PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಹನ್ನೇರಡನೇಯ ಶತಮಾನದಲ್ಲಿ ಸಾಮಾಜಿಕ,ಧಾರ್ಮಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನದೇಯಾದ ಕೊಡುಗೆಯನ್ನು ನೀಡಿ ಬಸವಣ್ಣ ಕಲ್ಯಾಣ ಕ್ರಾಂತಿಯ ಹರಿಕಾರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿನ ಸಂಘದ ಪ್ರಾದೇಶಿಕ ಕಛೇರಿಯಲ್ಲಿ ವಿಶ್ವಗುರು ಬಸವಣ್ಣನವರ ೮೮೦ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ವಿಶ್ವಗುರು ಬಸವಣ್ಣನವರು ತಮ್ಮ ವಚನ ಸಾಹಿತ್ಯದಿಂದ ಸಾಮಾನ್ಯ ಜನರಲ್ಲಿ ಜಾಗೃತಿ ಮುಡಿಸುವುದರೊಂದಿಗೆ,ಚಿಂತನಾಶೀಲರಾಗಿರುವಂತೆ ಮಾಡಿದ್ದರು.ಜಾತಿ,ಭೇದಬಾವ ಮುಖ್ಯವಲ್ಲ,ಭಕ್ತಿ ಹಾಗೂ ಜೀವನ ಮೂಖ್ಯ ಎಂದು ಸಾರಿದರು.ಕಾಯಕವೇ ಕೈಲಾಸ ಎಂಬುದು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸುವಂತೆ ಹೇಳುವುದರ ಜೊತೆಗೆ ಸರ್ವಧರ್ಮವನ್ನು ಪೋಷಿಸಿ ಕಲ್ಯಾಣ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಹೇಳಿದರು.
    ನಂತರ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಮಾತನಾಡಿ ಅನುಭವಮಂಟಪವನ್ನು ಸ್ಥಾಪಿಸಿ ಹಲವಾರು ನಾಯಕರು ಸೇರಿ ಜಗತ್ತಿನ ಆಗು-ಹೂಗುಗಳ ಕುರಿತು ಚರ್ಚಿಸಲು ಒಂದು ವೇದಿಕೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೇಲ್ಲದ ಬಸವಣ್ಣನವರ ಜೀವನ ಹಾಗೂ ಅವರ ಸಾಧನೆಯ ಕುರಿತು ವಿವರಿಸಿದರು.
  ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಗಂಗಾಧರ ಕಾತರಕಿ,ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಪಾಲ.ಬಿ.ಎಸ್.,ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕ್ಕಿ,ಕೊಪ್ಪಳ ತಾಲೂಕ ಸಂಘಟನಾ ಕಾರ್ಯದರ್ಶಿ ಟಿ.ಗೋವಿಂದಪ್ಪ,ಸಹ ಕಾರ್ಯದರ್ಶಿ ಶಂಕ್ರಮ್ಮ ರಾಜು ಬಂಗಾರಶೆಟ್ರು ಮುಂತಾದವರು ಹಾಜರಿದ್ದರು.
    ಕಾರ್ಯಕ್ರಮವನ್ನು ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ ನಿರೂಪಿಸಿದರು.
   ಕಾರ್ಯದರ್ಶಿ ನಾಗಪ್ಪ ಕಾತರಕಿ ಸ್ವಾಗತಿಸಿ,ಎಲ್ಲರಿಗೂ ವಂದಿಸಿದರು. 

Advertisement

0 comments:

Post a Comment

 
Top