಂಎಲ್) ರೆಡ್‌ಸ್ಟಾರ್ ೩೮೪
೦೮ ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಜೆ.ಡಿ.ಯು ೩೫೯
೦೯ ಅಬ್ದುಲ್ ನಯೀಮ್ ಪಕ್ಷೇತರ ೪೯೨
೧೦ ಪುರದಪ್ಪ ಕಂದಗಲ್ ವಕೀಲರು ಪಕ್ಷೇತರ ೧೪೯೬
೧೧ ಬಸವರಾಜ ನರಸಪ್ಪ ಬಿಲಕಾರ ಪಕ್ಷೇತರ ೫೦೯
೧೨ ಮರಿಯಪ್ಪ ಬಸಪ್ಪ ಮಡಿವಾಳರ ಪಕ್ಷೇತರ ೮೨೨
೧೩ ಲಕ್ಷ್ಮಣ ದುರುಗಪ್ಪ ತಳವಾರ ಪಕ್ಷೇತರ ೯೫೫
೧೪ ಹಿರೇಮಠ ಸಂಗಮೇಶ ಶೇಖರಯ್ಯ ಪಕ್ಷೇತರ ೧೭೪೩
(ಅಂಚೆ ಮತಪತ್ರಗಳು : ಒಟ್ಟು- ೯೯೨, ಅಂಗೀಕೃತ- ೯೦, ತಿರಸ್ಕೃತ- ೯೦೨)
೬೧- ಕನಕಗಿರಿ ವಿಧಾನಸಭಾ ಕ್ಷೇತ್ರ
ಕ್ರಮ ಸಂಖ್ಯೆ ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತಗಳು ಫಲಿತಾಂಶ
೦೧ ಅಕ್ಕಿರೊಟ್ಟಿ ಹುಲಗಪ್ಪ ಸಿ.ಪಿ.ಐ(ಎಂ) ೧೦೨೮
೦೨ ಪ್ರಕಾಶ್ ಎಲ್ ರಾಠೋಡ ಜೆ.ಡಿ.ಎಸ್. ೧೧೬೬
೦೩ ರಾಮಾನಾಯ್ಕ ಲಮಾಣಿ ಬಿ.ಜೆ.ಪಿ. ೨೯೪೮
೦೪ ಶಿವರಾಜ ಸಂಗಪ್ಪ ತಂಗಡಗಿ ಕಾಂಗ್ರೇಸ್ ೪೯೪೫೧ ಆಯ್ಕೆ
೦೫ ಶ್ರೀಧರ್ ಬಿ.ಎಸ್.ಪಿ. ೮೦೫
೦೬ ಎಂ. ಏಸಪ್ಪ ಸಿಪಿಐ (ಎಂಎಲ್) ಲಿಬರೇಷನ್ ೫೬೦
೦೭ ದ್ಯಾಮಮ್ಮ ಮಂಕಾಳೆಪ್ಪ ಚೌಡ್ಕಿ ಸಿಪಿಐ (ಎಂಎಲ್) ರೆಡ್‌ಸ್ಟಾರ್ ೭೫೧
೦೮ ಬಸರಾಜ ದಢೇಸೂಗೂರು ಕೆ.ಜೆ.ಪಿ. ೪೪೩೯೯
೦೯ ಭವಾನಿಮಠ ಮುಕುಂದರಾವ್ ಬಿ.ಎಸ್.ಆರ್. ೨೮೧೧೭
೧೦ ತಿಪ್ಪಣ್ಣ ವಿ. ಪಕ್ಷೇತರ ೧೦೬೨
೧೧ ನಾಗರಾಜ ತಿಪ್ಪಣ್ಣ ವಡ್ಡರ್ ಪಕ್ಷೇತರ ೫೫೮
೧೨ ಪಾಲಾಕ್ಷಯ್ಯ ಹಿರೇಮಠ ಪಕ್ಷೇತರ ೧೦೮೦
೧೩ ಮೋತಿಲಾಲ್ ನಾಯ್ಕ ರಾಠೋಡ್ ಪಕ್ಷೇತರ ೫೭೯
೧೪ ರಮೇಶ್ ಕೋಟಿ ಪಕ್ಷೇತರ ೧೫೨೪
೧೫ ವಿಠೋಬ ಬಾಲದಾಸಪ್ಪ ದಾಸರ ಪಕ್ಷೇತರ ೧೪೧೮
(ಅಂಚೆ ಮತಪತ್ರಗಳು : ಒಟ್ಟು- ೪೪೫, ಅಂಗೀಕೃತ- ೨೭, ತಿರಸ್ಕೃತ- ೪೧೮)
೬೨- ಗಂಗಾವತಿ ವಿಧಾನಸಭಾ ಕ್ಷೇತ್ರ
ಕ್ರಮ ಸಂಖ್ಯೆ ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತಗಳು ಫಲಿತಾಂಶ
೦೧ ಇಕ್ಬಾಲ್ ಅನ್ಸಾರಿ ಜೆ.ಡಿ.ಎಸ್. ೬೦೨೫೯ ಆಯ್ಕೆ
೦೨ ಪರಣ್ಣ ಮುನವಳ್ಳಿ ಬಿ.ಜೆ.ಪಿ. ೩೦೪೭೭
೦೩ ಎಚ್.ಆರ್. ಶ್ರೀನಾಥ ಕಾಂಗ್ರೇಸ್ ೨೦೨೩೧
೦೪ ಹುಲುಗಪ್ಪ ದೇವರಮನಿ ಬಿ.ಎಸ್.ಪಿ. ೭೪೯
೦೫ ಪಂಪನಗೌಡ್ರು ಪೋಲೀಸ್ ಪಾಟೀಲ್ ಬಿ.ಎಸ್.ಆರ್. ೩೦೧೨
