ಕೊಪ್ಪಳ: ಇಂದಿನ ಆಧುನಿಕ ಶಿಕ್ಷಣದ ಫಲ ಶೃತಿಯಿಂದಾಗಿ ಪರಸ್ಪರರಲ್ಲಿ ಪ್ರೀತಿ,ವಿಶ್ವಾಸ, ನಂಬಿಕೆ ಹಾಗೂ ಮಾನವಿಯ ಮೌಲ್ಯಗಳು ಇಲ್ಲದಾಗಿವೆ. ಕಾಣದಾಗಿರುವ ಈ ಎಲ್ಲ ಮೌಲ್ಯಗಳನ್ನು ಸ್ವೀಕರಿಸಲು ಇಂದು ನಾವೆಲ್ಲ ಶರಣರ ವಚನ ಸಾಹಿತ್ಯವನ್ನು ಮನನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರು ನುಡಿದರು. ಅವರು ಶ್ರೀಗವಿಮಠದಲ್ಲಿ ಅಮವಾಸ್ಯೆಯ ಅಂಗವಾಗಿ ನಡೆದ ೪೪ ನೇಯ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ ಅಲ್ಲಮಪ್ರಭು, ಬಸವಣ್ಣ , ಅಕ್ಕಮಾದೇವಿ ಹಲವು ಶರಣರಿಂದಾಗಿ ವೈರಾಗ್ಯ, ಭಕ್ತಿ, ಕಾಯಕ, ಸಮಾನತೆ, ನಿಷ್ಠೆ, ದಾಸೋಹ ಮೊದಲಾದ ತತ್ವಗಳನ್ನು ಅರಿತಿದ್ಧೇವೆ. ಪ್ರಪಂಚದ ಯಾವ ಭಾಷೆಯಲ್ಲು ಇಂತಹ ಗಟ್ಟಿ ಸಾಹಿತ್ಯ ಸಿಗುವದಿಲ್ಲ. ಶರಣ ಸಾಹಿತ್ಯ ಮಾನವನ ಬದುಕನ್ನು ಹಸನು ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವರ್ತಕ ಶರಣಯ್ಯ ಕದ್ರಳ್ಳಿಮಠ ಶ್ರೀಗವಿಮಠದ ಈ ಸೇವೆ ಶ್ಲಾಘನೀಯ ಎಂದರು. ಇದೆ ಸಂಧರ್ಬದಲ್ಲಿ ವೀರಣ್ಣ ಹುರಕಡ್ಲಿಯವರ ಕತ್ತಲೆಯಿಂದ ಬೆಳಕಿನೆಡೆಗೆ ಪುಸ್ತಕ ಅತಿಥಿಗಳಿಂದ ಬಿಡುಗಡೆಯಾಯಿತು. ಕುಕನೂರಿನ ಅಕ್ಷತಾ ಬಣ್ಣದಬಾವಿಯವರಿಂದ ಸಂಗೀತ ಸೇವೆ ಜರುಗಿತು. ಕಾರ್ಯಕ್ರಮದ ಭಕ್ತಿ ಸೇವೆಯನ್ನು ದಿ.ಶಿದ್ದರಾಮಪ್ಪ ವೀರಪ್ಪ ಸವಡಿ ಇವರ ಸ್ಮರಣಾರ್ಥ ಡಾ.ಬಸವರಾಜ ಸವಡಿ ಪ್ರಾಚಾರ್ಯರ್ಯರು ಶ್ರೀಗವಿಸಿದ್ಧೇಶ್ವರ ಆಯುವೇದಿಕ್ ಮಹಾವಿದ್ಯಾಲಯ ಕೊಪ್ಫಳ ವಹಿಸಿದ್ದರು. ಅಪಾರ ಜನಸ್ತೋಮ ಭಾಗವಹಿಸಿದ್ದರು
Home
»
»Unlabelled
» ಶರಣ ಸಾಹಿತ್ಯ ಮಾನವನ ಬದುಕನ್ನು ಹಸನು ಮಾಡುವಲ್ಲಿ ಸಹಾಯ ಮಾಡುತ್ತದೆ ಡಾ.ಡೋಣೂರು
Subscribe to:
Post Comments (Atom)
0 comments:
Post a Comment