ಕೊಪ್ಪಳ, ೧೭- ಜನಸಂಗ್ರಾಮ ಪರಿಷತ್ ರಾಜ್ಯ ಸಂಚಾಲಕರು ಹಾಗೂ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡರಾಗಿರುವ ರಾಘವೇಂದ್ರ ಕುಷ್ಟಗಿಯವರು ಸುದ್ದಿಗೋಷ್ಠಿಯಲ್ಲಿ ೩೭೧ ನೇ ಕಲಂ ಹೋರಾಟಕ್ಕೆ ಬೆಂಬಲಿಸಿದ ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಹೇಳಿಕೆ ನೀಡಿರುವುದು ಅವರ ವೈಯಕ್ತಿಕವೇ ಹೊರತು ಒಟ್ಟಾರೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹೇಳಿಕೆಯಲ್ಲ ಎಂದು ಜಿಲ್ಲಾ ಹೈ-ಕ ಹೋರಾಟ ಸಮಿತಿ ಯುವ ಘಟಕ ಸ್ಪಷ್ಟಪಡಿಸಿದೆ.
೩೭೧ ನೇ ಕಲಂ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಪಕ್ಷ ಭೇಧ ಮರೆತು ಸಂಪೂರ್ಣ ಬೆಂಬಲ ನೀಡಿವೆ. ಹೀಗಾಗಿ ಹೈ-ಕ ಹೋರಾಟ ಸಮಿತಿ ಯಾವುದೇ ಒಂದು ಪಕ್ಷದ ಪರ ಮತ್ತು ವಿರುದ್ಧ ಅಲ್ಲ ಹೇಳಿಕೆ ಏನಿದ್ದರೂ ಅವರ ವೈಯಕ್ತಿಕವಾಗಿದೆ ಎಂದೂ ಹೈ-ಕ ಹೋರಾಟ ಸಮಿತಿ ಯುವ ಘಟಕದ ಜಿಲ್ಲಾಧ್ಯಕ್ಷ ರಮೇಶ ತುಪ್ಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅಂಗಡಿ, ಜಗದೀಶಗೌಡ ತೆಗ್ಗಿನಮನಿ, ಹುಲಗಪ್ಪ ಕಟ್ಟಿಮನಿ, ಬಸವರಾಜ ಶಿರಗುಂಪಿಶೆಟ್ಟರ್, ದೇವೆಂದ್ರಪ್ಪ ಹಿಟ್ನಾಳ, ಜಿಲ್ಲಾ ಸಂಚಾಲಕರಾದ ಶಿವಕುಮಾರ ಕುಕನೂರು, ಸಂತೋಷ ದೇಶಪಾಂಡೆ ತಿಳಿಸಿದ್ದಾರೆ.
0 comments:
Post a Comment