೦೬ ಬಸವರಾಜ ಪಾಟೀಲ್ ಅನ್ವರಿ ಕೆ.ಜೆ.ಪಿ. ೭೦೫೬
೦೭ ಭಾರಧ್ವಜ ಸುಬ್ಬರಾವ್ ಸಿಪಿಐ (ಎಂಎಲ್) ಲಿಬರೇಷನ್ ೯೬೯
೦೮ ಕೆ. ವಿಜಯಕುಮಾರ್ ಪಿಪಿಐ (ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ) ೮೪೧
೦೯ ಶರಣಬಸಪ್ಪ ಎಸ್. ಪಾನಶಾಪ ಪಕ್ಷೇತರ ೧೬೪೨
(ಅಂಚೆ ಮತಪತ್ರಗಳು : ಒಟ್ಟು- ೬೮೪, ಅಂಗೀಕೃತ- ೧೦೮, ತಿರಸ್ಕೃತ- ೫೭೬)
೬೩- ಯಲಬುರ್ಗಾ ವಿಧಾನಸಭಾ ಕ್ಷೇತ್ರ
ಕ್ರಮ ಸಂಖ್ಯೆ ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತಗಳು ಫಲಿತಾಂಶ
೦೧ ಆಚಾರ ಹಾಲಪ್ಪ ಬಸಪ್ಪ ಬಿ.ಜೆ.ಪಿ. ೩೫೪೮೮
೦೨ ದುರಗಪ್ಪ ಅಯ್ಯಪ್ಪ ಹಾಳಕೇರಿ ಬಿ.ಎಸ್.ಪಿ. ೮೧೦
೦೩ ಜೆ.ಪಿ. ಪಂಪಾಪತಿ ಜೆ.ಡಿ.ಎಸ್. ೧೨೦೪೦
೦೪ ಬಸವರಾಜ ರಾಯರಡ್ಡಿ ಕಾಂಗ್ರೇಸ್ ೫೨೩೮೮ ಆಯ್ಕೆ
೦೫ ನವೀನ್ ಕುಮಾರ್ ಗುಳಗಣ್ಣವರ್ ಬಿ.ಎಸ್.ಆರ್. ಕಾಂಗ್ರೆಸ್ ೧೦೬೪೦
೦೬ ಸಿ.ಎಚ್. ಪಾಟೀಲ್ ಕೆ.ಜೆ.ಪಿ. ೧೦೨೧೨
೦೭ ಗಾಣಿಗೇರ ಮಲಕಾಜಪ್ಪ ಶಿವರುದ್ರಪ್ಪ ಪಕ್ಷೇತರ ೫೦೧
೦೮ ನಾಗರಾಜ ಕೊಳಜಿ ಪಕ್ಷೇತರ ೯೮೮೮
೦೯ ಶಿವಶಂಕರ ಲಿಂಗರಾಜ ದೇಸಾಯಿ ಪಕ್ಷೇತರ ೭೧೮
೧೦ ಶಿವಶಂಕ್ರಯ್ಯ ಬಳಿಗೇರಿಮಠ ಪಕ್ಷೇತರ ೧೨೩೩
೧೧ ಸಿದ್ದಪ್ಪ ಹಕ್ಕಿಗುಣಿ ಪಕ್ಷೇತರ ೭೯೩
೧೨ ಸೋಮಶೇಖರ ಟಿ.ಎಂ. ಪಕ್ಷೇತರ ೨೦೧೮
(ಅಂಚೆ ಮತಪತ್ರಗಳು : ಒಟ್ಟು- ೯೬೧, ಅಂಗೀಕೃತ- ೮೨೫, ತಿರಸ್ಕೃತ- ೧೩೬)
೬೪- ಕೊಪ್ಪಳ ವಿಧಾನಸಭಾ ಕ್ಷೇತ್ರ
ಕ್ರಮ ಸಂಖ್ಯೆ ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತಗಳು ಫಲಿತಾಂಶ
೦೧ ಕರಡಿ ಸಂಗಣ್ಣ ಅಮರಪ್ಪ ಬಿ.ಜೆ.ಪಿ. ೫೪೨೫೬
೦೨ ಪ್ರದೀಪ ವಿರುಪಾಕ್ಷಗೌಡ ಜೆ.ಡಿ.ಎಸ್. ೬೮೦೬
೦೩ ಕೆ. ರಾಘವೇಂದ್ರ ಹಿಟ್ನಾಳ ಕಾಂಗ್ರೇಸ್ ೮೧೦೪೭ ಆಯ್ಕೆ
೦೪ ಶಿವಕುಮಾರ ವಡೇರಹಳ್ಳಿ ಎನ್.ಸಿ.ಪಿ. ೧೩೩೩
೦೫ ಹಡಪದ ನಿರ್ಮಲ ಮಲ್ಲಿಕಾರ್ಜುನ ಬಿ.ಎಸ್.ಪಿ. ೬೧೧
೦೬ ನೆಕ್ಕಂಟಿ ನಾಗರಾಜ ಬಿ.ಎಸ್.ಆರ್. ೨೬೦೯
೦೭ ಮಂಜುನಾಥ ಚಕ್ರಸಾಲಿ ಸಿ.ಪಿ.ಐ (ಎಂ.ಎಲ್) ರೆಡ್‌ಸ್ಟಾರ್ ೫೯೯
೦೮ ಕೆ.ಎಂ. ಸೈಯದ್ ಕೆ.ಜೆ.ಪಿ. ೪೧೧೭
(ಅಂಚೆ ಮತಪತ್ರಗಳು : ಒಟ್ಟು- ೧೨೮೫, ಅಂಗೀಕೃತ- ೩೯, ತಿರಸ್ಕೃತ- ೧೨೪೬)
0 comments:
Post a Comment