ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಗಿಣಗೇರಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಲಂಬಾಣಿ ತಾಂಡದ ಕಾಂಗ್ರೆಸ್ ಮತ್ತು ಜೆ.ಡಿಎಸ್ ನ ನೂರಾರು ಕಾರ್ಯಕರ್ತರು ಪಕ್ಷ ತೋರೆದು ಅಧಿಕೃತವಾಗಿ ಬಿ.ಎಸ್. ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನೆಕ್ಕಂಟಿ ನಾಗರಾಜ, ಬಿ.ಎಸ್ ಆರ್ ಕಾಂಗ್ರೆಸ್ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ರವರ ಸಮ್ಮುಖದಲ್ಲಿ ದೇವರಾಜ ಲಮಾನೀಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸೇರ್ಪಡೆಗೊಂಡರು.
ಭಾಗ್ಯನಗರ :
ನಗರದ ಸಮೀಪದ ಭಾಗ್ಯನಗರ ಗ್ರಾಮದ ೫, ೬ ಮತ್ತು ೭ ನೇ ವಾರ್ಡಿನ ನೂರಾರು ಕಾರ್ಯಕರ್ತರು ಬಿ.ಎಸ್ ಆರ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಬಿ.ಎಸ್.ಆರ್ ಕಾಂಗ್ರೆಸಿನ ಸಂಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮುಲುರವರ ಸಮಾಜಿಕ ಕಳಕಲೀ ಜನಪರ ಯೋಜನೆಗಳನ್ನು ಮೆಚ್ಚಿ, ಕ್ಷೇತ್ರದ ಜನತೆ ಪಕ್ಷಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಪಕ್ಷಕ್ಕೆ ದಿನದಿಂದ ದಿನಕ್ಕೆ ಆನೆ ಬಲ ಬಂದತ್ತೆಯಾಗಿದೆ. ಎಂದು ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ರವರು, ಪಕ್ಷದ ಮುಖಂಡರಾದ ತಿಮ್ಮಪ್ಪ, ಶಿಲ್ಪಾ ಸಂಗಮ, ಶಾಂತಾ ನಾಯಕ ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
0 comments:
Post a Comment